ಅಚಲವಾದ ಆತ್ಮವಿಶ್ವಾಸವಿದ್ದಲ್ಲಿ ಉತ್ತಮ ಸಾಧನೆ ಮಾಡಬಹುದು: ಬಬಲೇಶ್ವರ
ಅಚಲವಾದ ಆತ್ಮವಿಶ್ವಾಸವಿದ್ದಲ್ಲಿ ಉತ್ತಮ ಸಾಧನೆ ಮಾಡಬಹುದು: ಬಬಲೇಶ್ವರ.
ಧಾರವಾಡ 25: ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನೇಚರ್ ಫಸ್ಟ್ ಇಕೋ ವಿಲ್ಹೇಜ್ನಲ್ಲಿ ಆಯೋಜಿಸಲಾಗಿದ್ದ ಬಾಲಮಂದಿರಗಳ ಮಕ್ಕಳಿಗೆ ರಾಜ್ಯ ಮಟ್ಟದ ಮಕ್ಕಳ ಕಥಾ ಕಮ್ಮಟದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯ ವಿವಿಧ ಸಾಧಕರಿಂದ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ಮಾಡಲಾಗಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಸೇರಿದಂತೆ ಅನೇಕ ಸಾಧಕರ ಜೊತೆ ಮಕ್ಕಳು ಸಂವಾದ ಮಾಡಿದ್ದಾರೆ. ಬಾಲಮಂದಿರದ ಮಕ್ಕಳು ನೋವು ನುಂಗಿ, ಹೊಸ ಕನಸ್ಸು ಮತ್ತು ಭರವಸೆಯಿಂದ ಮುಂದೆಸಾಗಿ ಉತ್ತಮ ಸಾಧನೆ ಮಾಡಿ, ಅವಮಾನ ಮಾಡಿದವರಿಂದ ಸನ್ಮಾನ ಮಾಡಿಸಿಕೊಳ್ಳುವಂತೆ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಬಾಲಮಂದಿರಗಳಿಗೆ ಪ್ರವಾಸ ಕೈಗೊಂಡು, ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು. ಮತ್ತು ಉತ್ತಮ ಸ್ಪಂದನೆ ನೀಡುವಂತಹ ಬಾಲಮಂದಿರಗಳಿಗೆ ಅಕಾಡೆಮಿಯಿಂದ ಅಭಿನಂದನಾ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.
ಸೆಪ್ಟೆಂಬರ್ 17 ರಿಂದ 21, 2024 ರವರೆಗೆ ಆಯೋಜಿಸಿದ್ದ ಮೊದಲನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 9 ಜಿಲ್ಲೆಯ (ಧಾರವಾಡ, ಬೆಳಗಾವಿ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಯಾದಗಿರಿ, ಕಲಬುರ್ಗಿ, ಮೈಸೂರು ಹಾಗೂ ಮಂಡ್ಯ) 44 ಮಕ್ಕಳು ಮತ್ತು 9 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು. ಅಕ್ಟೋಬರ್ 1 ರಿಂದ 5, 2024 ರವರೆಗೆ ಆಯೋಜಿಸಿದ್ದ ಎರಡನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 9 ಜಿಲ್ಲೆಯ (ಬೀದರ್, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಚಿಕ್ಕಮಂಗಳೂರು, ಉತ್ತರ ಕನ್ನಡ, ಹಾಸನ, ತುಮಕೂರು ಹಾಗೂ ರಾಯಚೂರು) 45 ಮಕ್ಕಳು ಮತ್ತು 9 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು. ಮೂರನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 10 ಜಿಲ್ಲೆಯ (ಗದಗ, ಕೊಡಗು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಪ್ಪಳ, ಬಾಗಲಕೋಟ, ಉಡುಪಿ ಹಾಗೂ ಬಳ್ಳಾರಿ) 47 ಮಕ್ಕಳು ಮತ್ತು 10 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು.
ಒಟ್ಟಾರೆಯಾಗಿ 28 ಜಿಲ್ಲೆಯಿಂದ 136 ಮಕ್ಕಳು, 28 ಜನ ಕೇರ್ ಟೆಕರ್ಸ್ ಮಕ್ಕಳ ಕಥಾ ಕಮ್ಮಟದಲ್ಲಿ ಭಾಗಿಯಾಗಿದ್ದರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಥಾ ಕಮ್ಮಟಕ್ಕೆ ಬಂದಿರುವ ಮಕ್ಕಳ ಕನಸು ಮತ್ತು ನೋವುಗಳನ್ನು ಒಳಗೊಂಡ ಮಕ್ಕಳು ಬರೆದಿರುವ 400 ಪುಟಗಳ ಕಥಾ ಕಮ್ಮಟ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಮೃತ ಸಾಣಿಕೊಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುವರ್ಣಲತಾ ಮಠದ ವಂದಿಸಿದರು.
ಖ್ಯಾತ ಮನೋತಜ್ಞ ವೈದ್ಯ ಡಾ. ಆನಂದ ಪಾಂಡುರಂಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ, ಕಮ್ಮಟ ನಿರ್ದೇಶಕ ನಿಲಕಾಂತಗೌಡ ಹಾಲಪ್ಪಗೌಡರ್ ಸೇರಿದಂತೆ ಕೆರ್ ಟೆಕರ್ಸ್ ಹಾಗೂ ಬಾಲಮಂದಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಮನಗರ ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ವರಲಕ್ಷ್ಮೀ ಅನಿಸಿಕೆ: ಪರಿಸರದಲ್ಲಿ ಬೆಳೆಯುವಂತ ವಿವಿಧ ಓಷಧಿ ಗಿಡಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಹೇಗೆ ಕಥೆ ಬರೆಯಬೇಕು ಬೆಂಬುವುದನ್ನು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದ್ದಾಳೆ.
ಕೊಪ್ಪಳ ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ಮೇಘನಾ ಅನಿಸಿಕೆ: ವಿವಿಧ ಗಿಡ ಮೂಲಿಕೆ, ಉತ್ತಮ ಹಣ್ಣಿನ ಗಿಡ ಮರಗಳ ಮತ್ತು ವಿವಿಧ ಕತೆಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದಳು.
(ಫೋಟೊ ಇವೆ)
********
28ರಿಂದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ
ಧಾರವಾಡ 25: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾತಯ್, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಇವರ ಸಹಯೋಗದೊಂದಿಗೆ ಜಾಗೃತಿ ಅರಿವು (ವಿಜಿಲೆನ್ಸ್ ಅವೆರನೆಸ್) ಸಪ್ತಾಹವನ್ನು ಅಕ್ಟೋಬರ್ 28 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿ.ಜಿ. ರಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಮ್.ಬ್ಯಾಕೋಡ, ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್.ದೊಡ್ಡಮನಿ, ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕ (ಪ್ರ) ಹನುಮಂತರಾಯ ಅವರು ಭಾಗವಹಿಸುವರು.
*****
ಬೈಪಾಸ್ ಷಟ್ಪಥ ರಸ್ತೆ ನಿರ್ಮಾಣ: ಜಮೀನು, ಕಟ್ಟಡಗಳ ಮಾಲೀಕರ ಸ್ಪಂದನೆಗೆ ಮನವಿ
ಧಾರವಾಡ 25: ಹುಬ್ಬಳ್ಳಿ ಧಾರವಾಡ ಬೈಪಾಸ್ ಷಟ್ಪಥ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಹುಬ್ಬಳ್ಳಿ ಧಾರವಾಡ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬೇಕಾದ ಹೆಚ್ಚುವರಿ ಜಮೀನುಗಳನ್ನು ಭೂಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಜರುಗಿಸಲಾಗುತ್ತಿದೆ.
ಪ್ರಥಮ ಹಂತದ ಐತೀರ್ುಗಳು ಘೋಷಣೆಯಾಗಿ ಅದರಲ್ಲಿರುವ ಜಮೀನು, ಕಟ್ಟಡ ಹಾಗೂ ಗಿಡಮರಗಳ ಐತೀರ್ನ ಮೊತ್ತವನ್ನು ಪಡೆದುಕೊಳ್ಳಲು ಸಂಬಂಧಿಸಿದವರಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಸದರ ಜಮೀನುಗಳ ಕಬ್ಜೆಯು ಅತ್ಯವಶ್ಯವಾಗಿರುವದರಿಂದ ಪರಿಹಾರ ಪಡೆಯಲು ಈಗಾಗಲೇ ದಾಖಲೆಗಳನ್ನು ಹಾಜರಪಡಿಸದೇ ಇರುವವರು 7 ದಿನಗಳ ಒಳಗಾಗಿ ದಾಖಲೆಗಳನ್ನು ತಪ್ಪದೇ ಹಾಜರಪಡಿಸಬೇಕು.
ತಪ್ಪಿದಲ್ಲಿ ನೋಟೀಸು ಜ್ಯಾರಿಯಾದ 60 ದಿನ ಮೇಲ್ಪಟ್ಟ ಪ್ರಕರಣಗಳ ಪರಿಹಾರಧನವನ್ನು ನಿಯಮಾನುಸಾರ ನ್ಯಾಯಾಲಯದಲ್ಲಿ ಠೇವಣಿ ಮಾಡಲಾಗುವದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾ.ಹೆ ನಂ.48 ನ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******
ಅರ್ಜಿ ಆಹ್ವಾನ
ಧಾರವಾಡ 25: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ (ಸ್ಟ್ರೀಮ್) ವಿಷಯಗಳ ಸಂವಹನಕ್ಕೆ ದಿವ್ಯಾಂಗ ವ್ಯಕ್ತಿಗಳಿಗೆ 2024-25ನೇ ಸಾಲಿನ ಕೆ.ಎಸ್.ಟಿ.ಎ. ವಾರ್ಷಿಕ ಬಹುಮಾನ (ದಿವ್ಯಾಂಗ)ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ, ನಾಮ ನಿರ್ದೇಶನ ಸಲ್ಲಿಸುವ ಆಸಕ್ತರು ತಿತಿತಿ.ಣಚಿಛಿಚಿಜಜಟಥಿ.ಟಿ ವೆಬ್ಸೈಟ್ ಮೂಲಕ ಅರ್ಜಿ ಪಡೆದು, ಜನವರಿ 28, 2025 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29721550 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******
ಇ-ಪ್ರೋಕ್ಯೂರ್ಮೆಂಟ್ ಟಂಡರ್ ಆಹ್ವಾನ
ಧಾರವಾಡ 25: ಧಾರವಾಡ ಜಿಲ್ಲೆಯ ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನಾಡಕಛೇರಿಗಳಿಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳು, ನಾಡಕಛೇರಿಗಳಿಗೆ ಅವಶ್ಯವಿರುವ ಎಸ್ಪೊನ್-774 (ಇಕಖಓಓ-774) ಇಂಕ್ ಬಾಟಲ್ ಹಾಗೂ 80 ಜಿಎಸ್ಎಮ್ ಎ4 ಪೇಪರ್ಗಳನ್ನು ಪೂರೈಸುವ ಕುರಿತು ಆಸಕ್ತ ಮತ್ತು ನೋಂದಾಯಿತ ಸರಬರಾಜು ಏಜೆನ್ಸಿಗಳಿಂದ ಇ-ಪ್ರೋಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಟಂಡರ್ ಕರೆಯಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಣಣಠಿ://ಞಠಿಠಿಠಿ.ಞಚಿಡಿಟಿಚಿಣಚಿಞಚಿ.ರಠ.ಟಿ ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಧಾರವಾಡ, ಅಟಲ್ಜೀ ಜನಸ್ನೇಹಿ ಕೇಂದ್ರದ ಶಾಖೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******
ವಿಮೆ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1 ಲಕ್ಷ 80 ಸಾವಿರಗಳ ದಂಡ: ಪರಿಹಾರಕ್ಕೆ ಆದೇಶ
ಧಾರವಾಡ 25: ಧಾರವಾಡದ ಎಮ್ಮಿಕೇರಿಯ ನಾಗರಾಜ ಗೌರಮ್ಮನವರ ಎಂಬುವವರು ತಮ್ಮ ವಾಹನವನ್ನು ಎದುರುದಾರರ ಬಳಿ ದಿ:18/06/2022ರಿಂದ 17/06/2027ರವರೆಗೆ ವಿಮಾ ಪಾಲಸಿಯನ್ನು ಮಾಡಿಸಿದ್ದರು. ದಿ:24/04/2023ರಂದು ವಾಹನವು ಶಿಗ್ಗಾವದ ಸಮೀಪ ಅಪಘಾತಕ್ಕೀಡಾಗಿತ್ತು. ಅದರ ರಿಪೇರಿಯ ಅಂದಾಜು ಖರ್ಚು ರೂ.1,24,596/- ಆಗಿದ್ದು ಅದನ್ನು ಕೊಡುವಂತೆ ಎದುರುದಾರರಿಗೆ ವಿನಂತಿಸಿದ್ದರು. ದಿ:07/07/2023ರಂದು ಎದುರುದಾರರು ಅದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಒದಗಿಸುವಂತೆ ದೂರುದಾರರಿಗೆ ಕೇಳಿದ್ದರು. ಅದೇ ರೀತಿ ದೂರುದಾರರು ದಾಖಲೆಗಳನ್ನು ಒದಗಿಸಿದರೂ ಅವರಿಗೆ ವಿಮಾ ಹಣವನ್ನು ಕೊಡದೇ ಮತ್ತು ಅವರ ಕ್ಲೇಮನ್ನು ನಿರಾಕರಿಸಿದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ವಿಮಾ ಕಂಪನಿಯವರು ಈ ನಡಾವಳಿಕೆಯಿಂದ ಬೇಸತ್ತ ದೂರುದಾರರು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:18/07/2024ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರ ವಾಹನದ ವಿಮಾ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಿದ್ದು ವಾಹನ ದಿ:24/04/2023ರಂದು ಅಪಘಾತವಾಗಿರುವುದು ದೂರುದಾರರು ದಾಖಲಿಸಿದ ಪೋಲಿಸ್ ವರಧಿ ಮತ್ತು ಇತರ ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ. ಎದುರುದಾರರು ಕೇಳಿದಂತಹ ದಾಖಲೆಗಳನ್ನು ದೂರುದಾರರು ಕೊಟ್ಟಿರುವುದು ಸಹ ಕಂಡುಬಂದಿರುತ್ತದೆ. ಇದಾದ 5-6 ತಿಂಗಳಾದರೂ ಎದುರುದಾರರು ದೂರುದಾರರ ವಾಹನದ ರಿಪೇರಿ ಹಣವನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ು ನೀಡಿದೆ. ದೂರುದಾರರ ವಾಹನದ ರಿಪೇರಿ ಹಣ ರೂ.1,24,000/- ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಕೊಡಬೇಕು ತಪ್ಪಿದ್ದಲ್ಲಿ ರೂ.1,24,000/-ಗಳ ಮೇಲೆ ವಾರ್ಷಿಕ ಶೇ8ಅ ರಂತೆ ಬಡ್ಡಿ ಲೆಕ್ಕ ಹಾಕಿ ದಿ:18/07/2024ರಿಂದ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ಮ್ಯಾಗಮಾ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.