ರಾಣೆಬೆನ್ನೂರ

ಟ್ರಾಪಿಕ್ ಕಂಟ್ರೋಲ್ ಮಾಡುವುದು ಕಾನೂನು ಪರಿಪಾಲಿಸುವುದು ಸ್ವಲ್ಪ ಕಷ್ಟದ ಕೆಲಸ

ಟ್ರಾಪಿಕ್ ಕಂಟ್ರೋಲ್ ಮಾಡುವುದು ಕಾನೂನು ಪರಿಪಾಲಿಸುವುದು ಸ್ವಲ್ಪ ಕಷ್ಟದ ಕೆಲಸ

ರಾಣೇಬೆನ್ನೂರು 23: ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳು ಹಳ್ಳಿಗಳಿಂದ ಕೂಡಿದ ತಾಲೂಕ ಆಗಿದ್ದು, ಹೆಚ್ಚಾನು ಹೆಚ್ಚು ರೈತರು ಇರುವುದರಿಂದ ನಗರಕ್ಕೆ ಬಂದು ಬೀಜ, ಗೊಬ್ಬರ, ಹಾಗೂ ಟ್ರ್ಯಕ್ಟರ್ಗಳಿಗೆ ಡೀಜೆಲ್, ಪೆಟ್ರೋಲ್, ಔಷಧಿ, ತರಕಾರಿ ಕಾಳು ಕಡಿಗಳನ್ನು ದಿನನಿತ್ಯ ನಗರಕ್ಕೆ ತಂದು ಹೋಗುವಲ್ಲಿ  ಅನೇಕ ರೀತಿಯ ತೊಂದರೆಯಾಗಿದ್ದು, ಟ್ರಾಪಿಕ್ ಕಂಟ್ರೋಲ್ ಮಾಡುವುದು ಕಾನೂನುಗಳನ್ನು ಪರಿಪಾಲಿಸುವುದು ಸ್ವಲ್ಪ ಕಷ್ಟದ ಕೆಲಸವಾಗುತ್ತಿದೆ ಎಂದು ಕನರ್ಾಟಕ ಪೊಲೀಸ್ ರಕ್ಷಣಾ ಸಂಘದ ಜಿಲ್ಲಾ ಅಧ್ಯಕ್ಷ ಹನುಮತಂಪ್ಪ ಕಬ್ಬಾರ ಹೇಳಿದರು.

 ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಷಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ರೈತರಿಗೂ, ಪೊಲೀಸ್ ಇಲಾಖೆಗೂ ಕಷ್ಟವಾಗುತ್ತದೆ. ಈಗಾಗಲೇ ಹೊಸದಾಗಿ ಜಿಲ್ಲೆಗೆ ಐ.ಪಿ.ಎಸ್. ಅಧಿಕಾರಿಯಾಗಿ ನಮ್ಮ ಜಿಲ್ಲೆಯನ್ನು ಸುಧಾರಣೆ ಮಾಡಲಿಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವುದು ಒಂದು ಕಡೆ ಖುಷಿ ತರುವ  ವಿಚಾರ. ಆದರೆ ನಮ್ಮ ಜಿಲ್ಲೆ ಹಳ್ಳಿಗಳಿಂದ ಕೂಡಿದ ಜಿಲ್ಲೆಯಾಗಿದ್ದು  ಕಾನೂನು ಪರಿಪಾಲಿಸುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ದಯಮಾಡಿ ಕಾಲಕ್ರಮೇಣ ನಿಧಾನವಾಗಿ ಜಿಲ್ಲೆಯ ಸಮಸ್ಯೆಗೆ ಅನುಗುಣವಾಗಿ ತಮ್ಮ ಅಧಿಕಾರದ ಅವಧಿಯಲ್ಲಿ  ಕಾನೂನು ಜಾರಿಗೆ ತರಬೇಕು ಮತ್ತು ಈಗಾಗಲೇ ರೈತರು ಮಳೆ, ಬೆಳೆ ಇಲ್ಲದೆ ಆರ್ಥಿಕವಾಗಿ ತುಂಬಾ ನೊಂದುಕೊಂಡಿದ್ದು ಅಲ್ಲದೆ ತಾವು ಈ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ದಿಢೀರನೆ ತೆಗೆದುಕೊಂಡಲ್ಲಿ ರೈತರು ಗೊಂದಲಕ್ಕೆ ಸಿಲುಕುವಂತಾಗಿದೆ.  ಸಿಬ್ಬಂದಿಗಳ ಕೊರತೆ, ಕಿರಿದಾದ ರಸ್ತೆಗಳು, ಹಳ್ಳಿಗಳಿಂದ ಕೂಡಿದ ಜಿಲ್ಲೆ ಇರುವುದರಿಂದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆಡಳಿತ ನಡೆಸಬೇಕೆಂದು ತಮ್ಮಲ್ಲಿ ಮನವಿ ಮಾಡಿರುವುದಾಗಿ ಸಲ್ಲಿಸಿರುವ ಪತ್ರದಲ್ಲಿ ವಿನಂತಿಸಿದ್ದಾರೆ 

ಸುದ್ದಿ ಓದಿ