ಕಾಗವಾಡ

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಹರಿವು

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಹರಿವು

ನದಿ ತೀರದ ಗ್ರಾಮಗಳಿಗೆ ತಹಶೀಲ್ದಾರ ರಾಜೇಶ ಬುರ್ಲಿ ಭೇಟಿ: ಸೂಕ್ತ ಮುಂಜಾಗ್ರತೆ ಕ್ರಮಕ್ಕೆ ಸೂಚನೆ 

ಕಾಗವಾಡ 24: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಿಂದ 1.60 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಆಲಮಟ್ಟಿಯಿಂದ ಬಿಡಲಾಗುತ್ತಿದ್ದು, ಸದ್ಯೆಕ್ಕೆ ಪ್ರವಾಹ ಭೀತಿ ಇಲ್ಲದಿದ್ದರೂ ನದಿ ತೀರದ ಗ್ರಾಮಸ್ಥರು ಎಚ್ಚರ ವಹಿಸುವಂತೆ ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದ್ದಾರೆ. 

ಅವರು ಬುಧವಾರ ದಿ. 24 ರಂದು ತಾಲೂಕಿನ ಮೊಳವಾಡ-ಕುಸನಾಳ ಗ್ರಾಮಗಳ ನದಿ ತೀರಕ್ಕೆ ಭೇಟ್ಟಿ ನೀಡಿ, ಮಾತನಾಡುತ್ತಿದ್ದರು. ನದಿ ದಡಕ್ಕೆ ಯಾರೂ ಬಟ್ಟೆ ತೊಳೆಯಲು ಮತ್ತು ಜಾನುವಾರುಗಳನ್ನು ತೊಳೆಯಲು ಹೋಗಬಾರದು. ನದಿ ನೀರು ಇನ್ನಷ್ಟು ಹೆಚ್ಚಾದರೇ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ಮತ್ತು ಸ್ಥಳಾಂತರಕ್ಕಾಗಿ ಇರುವ ರಸ್ತೆಯನ್ನು ರೀಪೇರಿ ಮಾಡಲು, ಅಲ್ಲಿಯೇ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ರಸ್ತೆಯನ್ನು ಸುಗವಾಗಿಸಲು ಕ್ರಮಕೈಗೊಂಡರು.  

ಜನರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗಳ್ಳಲು ನೊಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಜಾಗೃತೆ ಕ್ರಮವಾಗಿ ನದಿ ತೀರದ ಗ್ರಾಮಗಳ ಜಾನುವಾರಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರಿಸಲು ಮತ್ತು ಅವುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಸೂಚಿಸಿದರು.  

ಈ ಸಮಯದಲ್ಲಿ ತಾ.ಪಂ. ಇಓ ಈರಣ್ಣಾ ವಾಲಿ, ಸಿಡಿಪಿಓ ಸಂಜೀವಕುಮಾರ ಸದಲಗಿ, ಪಿಡಿಓ ಯಶವಂತ ವಂಡಗೂಡೆ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಕಾಂಬಳೆ, ಅಧಿಕಾರಿಗಳಾದ ಅಮರ ಮೇತ್ರಿ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ