ರಾಣೆಬೆನ್ನೂರ

ಅವೈಜ್ಞಾನಿಕ ಒಳ ಸೇತುವೆ: ಪಲ್ಟಿಯಾದ ಟ್ರ್ಯಾಕ್ಟರ್, ಅಪಾರ ಪ್ರಮಾಣದ ಕಬ್ಬು ನಿರುಪಾಲು

ಅವೈಜ್ಞಾನಿಕ ಒಳ ಸೇತುವೆ: ಪಲ್ಟಿಯಾದ ಟ್ರ್ಯಾಕ್ಟರ್, ಅಪಾರ ಪ್ರಮಾಣದ ಕಬ್ಬು ನಿರುಪಾಲು

ರಾಣೆಬೆನ್ನೂರು 12:  ಇಲ್ಲಿನ ದೇವರಗುಡ್ಡ ರಸ್ತೆಯ ರೈಲ್ವೆ ವಳ ಸೇತುವೆಯಲ್ಲಿ ನೀರು ತುಂಬಿಕೊಂಡಿದ್ದು, ಕಬ್ಬು ತುಂಬಿದ ಟ್ರ್ಯಕ್ಟರ್ ಪಲ್ಟಿಯಾಗಿ ಎರಡು ಟನ್ನಿಗೂ ಹೆಚ್ಚು 80000 ಕ್ಕೂ ಅಧಿಕ ಬೆಲೆಬಾಳುವ ಕಬ್ಬು ನೀರುಪಾಲಾದ ಘಟನೆ ಸಂಭವಿಸಿದೆ. ಈ ಘಟನೆ ಗುರುವಾರ ಮಧ್ಯರಾತ್ರಿ ಜರುಗಿದ್ದು, ನೂಕಾಪುರ ಬಳಿಯ ಎಂಜಿ ತಿಮ್ಮಾಪುರ ಗ್ರಾಮದ ಹೊಲದಿಂದ ಕಬ್ಬು ತುಂಬಿಕೊಂಡು ಹೊರಟಿದ್ದ  ಟ್ರಾಕ್ಟರ್ ನಗರ ಸಮೀಪದ ಭಾರಿ ಪ್ರಮಾಣದಲ್ಲಿ ನೀರು ತುಂಬಿರುವ  ರೈಲ್ವೆ ವಳ ಸೇತುವೆಯಲ್ಲಿ ಪಲ್ಟಿ ಯಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲವಾದರೂ, ಟ್ರಾಕ್ಟರಿ  ಯಲ್ಲಿದ್ದ ಕಬ್ಬು ಸಂಪೂರ್ಣ ನೀರು ಪಾಲಾಗಿದೆ. ಘಟನೆಯ ಸುದ್ದಿ ತಿಳಿತಿದ್ದಂತೆ ಶುಕ್ರವಾರ ಮುಂಜಾನೆ ಸ್ಥಳಕ್ಕೆ ಧಾವಿಸಿದ, ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು, ರೈತ ಸಂಘಟನೆ ಮುಖಂಡರು, ಸಂಬಂಧಿಸಿದ ರೈಲ್ವೆ ಇಲಾಖೆ ಅಭಿಯಂತರರು ಸ್ಥಳಕ್ಕೆ ಧಾವಿಸುವಂತೆ ಧರಣಿ ನಡೆಸಿದರು. 

ಘಟನೆ ಯಿಂದ ಅಕ್ರೋಶಗೊಂಡ ರೈತರು ಮತ್ತು ಕಬ್ಬು ಮಾಲಿಕ ಪುಟ್ಟಪ್ಪ ಕತ್ತಿ ಹಾಗೂ ಮಕ್ಕಳು ಅಭಿಯಂತರ ವಿರುದ್ಧ ಕಿಡಿ ಕಾರುತ್ತಿದ್ದರು. ಎಷ್ಟೇ ಪೋನಾಯಿಸಿದರು ಸ್ವೀಕರಿಸದೆ ಇರುವುದರಿಂದ ಪ್ರತಿಭಟನಾ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದರು. ಅಧಿಕಾರಿಗಳು ಬರಬೇಕು, ಆಗಿರುವ ನಷ್ಟವನ್ನು ತುಂಬಿಕೊಡಬೇಕು ಇಲ್ಲವಾದಲ್ಲಿ ರಸ್ತೆ ತಡೆದು ಬಂಧ ಗೂ ಳಿಸಲಾಗುವುದು ಎಂದು ಬಿಗಿ ಪಟ್ಟು ಸಡಿಲಿಸದೇ, ಧರಣಿ ಮುಂದುವರಿಸಿದ್ದರು. ಸ್ಥಳಕ್ಕೆ ಗ್ರಾಮೀಣ ಠಾಣಾ ಪೊಲೀಸರು, ಮತ್ತು ಪ್ರತಿಭಟನಾ ನಿರತರು, ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ  ಅಭಿಯಂತರರು  ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ನಂತರ ತಹಸಿಲ್ದಾರ್ ಶಂಕರ್ ಜಿಎಸ್ ಅವರು. ಧಾವಿಸಿ, ಪ್ರತಿಭಟನಾ ನಿರತರು  ಕೊಟ್ಟ ಮನವಿಯನ್ನು ಸ್ವೀಕರಿಸಿ, ಕೂಡಲೆ ಅಭಿಯಂತರೊಂದಿಗೆ  ಮಾತುಕತೆ ನಡೆಸಿ, ಸೂಕ್ತ ಪರಿಹಾರ ದೊರಕಿಸಲು ತಾವು ಸಹ ಮುಂದಾಗುವುದಾಗಿ ಮಾಲಿಕ ಪುಟ್ಟಪ್ಪ ಕತ್ತಿ ಮತ್ತು ಧರಣಿ ನಿರತ ರೈತರೊಂದಿಗೆ ಸಮಾಲೋಚನೆ ನಡೆಸಿ, ಭರವಸೆ ನೀಡಿದರು. ಆ ವೈಜ್ಞಾನಿಕ ಕಾಲುವೆಯಲ್ಲಿ ನೀರು ತುಂಬಿದ್ದು, ವಾಹನಗಳು, ದ್ವಿಚಕ್ರ ವಾಹನಗಳು  ಜನ.ಜಾನುವಾರುಗಳು ನೀರನ್ನು ದಾಟಲಾರದೆ ಅನೇಕ ಸಂಕಷ್ಟಗಳನ್ನು ಎದುರಿಸಿ, ನೆಲಕ್ಕಪಳಿಸಿ, ಆಸ್ಪತ್ರೆ ಸೇರುವಂತಾಗಿದೆ ಇಷ್ಟೆಲ್ಲ ದುರಂತ ಘಟನೆಗಳು ನಡೆದರೂ ಸಹ, ರೈಲ್ವೆ ಇಲಾಖೆಯ ಅಭಿಯಂತರರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು  ಕ್ಯಾರೇ  ಎನ್ನದೆ, ಜನ ವಿರೋಧಿ ಧೋರಣೆ ಅನುರಿಸುತ್ತಿದ್ದಾರೆ. 

ಕೂಡಲೇ ನೀರು ಸರಾಗವಾಗಿ ಸಾಗುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನಿತ್ಯವೋ ಧರಣಿ ಪ್ರತಿಭಟನೆ  ಹೋರಾಟ ಎದುರಿಸಬೇಕಾಗುತ್ತದೆ ಎಂದು ಧರಣಿ ನಿರತರು ಎಚ್ಚರಿಸಿದರು. ಅಂತಿಮವಾಗಿ ಗ್ರಾಮಾಂತರ ಠಾಣೆಗೆ ತೆರಳಿದ ಪ್ರತಿಭಟನಾಕಾರರು, ಅಲ್ಲಿ ರೈಲ್ವೆ ಇಲಾಖೆಯ ಅಭಿಯಂತರ ವಿರುದ್ಧ ದೂರು ದಾಖಲಿಸಿದರು. ಪ್ರತಿಭಟನೆ ಮುಂಚೂಣಿಯಲ್ಲಿ ಜಗದೀಶ್ ಕೆರೋಡಿ, ಉಮೇಶ್ ಗುರುಲಿಂಗಪ್ಪ ಗೌಡ್ರ, ಹನುಮಂತಪ್ಪ ಕಬ್ಬಾರ್, ರಾಜು ಓಲೆ ಕಾರ್, ಎಲ್ಲಪ್ಪ ಎಡಚಿ, ದಿಲ್ಲಪ್ಪ ಕಟಗಿ, ಗುಡ್ಡಪ್ಪ ಕತ್ತಿ ಕಾಳಿದಾಸ ಕತ್ತಿ, ಸೇರಿದಂತೆ ರೈತ ಸಂಘಟನೆ ಮುಖಂಡರು, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು  ಪಾಲ್ಗೊಂಡಿದ್ದರು 

ಸುದ್ದಿ ಓದಿ