ರಾಣೆಬೆನ್ನೂರ

ಇಂದು ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನೋತ್ಸವ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಇಂದು ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನೋತ್ಸವ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ

ರಾಣೇಬೆನ್ನೂರು 16: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮದಿನೋತ್ಸವದ ನಿಮಿತ್ತ ನಗರದ ಎಪಿಎಂಸಿ ರೈತ ಭವನದಲ್ಲಿ ಸೆ. 17ರಂದು ರವಿವಾರ ಸಾರ್ವಜನಿಕವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ಆಯೋಜಿಸಲಾಗಿದೆ ಎಂದು ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕ ಡಾ. ಬಸವರಾಜ ಕೇಲಗಾರ ಹೇಳಿದರು. 

        ಅವರು ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಈ ಬ್ರಹತ್ ಶಿಬಿರವು ವೈದ್ಯಕೀಯ ಪ್ರಕೋಸ್ಟ, ರಾಣೆಬೆನ್ನೂರು ಭಾರತೀಯ ಜನತಾ ಪಕ್ಷ, ಡಾ. ಮಹೇಶ್ ನಾಲವಾಡ ಫೌಂಡೇಶನ್ ಹುಬ್ಬಳ್ಳಿ, ಕೆಎಲ್ಇ ಸಚಿರಾಯು ಆಸ್ಪತ್ರೆ ಹುಬ್ಬಳ್ಳಿ ಹಾಗೂ ಎಪಿಎಂಸಿ ವರ್ತಕರ ಸಂಘವು ಏರ್ಪಡಿಸಿದೆ.  ಮೋದಿ ಅವರ ನೇತೃತ್ವದಲ್ಲಿ ಭಾರತ ದೇಶ ವಿಶ್ವಗುರುವಾಗಿ ಮಾರ್ಪಾಡಾಗಲಿದೆ, ದೇಶ ಸದೃಢ, ಶಸಕ್ತ ಮತ್ತು ಸಮೃದ್ಧ ಅವರ ಕನಸು, ದೇಶದ ಪ್ರತಿಯೊಬ್ಬ ನಾಗರಿಕರು ಆರೋಗ್ಯವಂತರಾಗಿರಬೇಕು  ಅದಕ್ಕಾಗಿ, ಸಾರ್ವಜನಿಕರ ಅನುಕೂಲತೆಗಾಗಿ ರಾಜ್ಯದಾದ್ಯಂತ ಆಯಾ ಜಿಲ್ಲಾ ತಾಲೂಕ ಕೇಂದ್ರಗಳು ಮತ್ತು ಗ್ರಾಮಾಂತರದಲ್ಲಿ ಇಂತಹ ಬೃಹತ್ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.       

       ಆಜಾಧಿಕಾ ಅಮೃತ ಮಹೋತ್ಸವದ ನಿಮಿತ್ತ ಮೋದಿಜಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೇವಾಪಕ್ಷಕದ ಅಡಿಯಲ್ಲಿ  ನನ್ನ ದೇಶ ನನ್ನ ಮಣ್ಣು, ಸ್ವಚ್ಛತೆ, ರಕ್ತದಾನ, ಆರೋಗ್ಯ, ಶಿಬಿರ ನಡೆಯಲಿದ್ದು ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಡಾ ಕೇಲಗಾರ ಹೇಳಿದರು.  ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಕೆ.ಶಿವಲಿಂಗಪ್ಪ, ದೀಪಕ್ ಹರಪನಹಳ್ಳಿ, ಡಾ. ಶಿವಪ್ರಕಾಶ್ ತಂಡಿ, ಡಾ. ರವಿ ಕುಲಕರ್ಣಿ , ಜಿ.ಜಿ. ಹೊಟ್ಟೆಗೌಡ್ರ, ಎ. ಬಿ.ಪಾಟೀಲ್, ಮಲ್ಲಣ್ಣ ಅಂಗಡಿ, ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ