ತುಮ್ಮಿನಕಟ್ಟಿ ಪದ್ಮಸಾಲಿ ಗುರು ಮಠದಲ್ಲಿ ವಿಜಯದಶಮಿ
ರಾಣೆಬೆನ್ನೂರು 06: ಸಮಾಜವು ವೇದ ಇತಿಹಾಸ ಕಾಲಗಳಿಂದಲೂ ಧರ್ಮ ಮತ್ತು ಸಂಸ್ಕಾರವಂತರಾಗಿ, ಬಾಳಿ ಬದುಕಿದವರಾಗಿದ್ದಾರೆ. ಯುವ ಜನಾಂಗ ಧರ್ಮ ನೀತಿವಂತರಾಗಿ ಇತಿಹಾಸದ ಪರಂಪರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವದರ ಮೂಲಕ ಸಮಾಜ ಮುಖಿಯಾಗಿರಬೇಕು ಎಂದು ಶ್ರೀಸ ದಾನಂದ ಸ್ವಾಮಿಗಳು ನುಡಿದರು ಅವರು ಬುಧವಾರ ಸಂಜೆ ತುಮ್ಮಿನಕಟ್ಟಿ ಗ್ರಾಮದ ದೇವಸ್ಥಾನದಲ್ಲಿ ನಡೆದ ವಿಜಯದಶಮಿ ನಿಮಿತ್ತ ಮುತ್ತೈದೆಯರಿಗೆ ಸಾಮೂಹಿಕ ಉಡಿತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಗುರುಮಠ ಮಹಾಸಂಸ್ಥ ಚಂದ್ರಶೇಖರ ಮಂಚಿ,ಕಾರ್ಯಕ್ರಮ ನೆರವೇರಿಸಲಾಯಿತು. ಗೋಪಾಲಪ್ಪ ಪದ್ದಿಪತಿ, ಪದ್ಮಶಾಲಿ ಸಮಾಜದ ಮಾತೇಯರು ಹಾಗೂ ಚಂದ್ರಶೇಖರ್ ಮಂಚಿ, ಗೋಪಾಲಪ್ಪ ಪದ್ದಿಪತಿ, ಪದ್ಮಾವತಿ ರಾಜಪುತ್, ವಿಜಯಲಕ್ಷ್ಮಿ ಶೇಷಗಿರಿ,ತುಮ್ಮಿನಕಟ್ಟಿ ಗ್ರಾಮದ ಸವಿತಾ ಚಲವಾದಿ, ರೇಣುಕಾ ನಶ್ವಿ, ಮಂಜುಳಾ ಜಾದವ್,ಚೌಡಮ್ಮ ಓಲೆಕಾರ್, ಮಂಗಳ ಎಮ್ಮಿಗನೂರು, ಗೌರಮ್ಮ ಕದರಮಂಡಲಗಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಸಮಾಜದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.