ಧಾರವಾಡ - ಹುಬ್ಬಳ್ಳಿ

ವ್ಯಕ್ತಿಗಿಂತ ಆತನ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡಿ: ವೀರಣ್ಣ ಒಡ್ಡೀನ

ವ್ಯಕ್ತಿಗಿಂತ ಆತನ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡಿ: ವೀರಣ್ಣ ಒಡ್ಡೀನ


ವ್ಯಕ್ತಿಗಿಂತ ಆತನ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡಿ: ವೀರಣ್ಣ ಒಡ್ಡೀನ  

ಧಾರವಾಡ 25:  ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಆತನ ವ್ಯಕ್ತಿತ್ವಕ್ಕೆ ಹೆಚ್ಚುಬೆಲೆ ಕೊಡಬೇಕು. ವ್ಯಕ್ತಿ ಅಳಿದರೂ ವ್ಯಕ್ತಿತ್ವ ಬದುಕಿರುತ್ತದೆ. ವ್ಯಕ್ತಿತ್ವ ಕಳೆದುಕೊಂಡ ವ್ಯಕ್ತಿ ಬದುಕಿಯೂ ಸತ್ತಂತೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು. 

ಅವರು ಇಲ್ಲಿಯ ಸಂಪಿಗೆ ನಗರದ ಬಸವರಡ್ಡಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದರು. 

ಹೂವಿಗೆ ಪರಿಮಳವಿದ್ದಂತೆ ವ್ಯಕ್ತಿಗಳಿಗೂ ವ್ಯಕ್ತಿತ್ವ ಮುಖ್ಯ. ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಅವನಲ್ಲಿರುವ ಮೌಲ್ಯಾಧಾರಿತ ವ್ಯಕ್ತಿತ್ವಕ್ಕೆ ಬೆಲೆಕೊಡುವುದು ಮುಖ್ಯ. ಸುಂದರವಾದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಏಕಾಗ್ರತೆ, ಆತ್ಮವಿಶ್ವಾಸ, ಶ್ರದ್ಧೆ, ಪರೋಪಕಾರ, ಸಾರ್ಥಕ ಜೀವನ, ದೇಶಪ್ರೇಮ, ಪೌರ​‍್ರಜ್ಞೆಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶರೀರ ಸೌಂದರ್ಯ ಮುಖ್ಯವಲ್ಲ, ಹೃದಯ ಸೌಂದರ್ಯ ಮುಖ್ಯ ಆದ್ದರಿಂದ ವಿದ್ಯಾರ್ಥಿಗಳು ಬಾಹ್ಯ ಸೌಂದರ್ಯಕ್ಕೆ ಬೆರಗಾಗದೆ,   ಹೃದಯ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. 

ವಿದ್ಯಾರ್ಥಿಗಳು ಸಮಯಪರಿಪಾಲನೆಗೆ ಆದ್ಯತೆ ನೀಡಬೇಕು. ವಿನಾಕಾರಣ ಹಾಳುಹರಟೆ ಸಲ್ಲದು. ಸಿಕ್ಕಸಮಯ ಸದ್ಭಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಿ ಶಾಂತಿ, ಸಮಾಧಾನ ಗುಣ ವ್ಯಕ್ತಿತ್ವಕ್ಕೆ ಮೆರಗು ತರುತ್ತದೆ. ಸಜ್ಜನರ ಸಹವಾಸ ಹಾಗೂ ಸದ್ಗ್ರಂಥಗಳ ಅಧ್ಯಯನ ಮಾಡಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು.   ಬದುಕಿನ ಅವಧಿ ಮುಖ್ಯವಲ್ಲ. ಬದುಕಿನ ರೀತಿ-ನೀತಿ ಮುಖ್ಯ. ನಿರ್ದಿಷ್ಟ ಗುರಿಯೊಂದಿಗೆ ಸಾಧನೆ ಮಾಡಿ ನೀವು ಅಳಿದರೂ ನಿಮ್ಮ ಸಾಧನೆ ಉಳಿಯಬೇಕು ಇದೇ ನಿಮ್ಮ ವ್ಯಕ್ತಿತ್ವ ನಿರ್ಮಾಣ ಎಂದು ಹೇಳಿದರು. 

ಬಸವರಡ್ಡಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಬಸವರಡ್ಡಿ ಮಾತನಾಡಿ, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಬಗೆ ಕುರಿತು ವಿವರಿಸಿದರು. 

ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಹಾಸಿನಿ ಕುಮಸೀಕರ ಸ್ವಾಗತಿಸಿದರು. ಶ್ವೇತ ಬಡವಣ್ಣವರ ವಂದಿಸಿದರು. ರಾಜು ನರೇಗಲ್ಲ. ಎಸ್‌. ಎಸ್‌. ಜಯಸುಧಾ ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ