ಹೂವಿನ ಹಡಗಲಿ

ಉತ್ತಂಗಿ ಕೆ ಜಿ ಕೊಟ್ರೇಶ್ ಚಾಂಪಿಯನ್

ಉತ್ತಂಗಿ ಕೆ ಜಿ ಕೊಟ್ರೇಶ್ ಚಾಂಪಿಯನ್

ಹೂವಿನ ಹಡಗಲಿ: ಪ್ರಸಕ್ತಸಾಲಿನ ತಾಲೂಕು ಮಟ್ಟದ ಪ್ರೌಢಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ಸೋಮವಾರ ಪಟ್ಟಣದ ಜಿ ಪಿ ಜಿ ತಾಲೂಕು ಕ್ರೀಡಾಂಗಣದಲ್ಲಿ ಜರುಗಿತು.ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಉತ್ತಂಗಿ ವಿದ್ಯಾರ್ಥಿ ಕೆ.ಜಿ ಕೊಟ್ರೇಶ್ ಓಟದ ವಿಭಾಗದಲ್ಲಿ 3000 ,1500 ಹಾಗೂ 800 ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಪುನೀತ್ ಪಾಟೀಲ್ ಪಿ. ಡಿನಡಿಗೆಯಲ್ಲಿ ದ್ವಿತೀಯ  ಬಾಲಕಿಯರ ವಿಭಾಗದಲ್ಲಿ ಸೃಷ್ಟಿ ದೇವರಮನೆ ಉದ್ದ ಜಿಗಿತ ಪ್ರಥಮ 400 ಮೀಟರ್ ಓಟ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆಮುಖ್ಯ ಗುರುಗಳಾದ ಮಂಜುನಾಥ, ದೈಹಿಕ ಶಿಕ್ಷಕರಾದ ನಾಗರಾಜ್, ಶಾಲೆಯ ಶಿಕ್ಷಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ