ರಾಣೆಬೆನ್ನೂರ

ಶಿವಗಂಗಾ ಶಾಲೆಗೆ 100ರಷ್ಟು ಫಲಿತಾಂಶ: ವಿದ್ಯಾರ್ಥಿಗಳ ಸಾಧನೆ

ಶಿವಗಂಗಾ ಶಾಲೆಗೆ  100ರಷ್ಟು ಫಲಿತಾಂಶ: ವಿದ್ಯಾರ್ಥಿಗಳ ಸಾಧನೆ

ರಾಣೇಬೆನ್ನೂರ: ಮೆ 11-ನಗರ ಹೊರವಲಯದ ಶಿವಗಂಗಾ ಪಬ್ಲಿಕ್ ಶಾಲೆಗೆ ಈ  ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ . ಪರೀಕ್ಷೆಗೆ ಹಾಜರಾದ ಎಲ್ಲ  13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿವೇದಿತಾ ಕೋಟಿಹಾಳ್ ಶೇ.97, ಪ್ರಜ್ಞಾ ಕುಂದಾಪುರ ಶೇ.96, ಸುಹನ್ ಮುಲ್ಲಾ ಶೇ.87,ಸರಾಸರಿ ಫಲಿತಾಂಶ ಹೊಂದಿದ್ದಾರೆ. ಕಳೆದ ವರ್ಷವೂ ನೂರರಷ್ಟು ಫಲಿತಾಂಶ ಬಂದಿತ್ತು. ಉತ್ತೀರ್ಣರಾದ  ಎಲ್ಲಾ ವಿದ್ಯಾರ್ಥಿಗಳಿಗೂ, ಶ್ರಮಿಸಿದ ಶ್ರೀಕ್ಷಕರಿಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಚೈತ್ರಾ ಪಾಟೀಲ, ಕಾರ್ಯದರ್ಶಿ ಮಹೇಶ್ವರಗೌಡ ಪಾಟೀಲ್ ಮತ್ತು ಶಿಕ್ಷಕರು ಸಿಬ್ಬಂದಿಗಳು ಹಾರ್ದಿಕವಾಗಿ ಅಭಿನಂದಿಸಿ, ಶುಭ ಕೋರಿದ್ದಾರೆ. 


ಸುದ್ದಿ ಓದಿ