ವೀರಗಂಗಾದರ ಭಗವತ್ಪಾದರ ಪುಣ್ಯಾರಾಧನಾ ಮಹೋತ್ಸವ
ಲೋಕದರ್ಶನ ವರದಿ
ಶಿಗ್ಗಾವಿ 15: ಪುಣ್ಯಕ್ಷೇತ್ರ ಮುಕ್ತಿಮಂದಿರದಲ್ಲಿ ನಡೆದ ಬಾಳೆಹೊನ್ನೂರ ಶ್ರೀಮದ ರಂಭಾಪೂರಿ ವೀರಸಿಂಹಾಸನಾದೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾರ್ಚಯಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮುಕ್ತಿ ಮಂದಿರಧರ್ಮಕ್ಷೇತ್ರದ ಪಟ್ಟಾಧ್ಯಕ್ಷರು ಅಖಿಲ ಭಾರತ ವೀರಶೈವ ಶಿವಾರ್ಚಯ ಸ್ವಾಮಿಗಳವರ ನೇತೃತ್ವದಲ್ಲಿ ರಂಭಾಪೂರಿ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾದರ ಭಗವತ್ಪಾದರ 40ನೇ ಪುಣ್ಯಾರಾಧನಾ ಮಹೋತ್ಸವ ನಿಮಿತ್ಯ ಹಾಗೂ ರಂಭಾಪೂರಿ ವೀರಗಂಗಾಧರ ಜಗದ್ಗುರಗಳವರ ಮಹಾಮೂರ್ತಿ ಯ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಕಲಾದಗಿ ಪಂಚಗ್ರಹ ಹಿರೇಮಠದ ಲಿಂಗೈಕ್ಯ ಚಂದ್ರಶೇಖರ ಶಿವಾರ್ಚಯ ಸ್ವಾಮಿಗಳವರ 7 ನೇ ವರ್ಷದ ಪುಣ್ಯಸ್ಮರಣೋತ್ಸವ ಧರ್ಮಸಭೆಯಲ್ಲಿ ತಾಲೂಕಿನ ಸಮಾಜ ಸೇವಕ ಶಶಿಧರ ಯಲಿಗಾರ ಅವರಿಗೆ ರಂಭಾಪೂರಿಜಗದ್ಗುರು ವೀರಗಂಗಾಧರ ಪ್ರಶಸ್ತಿ ಪ್ರಧಾನ ಮಾಡಲಾಯಿತು ನಂತರ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿ ನಾನು ಭೂಮಿಯ ಮೇಲೆ ಇರುವವರೆಗೂ ನನಗೆ ಕೈಲಾದ ಮಟ್ಟಿಗೆ ಸಮಾಜ ಸೇವೆಯನ್ನು ಮಾಡುತ್ತೇನೆಅಲ್ಲದೇ ನನಗೆ ಕೋವಿಡ್ ಸಮಯದಲ್ಲಿ ಪುರ್ನಜನ್ಮವಾಗಿದ್ದರಿಂದ ನಾನು ಗಳಿಸಿದ ಸಂಪತ್ತನ್ನು ಬಿಟ್ಟು ಹೋಗದೇಕೊಟ್ಟು ಹೋಗುತ್ತೇನೆಎಂದು ಹೇಳಿದರು.