ರಾಮ ಮಂದಿರ ನಿರ್ಮಾಣಕ್ಕಾಗಿ 15ಲಕ್ಷ ರೂ. ಚೇಕ್ ವಿತರಣೆ
ಕಾಗವಾಡ 27: ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರು ತಮ್ಮ ಇಲಾಖೆ ವತಿಯಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಶುಕ್ರವಾರ ಸಂಜೆ 15ಲಕ್ಷ ರೂ. ಚೇಕ್ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘ ಸಂಚಾಲಕ ಅರವಿಂದರಾವ ದೇಶಪಾಂಡೆ ಇವರಿಗೆ ನೀಡಿದರು.ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ದೇಶದ ಎಲ್ಲ ಹಿಂದೂ ಬಾಂಧವರ ಒಂದೇ ಒಂದು ಬೇಡಿಕೆಯಾಗಿರುವ ಆಯೋಧ್ಯಯಲ್ಲಿ ಭಗವಾನ್ ರಾಮ ಮಂದಿರ ಕಟ್ಟಿಸುವ ಕನಸ್ಸು ನನಸಾಗಲು ಸುಪ್ರೀಂ ಕೋರ್ಟ್ ಕಟ್ಟಡಕ್ಕೆ ಅನುಮತಿ ನೀಡಿದೆ. ಇಡೀ ವಿಶ್ವದಲ್ಲಿ ರಾಮ ಮಂದಿರದ ಸುಂದರ ಕಟ್ಟಡ ನಿರ್ಮಾಣವಾಗಬೇಕು. ಈ ಕಾರಣ ದೇಶದಲ್ಲಿ ಎಲ್ಲ ರಾಮಭಕ್ತರು ಹಣ ದಾನವಾಗಿ ನೀಡುತ್ತಿದ್ದಾರೆ. ಇದರಂತೆ ನಮ್ಮ ಇಲಾಖೆ ವತಿಯಿಂದ 15 ಲಕ್ಷ ರೂ. ಕರ್ನಾಟಕ ಉತ್ತರ ಪ್ರಾಂತ ಸಹ ಸಂಘ ಸಂಚಾಲಕರಾದ ಅರವಿಂದರಾವ ದೇಶಪಾಂಡೆ ಇವರ ಮುಖಾಂತರ ನೀಡುತ್ತಿದ್ದೇವೆ ಎಂದು ಹೇಳಿದರು.ಬಿಜೆಪಿ ಪಕ್ಷದ ಮುಖಂಡರಾದ ದಾದಾಗೌಡ ಪಾಟೀಲ, ಆನಂದರಾವ ಟೊನಪೆ, ಮಾರುತಿ ಮೊಹಿತೆ, ಸಂಜಯ ನಾಯಿಕ, ಅಣ್ಣಾಸಾಹೇಬ ನಾಯಿಕ, ಕಾಕಾಸಾಹೇಬ ಗುಡ್ಡಾಪುರ, ಮೋಹನ ಮುತಾಲಿಕ, ಮಹೇಶ ಮಮದಾಪುರೆ, ಸೇರಿದಂತೆ ಅನೇಕರು ಇದ್ದರು.