ಮಂಗಸೂಳಿಯ ಮಲ್ಲಯ್ಯ ದೇವಸ್ಥಾನ ಅಭಿವೃದ್ಧಿಗೆ 1.50 ಕೋಟಿ ರೂ ಅನುದಾನ ಮಂಜೂರು: ಸಚಿವ ಶ್ರೀಮಂತ
ಶೇಡಬಾಳ 25; ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ ಕಾಗವಾಡ ತಾಲೂಕಿನ ಸೂಕ್ಷೇತ್ರ ಮಂಗಸೂಳಿಯ ಮಲ್ಲಯ್ಯ (ಖಂಡೋಬಾ) ದೇವಸ್ಥಾನದ ಅಭಿವೃದ್ಧಿಗಾಗಿ 1.50 ಕೋಟಿ ರೂ ಅನುದಾನ ಮಂಜುರುಗೊಳಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಅವರು ಇಂದು ಮಂಗಸೂಳಿ ಮಲ್ಲಯ್ಯ(ಖಂಡೋಬಾ) ದೇವಸ್ಥಾನಕ್ಕೆ ಭೇಟ್ಟಿ ನೀಡಿ ದೇವರ ದರ್ಶನ ಪಡೆದು ದೇವಸ್ಥಾನದ ಟ್ರಸ್ಟಿಗಳು ಹಾಗೂ ಅರ್ಚಕರು ಮತ್ತು ಭಕ್ತ ಮಂಡಳಿಯ ಜೊತೆ ಚರ್ಚಿಸಿ ಕಾಮಗಾರಿ ನಿರ್ಮಿಸುವ ಸ್ಥಳ ಪರೀಶೀಲಿಸಿ ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜಾಗೃತ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಮಲ್ಲಯ್ಯ (ಖಂಡೋಬಾ)ಗೆ ಪ್ರತಿನಿತ್ಯ ಲಕ್ಷಾಂತರ ಸದ್ಭಕ್ತರು ದೇವರ ದರ್ಶನ ಪಡೆಯಲು ಆಗಮಿಸುತ್ತಾರೆ. ಈ ದೇಗುಲದ ಅಭಿವೃದ್ಧಿ ಪಡಿಸಬೆಕೆಂದ ಸಂಕಲ್ಪ ಹೊಂದಿದ್ದೆ, ಆ ಪ್ರಕಾರ 1.50 ಕೋಟಿ ಅನುದಾನ ಮಂಜೂರುಗೊಳಿಸಿದ್ದೇನೆ. ಇಲ್ಲಿ ಫೇವರ್ ಬ್ಲಾಕ್, ಅಳವಡಿಕೆ ಕಾಂಕ್ರೀಟ್ ರಸ್ತೆ ನಿರ್ಮಾಣ, 54 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಮಂದಿರದ ಅರ್ಚಕರ ಸಮಸ್ಯೆಗಳನ್ನು ಮಾಜಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ ವಿವರಿಸಿದರು.ಆಗ ಸಚಿವರು ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಟ್ರಸ್ಟಿಗಳಾದ ಉಜ್ವಲಸಿಂಹ ಪವಾರದೇಸಾಯಿ. ಮಯೂರಸಿಂಹ ಪವಾರದೇಶಾಯಿ, ವಿಕ್ರಾಂಸಿಂಹ ಪವಾರದೇಸಾಯಿ, ಮುಖಂಡರಾದ ರವೀಂದ್ರ ಪೂಜಾರಿ, ಅಭಯ ಪಾಟೀಲ, ಚಿದಾನಂದ ಮಾಳಿ, ಮುಕುಂದ ಪೂಜಾರಿ ಸಂಬಾಜಿ ಪಾಟೀಲ ಬಾಬಾಸಾಬ ಪಾಟೀಲ ಪುಂಡಲೀಕ ಪಾಟೀಲ, ಶಿವಾಜಿ ಪಾಟೀಲ, ಇಂಜನೀಯರುಗಳಾದ ಕೆ.ರವಿ, ಸಚಿವರ ಆಪ್ತ ಸಹಾಯಕರಾದ ಸಚೀನ ದೇಸಾಯಿ, ಪ್ರಶಾಂತ ಅಪರಾಜ, ವಿನಾಯಕ ಶಿಂಧೆ, ಸೇರಿದಂತೆ ಅನೇಕರು ಇದ್ದರು.