ಮೆಡ್ಲೇರಿ ಗ್ರಾಮದಲ್ಲಿ ವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಅನಾವರಣ
ಲೋಕದರ್ಶನ ವರದಿ
ರಾಣೆಬೆನ್ನೂರು 25: ತಾಲೂಕಿನ ಇತಿಹಾಸ ಪ್ರಸಿದ್ಧ ಬೀರಲಿಂಗೇಶ್ವರ ಸ್ವಾಮಿಯು ಸೇರಿದಂತೆ ಹಲವು ದೇವಾನುದೇವತೆಗಳ ಧಾಮರ್ಿಕ ಸಂಗಮ ತಪೋಭೂಮಿ, ಮೇಡ್ಲೇರಿ ಗ್ರಾಮದಲ್ಲಿ, ಸೆಪ್ಟೆಂಬರ್ 29 ರಂದು ಗುರುವಾರ ಮಧ್ಯಾನ 11ಗಂಟೆಗೆ, ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂತರ್ಿಯ ಅನಾವರಣ ಮತ್ತು ಧರ್ಮ ಜಾಗೃತಿ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಂದ್ರು ಪೂಜಾರ್ ಹೇಳಿದರು.
ಅವರು ಶನಿವಾರ ಮುಂಜಾನೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 27ರಂದು ಮಂಗಳವಾರ ಮುಂಜಾನೆ 11 ರಿಂದ ರಾತ್ರಿ 10 ರವರೆಗೆ ಗ್ರಾಮದಲ್ಲಿ ನೂತನ ಕಂಚಿನ ಮೂರ್ತಿಯ ಭವ್ಯ ಮೆರವಣಿಗೆಯು ನಡೆಯಲಿದೆ. ಬುಧವಾರ 28ರಂದು ಸಂಜೆ 5ರಿಂದ ರಾತ್ರಿ ಹತ್ತರವರೆಗೆ, ಹೋಮ ಹವನ ಪೂಜೆ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಲಿವೆ 29ರಂದು ನಡೆಯುವ ಮುಖ್ಯಕಾರ್ಯಕ್ರಮದಲ್ಲಿ, ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಅವರು ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿವರು. ಶಾಸಕ ಅರುಣ್ ಕುಮಾರ್ ಪೂಜಾರ್ ಧರ್ಮ ಸಮಾರಂಭ ಉದ್ಘಾಟಿಸುವರು. ವರ್ತಕ ಜಟ್ಟೆಪ್ಪ ಕರೆಗೌಡ್ರ, ಸಂತೋಷ್ ಕುಮಾರ್ ಪಾಟೀಲ್, ಮಂಜುನಾಥಗೌಡ ಶಿವಣ್ಣನವರ, ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಷಣ್ಮುಖಪ್ಪ ಕಂಬಳಿ, ಮಾಳಪ್ಪ ಪೂಜಾರ, ಚೋಳಪ್ಪ ಕಸವಾಳ್, ನಿಂಗರಾಜ ಕೋಡಿಹಳ್ಳಿ, ಕುಬೇರಪ್ಪ ಕೊಂಡಜ್ಜಿ, ಆನಂದ ಹುಲಬನ್ನಿ, ಬಸವರಾಜ ಹುಲ್ಲತ್ತಿ, ಉಮೇಶ್ ಕೆಂಪ ಹಾಲಪ್ಪನವರ್, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು