ಸಾರಿಗೆ ಇಲಾಖೆಯ ನೌಕರರು ಪ್ರತಿಭಟನೆ ಕೈ ಬಿಡುವಂತೆ ಸಾರಿಗೆ ಸಚಿವ ಸವದಿ ವಿನಂತಿ.
ಅಥಣಿ 27- ಮುಂಬರುವ 7ರಂದು ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿವೆ ಎಂದು ಈಗಾಗಲೇ ಸೂಚನೆ ನೀಡಿದ್ದಾರೆ, ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನೌಕರರಿಗೆ ವಿನಂತಿ ಮಾಡಿಕೊಂಡರು.
ಅವರು ಅಥಣಿ ಪಟ್ಟನದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಸಾರಿಗೆ ನೌಕರರ ಹಲವು ಬೇಡಿಕೆಯನ್ನು ಈಡೇರಿಸಿದೆ. ಸಾರಿಗೆ ನೌಕರ ಪ್ರಮುಖ 9 ಬೇಡಿಕೆಯಲ್ಲಿ 8 ಬೇಡಿಕೆ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕ ತೊಂದರೆ ಉಂಟು ಮಾಡುವ ಕಾರ್ಯಕ್ಕೆ ಮುಂದಾಗಬೇಡಿ. ಸಮಸ್ಯೆಗಳಿಗೆ ಪ್ರತಿಭಟನೆ ಒಂದೇ ಮಾರ್ಗವಲ್ಲ. ಸರ್ಕಾರ ಸಾರಿಗೆ ನೌಕರರ ಪರವಾಗಿ ಇರುವುದು. ಸಾರಿಗೆ ಇಲಾಖೆ ನೌಕರರಿಗೆ ಸದ್ಯದಲ್ಲೇ 6ನೇ ವೇತನ ಆಯೋಗ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಮತ್ತೊಮ್ಮೆ ವಿನಂತಿ ಮಾಡುತ್ತೇನೆ ಸಾರಿಗೆ ನೌಕರು ಪ್ರತಿಭಟನೆ ಮಾಡಬಾರದೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೋರಿದರು.