ನಾಡಕಚೇರಿ ಕಾರ್ಯಾಲಯದ ಉದ್ಘಾಟನೆ
ಕಾಗವಾಡ 27: ಕಾಗವಾಡ ಹೊಸ ತಾಲೂಕಾ ರಚನೆಗೊಂಡ ಬಳಿಕ ಕೆಲ ಇಲಾಖೆ ಕಚೇರಿಗಳು ಪ್ರಾರಂಭಗೊಳ್ಳಬೇಕಾಗಿದೆ. ಈಗಾಗಲೇ ರಾಜ್ಯ ಸರಕಾರದಿಂದ ಆದೇಶ ನೀಡಿದ್ದು, ಶೀಘ್ರದಲ್ಲಿ ತಾಲೂಕಿನ ಎಲ್ಲ ಕಚೇರಿ ವಿಭಾಗಗಳು ಪ್ರಾರಂಭಗೊಳ್ಳಲಿವೆಯೆಂದು ಕಾಗವಡ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರು ಹೇಳಿದರು.ಗಣರಾಜ್ಯೋತ್ಸವ ದಿನದಂದು ಕಾಗವಾಡದಲ್ಲಿ ಹೊಸದಾಗಿ ಕಟ್ಟಿಸಿದ ನಾಡಕಚೇರಿ ಕಾರ್ಯಾಲಯದ ಉದ್ಘಾಟನೆ ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಇವರ ಸಾನ್ನಿಧ್ಯದಲ್ಲಿ ಸಚಿವ ಶ್ರೀಮಂತ ಪಾಟೀಲರು ಉದ್ಘಾಟಿಸಿ ಚಾಲನೆ ನೀಡಿದರು.ಕಾಗವಾಡದಲ್ಲಿ ಸರಕಾರಿ ಕಚೇರಿಗಳು ಬಾಡಿಗೆ ಸ್ಥಳದಲ್ಲಿ ಪ್ರಾರಂಭಯಿವೆ. ಈ ಮುಂದೆ ಸ್ವತಂತ್ರ್ಯ ಸ್ಥಳದ ಅವಕಾಶ ಮಾಡಿಕೊಂಡು ಮಿನಿ ವಿಧಾನಸೌಧ ಕಟ್ಟಡ ಕಟ್ಟಿಸಿ ತಾಲೂಕಾ ಕಚೇರಿಗಳು ಒಂದೆಡೆ ಮಾಡುವದೊಂದಿಗೆ ಎಲ್ಲ ಜನರು ಒಂದೇ ಸ್ಥಳದಲ್ಲಿ ತಮ್ಮ ಕಾರ್ಯಕಲಾಪಗಳು ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುವದೆಂದು ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಸಚಿವರು ಹಾಗೂ ಸ್ವಾಮೀಜಿಯವರನ್ನು ಸನ್ಮಾನಿಸಿದರು.ಉದ್ಘಾಟನಾ ಸಮಾರಂಭದಲ್ಲಿ ತಾಲೂಕಾ ಪಂಚಾಯತಿ ಅಧ್ಯಕ್ಷೆ ಕೃಷ್ಣಾಬಾಯಿ ನಂದಾಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಹಿರಿಯ ಮುಖಂಡರಾದ ಸುಭಾಷ ಕಠಾರೆ, ಭರತೇಶ ಪಾಟೀಲ, ಎಂ.ಎನ್.ಮುನ್ನೋಳಿ, ಬಸವರಾಜ ನಂದಾಳೆ, ಅರುಣ ಜೋಶಿ, ಕರವೇ ಅಧ್ಯಕ್ಷ ಸಿದ್ದು ವಡೆಯರ, ಎಂ.ಆರ್.ಪಾಟೀಲ, ಬಸವರಾಜ ಬೋರಗಲ, ಮುಂತಾದವರು ಇದ್ದರು.