ರಾಣೆಬೆನ್ನೂರ

ವೆಂಕಟೇಶ್ವರ ವಿದ್ಯಾ ಸಂಸ್ಥೆ: ದೇವಿಕಾ ಶಾಲೆಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

ವೆಂಕಟೇಶ್ವರ ವಿದ್ಯಾ ಸಂಸ್ಥೆ: ದೇವಿಕಾ ಶಾಲೆಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

ರಾಣೇಬೆನ್ನೂರು  18: ಭಾರತ ದೇಶವು ಪರಕಿಯರಿಂದ ಸ್ವತಂತ್ರಗೊಳಿಸಲು ಲಕ್ಷಾಂತರ ದೇಶ ಪ್ರೇಮಿಗಳು ತಮ್ಮ ಮನೆ,ಮಠ ಮತ್ತು ಪ್ರಾಣವನ್ನು ಲೆಕ್ಕಿಸದೆ ಶ್ರಮಿಸಿದ್ದಾರೆ ಅಂತಹ ದೇಶ ಭಕ್ತರನ್ನು ಸ್ಮರಿಸುವ ಇಂದಿನ ದಿನ ಸಮಗ್ರ ಭಾರತೀಯರ ಪಾಲಿಗೆ ಮಹತ್ವದ ಸುದಿನವಾಗಿದೆ ಎಂದು ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ  ಸಿ. ಆರ್. ಪಾಟೀಲ್ ಹೇಳಿದರು.         ಅವರು ಇಲ್ಲಿನ ಗಣೇಶ್ ನಗರದ, ದೇವಿಕಾ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ, ಭಾರತ ಸ್ವಾತಂತ್ರ್ಯದ 77ನೇ  ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.     

     ಭಾರತೀಯರಾದ ನಾವುಗಳು ಇಂದು ಯಾವುದೇ ಅಂಜಿಕೆ ಮತ್ತು ಅಳುಕು ಇಲ್ಲದೆ ಸ್ವಚ್ಛಂದವಾಗಿ ಬದುಕುತ್ತಿದ್ದೇವೆ ಇದಕ್ಕೆಲ್ಲ ಕಾರಣ ದೇಶದ ಸ್ವಾತಂತ್ರ್ಯ ಪ್ರೇಮಿಗಳು ಎನ್ನುವುದನ್ನು ಇಂದಿನ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.       

  ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ ಭಾರತ ದೇಶವು, ಜ್ಞಾನ ವಿಜ್ಞಾನ ತಂತ್ರಜ್ಞಾನ  ಮತ್ತು ಎಲ್ಲ ಸಂಪನ್ಮೂಲಗಳಲ್ಲಿ ಪ್ರಬುದ್ಧವಾಗಿದೆ ಎಂದು ವಿವರಿಸಿದ ಪಾಟೀಲ್ ಅವರು, ವಿದ್ಯಾರ್ಥಿಗಳು ದ್ವೇಷ ಪ್ರೇಮವನ್ನು ಇಟ್ಟುಕೊಂಡು, ಪರಿಪೂರ್ಣ ಶಿಕ್ಷಣವನ್ನು ಹೊಂದಿ, ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ದಯಾನಂದ ಹರಿಹರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ, ಶ್ರೀಮತಿ ದೇವಿಕಾರಾಣಿ ಪಾಟೀಲ್, ಮ್ಯಾನೇಜಿಂಗ್ ಡೈರೆಕ್ಟರ್ ಗಣೇಶ್ ಓದುಗೌಡ್ರ, ಮುಖ್ಯೋಪಾಧ್ಯಾಯ ಮಾರ್ಷಲ್ ಗುಡಗೂರು, ಸೇರಿದಂತೆ  ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕಿಯರು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಶಾಲೆಯ ನೂರಾರು ಮಕ್ಕಳ ವೈವಿಧ್ಯಮಯ ದೇಶ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು

ಸುದ್ದಿ ಓದಿ