ಕಾಗವಾಡ

ಆಲಮಟ್ಟಿಯಿಂದ 2.50 ಕ್ಯೂಸೆಕ್ ನೀರು ಬಿಡುಗಡೆ: ತಹಶೀಲ್ದಾರ ರಾಜೇಶ ಬುರ್ಲಿ; ನದಿ ತೀರದ ಗ್ರಾಮಗಳಿಗೆ ಭೇಟ್ಟಿ..

ಆಲಮಟ್ಟಿಯಿಂದ 2.50 ಕ್ಯೂಸೆಕ್ ನೀರು ಬಿಡುಗಡೆ: ತಹಶೀಲ್ದಾರ ರಾಜೇಶ ಬುರ್ಲಿ; ನದಿ ತೀರದ ಗ್ರಾಮಗಳಿಗೆ ಭೇಟ್ಟಿ..

ಕಾಗವಾಡ 25:  ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಸುಮಾರು 1.80 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದು ಬುರುತ್ತಿದೆ. ಇಂದು ಬೆಳಿಗ್ಗೆಯಿಂದ ಆಲಮಟ್ಟಿ ಜಲಾಶಯದಿಂದ 2.50 ಕ್ಯೂಸೆಕ್‌ನಷ್ಟು ನೀರನ್ನು ಬಿಡಲಾಗುತ್ತಿದ್ದು, ತಾಲೂಕಿನಲ್ಲಿ ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಸಹ ನದಿ ತೀರದ ಗ್ರಾಮದ ಗ್ರಾಮಸ್ಥರು ಜಾಗೃತರಾಗಿರುವುಂತೆ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದ್ದಾರೆ. 

ಗುರುವಾರ ದಿ. 25 ರಂದು ತಾಲೂಕಿನ ಜುಗೂಳ, ಮಂಗಾವತಿ, ಶಹಾಪೂರ ಮತ್ತು ಬನಜನವಾಡ ಗ್ರಾಮಗಳ ನದಿ ತೀರಕ್ಕೆ ತಾಲೂಕಾ ನೊಡಲ್ ಅಧಿಕಾರಿ ಎಚ್‌.ಡಿ. ಕೋಳೆಕರ ಅವರೊಂದಿಗೆ ಭೇಟ್ಟಿ ನೀಡಿ, ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಸಧ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಸಹ ಮಳೆ ಇದೇ ರೀತಿ ಮುಂದುವರೆದರೇ ಪ್ರವಾಹ ಭೀತಿ ಎದುರಾಗಲಿದೆ. ಸಂಭ್ಯಾವ ಪ್ರವಾಹ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ನದಿ ದಡಕ್ಕೆ ಅನಾವಶ್ಯಕವಾಗಿ ಹೋಗಬಾರದು ಎಂದು ಸೂಚಿಸಿದರು. 

ಎಚ್‌.ಡಿ. ಕೋಳೆಕರ ಮಾತನಾಡಿ, ತಾಲೂಕಿನಲ್ಲಿ ಮಳೆ ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮುಂದುವರೆದರೇ ಮತ್ತು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆಯಾದರೇ ಪ್ರವಾಹ ಭೀತಿ ಎದುರಾಗಲಿದ್ದು, ಗ್ರಾಮಸ್ಥರು ಎಚ್ಚರವಹಿಸುವಂತೆ ಸೂಚನೆ ನೀಡಿದರು. ಮತ್ತು ಅಧಿಕಾರಿಗಳು ಸ್ಥಳದಲ್ಲಿ ಇದ್ದು, ಪ್ರವಾಹ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. 

ಈ ಸಮಯದಲ್ಲಿ ಜುಗೂಳ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಅಣ್ಣಾಸಾಬ ಪಾಟೀಲ, ಸುಧಾಕರ ಗಣೇಶವಾಡಿ, ಸುರೇಶ ಪಾಟೀಲ, ನೀತಿನ ಪಾಟೀಲ, ದಾದಾ ಅಂಬಿ, ಉಮೇಶ ಪಾಟೀಲ, ವಿಜಯ ಅಗಸರ, ಪ್ರಲ್ಹಾದ ಕೋಳಿ, ಮೈಬೂಬ ಕಿಲ್ಲೇದಾರ, ಕಲ್ಲಪ್ಪಾ ಶಿವರಾಯಿ, ರಾಜು ಪಾಟೀಲ, ಕಿರಣ ಪಾಟೀಲ, ತಾತ್ಯಾಸಾಬ ಜಾಧವ, ಪ್ರಮೋದ ಪಾಟೀಲ, ಸಂತೋಶ ಪಾಟೀಲ, ಬಾಳಗೌಡಾ ಪಾಟೀಲ, ಬಾಬಾಸಾಬ ಹುನ್ನರಗೆ, ಕಾಗವಾಡ ಪಿಎಸ್‌ಐ (ಅಪರಾಧ) ರಾಕೇಶ ಬಗಲಿ, ಕೃಷಿ ಇಲಾಖೆಯ ಅಧಿಕಾರಿ ಕಾಂತಿನಾಥ ಬಿರಾದರ ಸೇರಿದಂತೆ ಪೋಲಿಸ್ ಸಿಬ್ಬಂದಿ ವರ್ಗದವರು ಮತ್ತು ಜುಗೂಳ ಗ್ರಾ.ಪಂ. ಪಿಡಿಓ ಶೈಲಶ್ರೀ ಭಜಂತ್ರಿ ಹಾಗೂ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗದವರು ಜುಗೂಳ, ಮಂಗಾವತಿ, ಶಹಾಪೂರ ಗ್ರಾಮದ ಮುಖಂಡರು, ಉಪಸ್ಥಿತರಿದ್ದರು. 


ಸುದ್ದಿ ಓದಿ