ಗುಳೇಗುಡ್ಡ

ಸಿಬಿಎಸ್‌ಇ ಗೆ 100 ರಷ್ಟು ಫಲಿತಾಂಶ

ಸಿಬಿಎಸ್‌ಇ ಗೆ 100 ರಷ್ಟು ಫಲಿತಾಂಶ

ಗುಳೇದಗುಡ್ಡ 05: ಪಟ್ಟಣದ ಶ್ರೀಹೋಳೆ ಹುಚ್ಚೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನೆಹರು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 2020-21 ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದೂ, ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ.  

ಶೇ.95.2  ಪಡೆದು ಪ್ರಜ್ಞಾ ಬಿ. ಪಾಟೀಲ್ ಪ್ರಥಮ ಸ್ಥಾನ, ಶೇ.94  ಪಡೆದು ನಂದಿನಿ ವೀರೇಶ ಚಿಂದಿ ದ್ವಿತೀಯ ಸ್ಥಾನ, ಶೇ..92  ಪಡೆದು ರಶ್ಮಿ ಸಿದ್ದಪ್ಪ ಪೂಜಾರಿ ತೃತೀಯ ಸ್ಥಾನ ಪಡೆದಿದ್ದಾರೆ. ಹಾಜರಾದ ಒಟ್ಟು 63 ವಿದ್ಯಾರ್ಥಿಗಳು ಉತ್ತಿರ್ಣರಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಮಾಡಿದ್ದಾರೆ. 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 37 ವಿದ್ಯಾರ್ಥಿಗಳು ಪ್ರಥಮ, 13 ವಿದ್ಯಾರ್ಥಿಗಳು ದ್ವಿತೀಯ, 05 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಮುಖ್ಯಗುರುಗಳು ತಿಳಿಸಿದ್ದಾರೆ.     


ಸುದ್ದಿ ಓದಿ