ತುರ್ತು ಪರಿಸ್ಥಿತಿಯಲ್ಲಿ 112ಕ್ಕೆ ಕರೆ ಮಾಡಿ: ಇನಾಮದಾರ
ಗೋಕಾಕ 22: ಪೋಲಿಸ್ ಇಲಾಖೆಯಿಂದ ಪ್ರತಿಯೊಬ್ಬರಿಗೂ ಸೂಕ್ತ ಸಮಯದಲ್ಲಿ ಸರಿಯಾದ ಸೇವೆಯೊದಗಿಸಲು 112 ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದಾಗಿದೆ ಎಂದು ಗೋಕಾಕ ಉಪವಿಭಾಗ ಡಿವೈಎಸ್ಪಿ ಜಾವೇದ ಇನಾಮದಾರ ಹೇಳಿದರು.
ಅವರು, ನಗರದ ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಾರ್ವಜನಿಕರು ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಸಹಾಯಪಡೆಯಬಹುದು.
ಗೋಕಾಕ ಉಪವಿಭಾಗ ವಲಯದ ಪೋಲಿಸ್ ಠಾಣೆಗಳಿಗೆ 6 ಸುಸಜ್ಜಿತ ವಾಹನಗಳನ್ನು ಸರಕಾರ ಹಂಚಿಕೆ ಮಾಡಿದ್ದು, ಈ ವಾಹನಗಳಿಗೆ ಬೆಳಗಾವಿ ಎಸ್ಪಿಯವರ ನೇತ್ರತ್ವದಲ್ಲಿ ಚಾಲನೆ ನೀಡಲಾಗುವದು. ತಮ್ಮ ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿದ ತಕ್ಷಣ, ಡಿಜಿಟಲ್ ನಕ್ಷೆಯ ಮುಖಾಂತರ ನಿಮ್ಮ ಸ್ಥಳವನ್ನು ಗುರುತಿಸಿ, ತುರ್ತುವಾಹನಗಳ ಮೂಲಕ ಕಡಿಮೆ ಸಮಯದಲ್ಲಿ ನಿವಿರುವ ಸ್ಥಳಕ್ಕೆ ಪೋಲಿಸ್ ಸಿಬ್ಬಂಧಿ ತಲುಪುತ್ತಾರೆ. ಇದರಿಂದ ಅಪರಾಧಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಠಾಣೆಯ ಸಹಾಯಕ್ಕಾಗಿ, ಅಗ್ನಿ ಅವಘಡ ಸೇರಿದಂತೆ ವಿಪತ್ತುಗಳು ಉಂಟಾದ ಸಂದರ್ಭದಲ್ಲಿ ಈ ಎಲ್ಲ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ 112 ಸಂಖ್ಯೆಗೆ ಡಯಲ್ ಮಾಡಿದರೆ 15 ಸೆಕೆಂಡುಗಳಲ್ಲಿ ತಮ್ಮ ಕರೆಗೆ ಸ್ಫಂದನೆ ಸಿಗಲಿದೆ ಎಂದು ಡಿವೈಎಸ್ಪಿ ಜಾವೇದ ಇನಾಮದಾರ ಹೇಳಿದರು.