ಇಂಡಿ

ವೃದ್ಧೆಯ ಮನೆಯಲ್ಲಿ ಕಳ್ಳತನಗೈದು ಎಸ್ಕೇಪ್

ವೃದ್ಧೆಯ ಮನೆಯಲ್ಲಿ ಕಳ್ಳತನಗೈದು ಎಸ್ಕೇಪ್

ಇಂಡಿ: ಚಾಕು ತೋರಿಸಿ ವೃದ್ಧೆಗೆ ಹೆದರಿಸಿ ಕಳ್ಳನೋರ್ವ ವೃದ್ಧೆಯ ಮನೆಯಲ್ಲಿ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ. 

ಇಂಗಳಗಿ ಗ್ರಾಮದ ಮಲ್ಲಮ್ಮ ಎಂಬ 65 ವರ್ಷದ ವೃದ್ಧೆಯ ಮನೆಯಲ್ಲಿದ್ದ 1.5 ತೊಲಿ ಚಿನ್ನಾಭರಣ, ಬೆಳ್ಳಿಯ ಕಾಲುಂಗುರ, ಚೈನ್ ಹಾಗೂ 25 ಸಾವಿರಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾನೆ.  

ತಮ್ಮ ಮನೆಯ ಮುಂದಿನ ರಾಕೇಶ್ ಕಿರಣಗಿ ಉರ್ಫ ಶಿಂಧೆ ಕಳ್ಳತನ ಮಾಡಿದ್ದಾನೆ ಎಂದು ಮಲ್ಲಮ್ಮನ ಆರೋಪವಾಗಿದೆ. ಮನೆಯೊಳಗೇ ನುಗ್ಗಿದ ಕಳ್ಳ ವೃದ್ಧೆಗೆ ಬಟ್ಟೆಯಿಂದ ಬಾಯಿಗೆ ಕಟ್ಟಿ ಅಲಮಾರಿನಲ್ಲಿನ ಹಣ ಚಿನ್ನ ದೋಚಿದ್ದಾರೆ. ಮುಖಕ್ಕೆ ಕಟ್ಟಿದ ಬಟ್ಟೆಯನ್ನು ಸರಿಸಿ ವೃದ್ಧೆ ಕೂಗಲು ಪ್ರಯತ್ನಿಸಿದಾಗ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೊನೆಗೆ ಹೊಟ್ಟೆ ಮೇಲೆ ಕಾಲಿಟ್ಟು ಓಡಿ ಹೋಗಿದ್ದಾನೆ ಎಂದು ಮಹಿಳೆ ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 



ಸುದ್ದಿ ಓದಿ