ವಿಜೃಂಭಣೆಯಿಂದ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ, ವರ್ಧಂತಿ ಉತ್ಸವ
ಅಥಣಿ 09: ಅಥಣಿಯ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಮುಂಜಾನೆ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಿ ಅಭಿಷೇಕ ನೆರವೇರಿಸಲಾಯಿತು.
ನಂತರ ರಾಯರ ಭಾವಚಿತ್ರದ ಮೆರವಣಿಗೆ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠದ ಭಾಗದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ವಿಪ್ರ ಬಾಂಧವರು ಭಾಗವಹಿಸಿದ್ದರು.
ನಂತರ, ಅಷ್ಟೋತ್ತರ ಹಾಗೂ ರಾಘವೇಂದ್ರ ಸ್ವಾಮಿಗಳ ಮಂತ್ರದ ಹೋಮ, ಪೂರ್ಣಾಹುತಿ ಪೂರ್ಣಗೊಂಡ ನಂತರ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ಮಧ್ಯಾಹ್ನ ಬೆಂಗಳೂರಿನ ನರಸಿಂಹಮೂರ್ತಿ ಇವರಿಂದ ರಾಘವೇಂದ್ರ ವಿಜಯ ಕುರಿತು ಪ್ರವಚನ ಹಾಗೂ ಭಕ್ತರಿಗೆ ತೀರ್ಥ, ಪ್ರಸಾದ ಜರುಗಿತು.
ಎಸ್.ವಿ.ಜೋಶಿ, ಶ್ರೀನಿವಾಸಾಚಾರ್ಯ ಬಿಳ್ಳೂರ, ಶ್ರೀರಾಮ ಕಟ್ಟಿ, ಸುಧೀಂದ್ರ ಬಾದರಾಯಣಿ, ಜಯತೀರ್ಥ ಕಟ್ಟಿ, ಕನ್ಹಯ್ಯ ಪಾಟೀಲ, ರಾಜು ಪಾಟೀಲ, ವಾದಿರಾಜ ಜಂಬಗಿ, ಆರಿ್ಪ.ಖಾಸನಿಸ್, ಪ್ರವೀಣ ಗೋಠೆ, ಸುರೇಶ್ ಜೋಶಿ, ನಾರಾಯಣ ದೇಶಪಾಂಡೆ, ರಾಜು ಸರದೇಶಪಾಂಡೆ, ಆರ್.ಎ.ಜೋಶಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಾಯರ ಭಕ್ತರು ನೆರೆದಿದ್ದರು.