ರಾಣೆಬೆನ್ನೂರ

ಮಹಿಳೆ ದಿನಾಚರಣೆ: ಉಚಿತ ಹೊಲಿಗೆ ತರಬೇತಿ ಕೇಂದ್ರ

ಮಹಿಳೆ ದಿನಾಚರಣೆ: ಉಚಿತ ಹೊಲಿಗೆ ತರಬೇತಿ ಕೇಂದ್ರ

ರಾಣೇಬೆನ್ನೂರು10: ಮಹಿಳೆಯರು ಅಬಲೇಯರಲ್ಲ ಸದಾ ಕ್ರಿಯಾಶೀಲ ವ್ಯಕ್ತಿಗಳು, ಮಹಿಳೆಯರು ಮನಸ್ಸು ಮಾಡಿದರೆ ಸಮಗ್ರ ಕುಟುಂಬವನ್ನು ಮುನ್ನಡೆಸ ಬಲ್ಲಳು ಎಂದು ಪಿಕೆಕೆ ಇನ್ಸಿಯೇಟಿವ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಹೇಳಿದರು.

ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಗುರುವಾರ ಪಿಕೆಕೆ ಇನ್ಸಿಯೇಟಿವ್  ವತಿಯಿಂದ ನಿರುದ್ಯೋಗ ಮುಕ್ತ ರಾಣೇಬೆನ್ನೂರು ಅಭಿಯಾನದ ಅಂಗವಾಗಿ ಮಹಿಳೆ ದಿನಾಚರಣೆ ಪ್ರಯುಕ್ತ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ದುಡಿಯಲು ಸಾಕಷ್ಟು ಅವಕಾಶಗಳಿಗೆ ಅವುಗಳನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆದಾಗ ಮಾತ್ರ ಆರ್ಥಿಕವಾಗಿ ಸದೃಡರಾಗಲು ಸಾಧ್ಯ ಎಂದರು.ನಿರುದ್ಯೋಗ ಮುಕ್ತ ರಾಣೇಬೆನ್ನೂರು ಮಾಡಬೇಕೆಂದು ಕಳೆದ ಮೂರು ತಿಂಗಳಿಂದ ಈ ಯೋಜನೆ ಜಾರಿಗೆಗೊಳಿಸಿದ್ದೇವೆ. ನಗರದಲ್ಲಿ ಈಗಾಗಲೇ ಕಳೆದ ಹತ್ತು ವರ್ಷಗಳಿಂದ ಸಂಸ್ಥೆ ವತಿಯಿಂದ ನಿರಂತರ ಉಚಿತ ಹೊಲಿಗೆ ಶಿಬಿರ ನಡೆಯುತ್ತಾ ಬಂದಿದೆ. ಆದರೇ, ನಗರಕ್ಕೆ ಬಾರದೆ ಇರುವರಿಗೆ ತಾಲೂಕಿನ 28 ಗ್ರಾಪಂಗಳಲ್ಲಿ ಹೊಲಿಗೆ ಶಿಬಿರ ಆರಂಭಿಸಲಾಗಿದೆ. ಗ್ರಾಮೀಣ ಭಾಗದ  ಮಹಿಳೆಯರು ಇದರ ಸದುಯೋಗ ಪಡೆದುಕೊಳ್ಳಬೇಕು, ನಿರುದ್ಯೋಗ ಮುಕ್ತ ಮಹಿಳೆಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.

ಪೂರ್ಣಿಮಾ ಕೋಳಿವಾಡ, ಗ್ರಾಪಂ ಅಧ್ಯಕ್ಷ ನಿಂಗಪ್ಪ ವಗ್ಗನವರ, ಸದಸ್ಯರಾದ ಅಶೋಕ ಬಸನಗೌಡ, ನಂದಿತಾ ಮಠದ, ಮುಖಂಡರಾದ ಸುನೀತಾ ಬಾರ್ಕಿ , ಲಕ್ಷ್ಮೀ ಜಾಧವ, ಬಸವರಾಜಪ್ಪ ನಾಗರಾಜ್ಜಿ, ಹನುಮಂತಪ್ಪ ದೊಡ್ಡತಮ್ಮಣ್ಣನವರ, ಯಶವಂತ ಸೂವರ್ೆ, ಮಂಜುನಾಥ ಹಲವಾಗಲ, ಶೇಖಪ್ಪ ಸಣ್ಣಬೊಮ್ಮಾಜಿ, ಶೈಲಾ ಮಿಳ್ಳಿ, ನಂದಿತಾ ಮಠದ, ರೇಣುಕಾ ಕೊಪ್ಪದ, ಅಶೋಕ ಸೂರ್ವಿ , ಯಶವಂತ ಸೂರ್ವೇ , ಮಂಜುನಾಥ ಹಲವಾಗಲ, ಶೇಖಪ್ಪ ಸಣ್ಣಬೊಮ್ಮಾಜಿ, ಶೈಲಾ ಮಿಳ್ಳಿ, ನಂದಿತಾ ಮಠದ, ಅಶೋಕ ಬಸನಗೌಡ, ನಂದಿತಾ ಮಠದ, ರೇಣುಕಾ ಕೊಪ್ಪದ,ಸೇರಿದಂತೆ ಮತ್ತಿತರು ಇದ್ದರು 

ಸುದ್ದಿ ಓದಿ