ಸೆಪ್ಟೆಂಬರ್ 17 ರಂದು ಭಗವಾನ್ ವಿಶ್ವಕರ್ಮ ಪ್ರಭುವಿನ ಜಯಂತೋತ್ಸವ
ರಾಣೇಬೆನ್ನೂರು 16: ನಗರದ ಕೆ. ಬಿ.ರಸ್ತೆಯ, ಮೌನೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ, ಸೆಪ್ಟೆಂಬರ್ 17,24 ರಂದು ಮಂಗಳವಾರ ಮುಂಜಾನೆ 10:30 ಗಂಟೆಗೆ ಶ್ರೀ ಭಗವಾನ್ ವಿಶ್ವಕರ್ಮ ಪ್ರಭುವಿನ ಜಯಂತೋತ್ಸವ ಧಾರ್ಮಿಕ ಸಮಾರಂಭವು ಜರುಗಲಿದೆ ಎಂದು ತಾಲೂಕ ವಿಶ್ವಕರ್ಮ ಸಮಾಜವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಚಿಕ್ಕುಂಬಿ ಕ್ಷೇತ್ರದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಕಾರ್ಯಕ್ರಮದಲಿ ಗಣಪತಾಚಾರ್, ಸುರೇಶಾಚಾರ್, ಕೇಶವಾಚಾರ್ ದಾಮೋದರಾಚಾರ್ ಉಪಸ್ಥಿತರಿ ರವರು. ಸಭಾ ಕಾರ್ಯಕ್ರಮಕ್ಕೂ ಮುನ್ನ, ಸೂರ್ಯೋದಯ ಕಾಲ ವಿಶ್ವಕರ್ಮ ಧ್ವಜಾರೋಹಣ, ಹೋಮ ಹವನ, ಪೂರ್ಣಾಹುತಿ ಜರುಗುವುದು. 10 ಗಂಟೆಗೆ ಮಿನಿ ವಿಧಾನಸೌಧದಲ್ಲಿ ಸರ್ಕಾರದ ಪೂಜಾ ಕಾರ್ಯಕ್ರಮ ನಡೆಯುವುದು. ನಂತರ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ, ಅರುಣಕುಮಾರ್ ಪೂಜಾರ, ತಹಸಿಲ್ದಾರ್ ಆರ್. ಎಚ್.ಭಾ ಗವಾನ್, ಸೇರಿದಂತೆ ಮೊದಲಾದವರು ಪಾಲ್ಗೊಳ್ಳುವರು. ಮಧ್ಯಾಹ್ನ 1-30 ಗಂಟೆಗೆ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಣೆಯಾಗಲಿದೆ.