ವಿಶ್ವ ಅರಣ್ಯ ದಿನಾಚರಣೆ": ಅರಣ್ಯ ರಕ್ಷಣೆಯಲ್ಲಿ ನಮ್ಮ ರಕ್ಷಣೆ ಅಡಗಿದೆ: ಕುಲಕರ್ಣಿ
ಅಥಣಿ 29: ಅರಣ್ಯವನ್ನು ಕಾಪಾಡುವುದರಿಂದ ಅದು ನಮ್ಮನ್ನು ಕಾಪಾಡುತ್ತದೆ. ಅದಕ್ಕಾಗಿ ಪ್ರತಿವರ್ಷ ಅರಣ್ಯ ದಿನಾಚರಣೆಯ ಮೂಲಕ ಎಲ್ಲರಲ್ಲೂ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಡಾ. ಸುಹಾಸ ಕುಲಕರ್ಣಿ ಹೇಳಿದರು.
ಅವರು ಸ್ಥಳೀಯ ಜೆ. ಇ. ಸಂಸ್ಥೆಯ, ಕೆ.ಎ.ಲೋಕಾಪೂರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿನ ಯುಥ್ ರೆಡ್ ಕ್ರಾಸ್ ಹಾಗೂ ಇಕೋ ಕ್ಲಬ್ ನ ಸಂಯುಕ್ತಾಶ್ರಯದಲ್ಲಿ ನಡೆದ "ವಿಶ್ವ ಅರಣ್ಯ ದಿನಾಚರಣೆ" ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಏರುತ್ತಿರುವ ಭೂಮಿಯ ಉಷ್ಣತೆಗೆ ಸಸ್ಯ ಸಂಕುಲ ಉಳಿಸಿ ಬೆಳೆಸಿ ಸಂರಕ್ಷಿಸಬೇಕು. ಪಶ್ಚಿಮ ಘಟ್ಟದಲ್ಲಿ ಕೇವಲ ರಸ್ತೆಯ ಬದಿಗಷ್ಟೇ ಅರಣ್ಯ ಸೀಮಿತವಾಗದೇ ಎಲ್ಲ ಪ್ರದೇಶಗಳಲ್ಲಿಯೂ ಅರಣ್ಯೀಕರಣವಾದಾಗ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯವೆಂದ ಅವರು ಕೇವಲ ಕಾರ್ಯಕ್ರಮಗಳಿಗಾಗಿ ಸಸಿಗಳನ್ನು ನೆಡುವುದಾಗದೆ, ನೆಟ್ಟ ಸಸಿಗಳನ್ನು ಪೋಷಿಸುವಂತಹ ಜವಾಭ್ದಾರಿಯನ್ನೂ ಸಹ ಸರಿಯಾಗಿ ನಿರ್ವಹಿಸಿದಲ್ಲಿ ಮಾತ್ರ ನೆಟ್ಟ ಸಸಿಗಳು ಹುಲುಸಾಗಿ ಬೆಳೆಯಲು ಸಾಧ್ಯ ಎಂದರು.
ಆರ್.ಎಸ್.ಪಾಟೀಲ ಮಾತನಾಡಿ ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು ಅದಲ್ಲದೆ ಅನವಶ್ಯಕವಾಗಿ ಉಪಯೋಗಿಸುವ ಮೋಬೈಲಗಳಿಂದ ಕೂಡ ಪರಿಸರದ ಮೇಲೆ ಹಾಗೂ ಪುಟ್ಟ ಪುಟ್ಟ ಪ್ರಾಣಿ ಪಕ್ಷಿಗಳ ಜೀವದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಅವುಗಳನ್ನು ಸಂರಕ್ಷಿಸಲು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವ ಮೊಬೈಲ್ಗಳ ಬಳಕೆ, ಹೆಚ್ಚಿನ ಪ್ರಮಾಣದಲ್ಲಿ ಆಗುವ ಕಟ್ಟಡ ನಿಮರ್ಾಣ, ಹೆಚ್ಚಿನ ಪ್ರಮಾಣದಲ್ಲಿ ಕಾಕರ್ಾನೆಗಳಿಂದಾಗುವ ಪರಿಸರ ಮಾಲಿನ್ಯ ಇವೆಲ್ಲವುಗಳನ್ನು ತಡೆಯಲೇ ಬೇಕಾದ್ದು ಅನಿವಾರ್ಯ ಎಂದರು.
ಪಾಚಾರ್ಯ ಆರ್.ಎಮ್.ದೇವರಡ್ಡಿ ಮಾತನಾಡಿದರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಜಿ.ಎಮ್. ಕುಲಕಣರ್ಿ ಹಾಗೂ ಯುಥ್ ರೆಡ್ ಕ್ರಾಸ್ನ ಸಂಯೋಜಕ ಬಿ.ಪಿ.ಗುಂಡಾ ಉಪಸ್ಥಿತರಿದ್ದರು. ಆರ್.ಎಸ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಲ್. ನರಗಟ್ಟಿ ವಂದಿಸಿದರು. ಡಾ ಪ್ರಶಾಂತ ಮಗದುಮ್, ಆನಂದ ಹವಾಯಿ, ಸನಾಉಲ್ಲಾ ನಾಗಬಾವಡಿ, ಇಸ್ಮಾಯಿಲ ನಂದಗಡಕರ, ರಾಕೇಶ ಚೌಗಲೆ, ಮಂಜುನಾಥ ಸರೀಕರ, ಆರ್ ಎಸ್ ಕುಲಕಣರ್ಿ, ಆರ್ ಎಮ್ ಹೊನಮೋರೆ ಮುಂತಾದವರು ಉಪಸ್ಥಿತರಿದ್ದರು.