ಹೂವಿನ ಹಡಗಲಿ

ಹೊಳಗುಂದಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಹೊಳಗುಂದಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ

ಹೂವಿನಹಡಗಲಿ 18: ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.ವಿಶ್ವಕರ್ಮ ಜನಾಂಗದ ಆರಾಧ್ಯ ದೇವರಾದ  ಕಾಳಿಕಾಂಬ ಹಾಗೂ ವಿರಾಟ್ ವಿಶ್ವಕರ್ಮ ಸ್ವಾಮಿಯ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು. ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ದೂರಿಯಾಗಿ ನಡೆಯಿತು. 

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ವಿ.ಜಿ.ಬಡಿಗೇರ ಆಚಾರ್ಯ,ರಥ ಶಿಲ್ಪಿ ಮೌನೇಶ ಆಚಾರ್ಯ,ಹಾಲೇಶ,ಬಸವರಾಜ ಹಾಗೂ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಸ್ವರೂಪಾನಂದ, ರುದ್ರಗೌಡ ಸೇರಿದಂತೆ ಹೊಳಗುಂದಿ ಹಾಗೂ ಸುತ್ತಮುತ್ತಲಿನ ಗ್ರಾಮದ ವಿಶ್ವಕರ್ಮ ಬಂಧುಗಳು ಪಾಲ್ಗೊಂಡಿದ್ದರು.



ಸುದ್ದಿ ಓದಿ