ಶಾಸಕರ ಬೇನಾಮಿ ಆಸ್ತಿ ವಿರುದ್ಧ ಲೋಕಾಯುಕ್ತರಿಗೆ ದೂರು: ನಂದಿಹಳ್ಳಿಹಾಲಪ್ಪ
ಲೋಕದರ್ಶನ ವರದಿ
ಹೂವಿನಹಡಗಲಿ: ಕಳೆದ 10ವರ್ಷಗಳ ಹಿಂದೆ ಅವರು ಹೂವಿನಹಡಗಲಿಗೆ ಕ್ಷೇತ್ರಕ್ಕೆ ಬರುವ ಮುಂಚೆ ಅವರ ಆಸ್ತಿ ಎಷ್ಟಿತ್ತು,ಇದೀಗ ಎಷ್ಟಿದೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಾಗಬೇಕಾಗಿದೆ.ಅಭಿವೃದ್ದಿ ಹೆಸರಿನಲ್ಲಿ ಶಾಸಕರು ನೂರಾರು ಕೋಟಿ ಲೂಟಿ ಮಾಡಿ ಬೇನಾಮಿ ಆಸ್ತಿ ಮಾಡಿದ್ದಾರೆ.ಅವರ ಆಸ್ತಿ ತನಿಖಿಗೆ ಒತ್ತಾಯಿಸಿ ಲೋಕಾಯುಕ್ತ ಜಾರಿ ನಿದರ್ೇಶನಾಲಯಕ್ಕೆ ದೂರು ನೀಡುತ್ತೇವೆ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಡವರು,ಶೋಷಿತರ ಸೇವೆಗೆ ನಾವು ಪ್ರಾರಂಭಿಸಿರುವ ಕಾಯಕ ಭವನ ಮೇಲೆ ಅಧಿಕಾರಿಗಳ ಮೂಲಕ ದಾಳಿ ನಡೆಸಿದ ಶಾಸಕ ಪಿಟಿ.ಪರಮೇಶ್ವರನಾಯ್ಕ ಕುತಂತ್ರ ಬುದ್ಧಿ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕನಿಗೆ ಸೋಲಿನ ಭೀತಿಯಿಂದ ತಮ್ಮ ಅಧಿಕಾರ ದುರುಪಯೋಗಿಸಿಕೊಂಡು ಕಾಯಕ ಭವನದ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಇಂತಹ ಬೆದರಿಕೆ ತಂತ್ರಗಳಿಗೆ ನಾನು ಬಗ್ಗುವುದಿಲ್ಲ.ಸೂಕ್ತ ಸಂದರ್ಭದಲ್ಲಿ ಕ್ಷೇತ್ರದ ಜನರ ಮೂಲಕ ಅವರಿಗೆ ಉತ್ತರ ಕೊಡಿಸುವೆ ಎಂದರು.
2008ರಲ್ಲಿ ಹೂವಿನಹಡಗಲಿ ಬರುವಾಗ ಚುನಾವಣೆ ಸಂದರ್ಭದಲ್ಲಿ ಬರಿಗೈಲಿ ಬಂದಿದ್ದಾರೆ.ಇದೀಗ ಕಳೆದ 10ವರ್ಷಗಳಿಂದ ಈ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಬೆವರು ಸುರಿಸಿ ಇಲ್ಲಿಗೆ ಬಂದಿಲ್ಲ.ರಾಜಕಾರಣ,ತಂತ್ರ,ಪ್ರತಿತಂತ್ರ ಗೊತ್ತಿದೆ.ಇಲ್ಲಿನ ಮತದಾರರು ಪ್ರಬುದ್ದರಿದ್ದಾರೆ.ಅವರ ಸ್ವಾಭಿಮಾನ ಕೆಣಕಿದರೆ ಸ್ವಗ್ರಾಮಕ್ಕೆ ಕಳಿಸಲು ದಿನಗಣನೆ ಆರಂಭವಾಗುತ್ತದೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.