ಹೂವಿನ ಹಡಗಲಿ

ಮತದಾರರ ತೀರ್ಪಿಗೆ ತಲೆ ಬಾಗುವೆ:ಶಾಸಕ ಪಿ.ಟಿ.ಪರಮೇಶ್ವನಾಯ್ಕ

ಮತದಾರರ ತೀರ್ಪಿಗೆ ತಲೆ ಬಾಗುವೆ:ಶಾಸಕ ಪಿ.ಟಿ.ಪರಮೇಶ್ವನಾಯ್ಕ

ಲೋಕದರ್ಶನ ವರದಿ

ಹೂವಿನಹಡಗಲಿ 13:ವಿಧಾನ ಸಭಾ ಚುನಾವಣೆಯ ಫಲಿತಾಂಶ ಯಾರು ನಿರೀಕ್ಷೆ ಮಾಡಿರಲಿಲ್ಲ. ಮತದಾರರ ತೀರ್ಪಿಗೆ ತಲೆ ಬಾಗುವೆ ನನ್ನ ಸೋಲಿಗೆ ನಾನೇ ಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಪಿ.ಟಿ.ಪರಮೇಶ್ವನಾಯ್ಕ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಎರಡು ಬಾರಿ ಶಾಸಕ,ಸಚಿವನಾಗಿ ಮಾಡಿದ ಅಭಿವೃದ್ದಿ ಕಾರ್ಯಗಳು ಮತ್ತು ನನ್ನ ಒಳ್ಳೆಯತನವನ್ನು ಮತದಾರರು ಗುರುತಿಸಲಿಲ್ಲ.ಹೊಸ ಮುಖ ಬಯಸಿದಂತೆ ಆಗಿದ್ದು, ನಮ್ಮ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಅವರಾರು ಆತಂಕ ಪಡಬಾರದು ಇನ್ನೂ ಪಕ್ಷವನ್ನು ಬಲಿಷ್ಠವಾಗಿ ಕಟ್ಟೋಣ ಎಂದರು.

ಇದೀಗ ನಮ್ಮದೆ ಕಾಂಗ್ರೆಸ್ ಸರ್ಕಾರ ರಚನೆ ಆಗಲಿದ್ದು ಸರ್ಕಾರ ಬರುವ ಸಂದರ್ಭದಲ್ಲಿ ಅಧಿಕಾರ ಕಳೆದು ಕೊಂಡಿದ್ದು ಬೇಸರ ತಂದಿದೆ. ಹೂವಿನಹಡಗಲಿ ಕ್ಷೇತ್ರದಲ್ಲಿ 7,1042 ಜನ ಮತದಾರರು ನನಗೆ ಮತ ನೀಡಿದ್ದಾರೆ ನಾನು ನಿಮ್ಮ ಜತೆಗೆ ಇದ್ದಾನೆ ನನ್ನ ಸೋಲಿಗೆ ನಾನು ಯಾರನ್ನೂ ದೂರುವುದಿಲ್ಲ ಎಲ್ಲದಕ್ಕೂ ನಾನೇ ಕಾರಣ ಎಂದರು. 



ಸುದ್ದಿ ಓದಿ