ಉಗಾರ ಬುದ್ರುಕ ಒಂದೇ ದಿನ 18 ಸೋಂಕಿತರು ಪತ್ತೆ; ವಾರ್ಡ್ ಸಂಪೂರ್ಣ ಶೀಲ್‌ಡೌನ್
ಶೇಡಬಾಳ 28 ;- ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ವಾರ್ಡ್ 4 ರಲ್ಲಿ ಇಂದು ಒಂದೇ ದಿನ 18 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ಹಿತದೃಷ್ಟಿಯಿಂದ ಆ ವಾರ್ಡ್‌ನ್ನು ಗ್ರಾಮ ಪಂಚಾಯತಿಯವರು ಸಂಪೂರ್ಣ ಸೀಲ್‌ಡೌನ್ ಮಾಡಿದ್ದಾರೆ.
ಕಾಗವಾಡ ತಾಲೂಕು ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವದರಿಂದ ಅಲ್ಲಿಯ ಜನರೊಂದಿಗೆ ನೇರ ಸಂಪರ್ಕ ಹೊಂದಿರುವದರಿಂದ ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಉಗಾರ ಬಿಕೆ ಗ್ರಾಮದಲ್ಲಿ ಬುಧವಾರ ಒಂದೇ ದಿನ 18 ಸೋಂಕಿತರು ಪತ್ತೆಯಾಗಿದ್ದಾರೆ.
ಉಗಾರ ಬುದ್ರುಕ ಗ್ರಾಮದಲ್ಲಿ 18 ಸೋಂಕಿತರು ಪತ್ತೆಯಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾಗವಾಡ ತಹಸೀಲ್ದಾರ ಪರಿಮಳಾ ದೇಶಪಾಂಡೆ ಭೇಟ್ಟಿ ನೀಡಿ ಸುರಕ್ಷತಾ ದೃಷ್ಟಿಯಿಂದ ಗ್ರಾಮದ ತುಂಬೆಲ್ಲ ಫಾಗಿಂಗ್ ಮಾಡುವಂತೆ ಸೂಚನೆ ನೀಡಿದರು. ಮನೆ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಹೋಗಿ ಕೋವಿಡ್ ತಪಾಸನೆ ಮಾಡುವಂತೆ ಹೇಳಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ ಪಾಟೀಲ ಹಾಗೂ ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಚೌಗುಲೆ ಮಾತನಾಡಿ ಕೋವಿಡ್ ಸೋಂಕು ಪತ್ತೆಯಾದ 18 ಜನರನ್ನು ಹೋಂ ಐಶುಲೇಷನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ಓಷಧೋಪಚಾರ ಮಾಡಲಾಗಿದೆ. ಅವರು ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಗಿದೆ. ಆ 18 ಕುಟುಂಬಗಳಿಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದೆ ಎಂದು ತಿಳಿಸಿದರು.
ಮನೆಯಿಂದ ಹೊರ ಬರಬೇಡಿ;- ಕೋವಿಡ್ 2 ನೇ ಅಲೇ ಅತ್ಯಂತ ವೇಗವಾಗಿ ಹರಡುತ್ತಿರುವದರಿಂದ ಸರಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ ಪಾಟೀಲ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಚೌಗುಲೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್,ಎಸ್,ಧೂಳಗೌಡರ, ಕಾರ್ಯದರ್ಶಿ ಬಾಬುರಾವ್ ಐತವಾಡೆ, ಗ್ರಾಮ ಲೆಕ್ಕಾಧಿಕಾರಿ ರೆಡ್ಡಿ, ಆರೋಗ್ಯಾಧಿಕಾರಿ ಡಾ. ವೀಣಾ ಲೋಕುರ, ಭರತ ಗದಾಳೆ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಐಹೋಳೆ, ವಿಜಯ ಶಿಂಧೆ, ಮುನಾಫ ಚೌಧರಿ, ಅಮೀರ ಶೇಖ, ಉಮೇಶ ನಾಯಿಕ, ಶ್ರಾವಣ ಗೊಂಧಳಿ, ದೀಪಕ ಕಾಟಕರ ಸೇರಿದಂತೆ ಅನೇಕರು ಇದ್ದರು.