ರಾಣೆಬೆನ್ನೂರ

ಮೂರು ಮೇಲ್ ಸೇತುವೆಗಳು: ನಿರಂತರ ಹೋರಾಟಕ್ಕೆ ಸಂದ ಫಲ, ಹೋರಾಟಗಾರರ ಹರ್ಷ

ಮೂರು ಮೇಲ್ ಸೇತುವೆಗಳು: ನಿರಂತರ ಹೋರಾಟಕ್ಕೆ ಸಂದ ಫಲ, ಹೋರಾಟಗಾರರ ಹರ್ಷ

ರಾಣೇಬೆನ್ನೂರು ೦೧:ವಾಣಿಜ್ಯ ನಗರಕ್ಕೆ ಹೆಸರಾಗಿರುವ ರಾಣೆಬೆನ್ನೂರು ನಗರ ವ್ಯಾಪ್ತಿಯ ದೇವರಗುಡ್ಡರಸ್ತೆ, ಮೆಡ್ಲೇರಿ ರಸ್ತೆ, ಹಾಗೂ ಗಂಗಾಪುರ ರಸ್ತೆ. ಇಲ್ಲಿ ಒಟ್ಟು, ಮೂರು ರೈಲ್ವೆ  ಮೇಲ್ ಸೇತುವೆಗಳು ನಿರ್ಮಾಣವಾಗುತ್ತಿರುವುದು ಭಾರತ ದೇಶದಲ್ಲಿಯೇ ಅತೀ ಹೆಚ್ಚು ರೈಲ್ವೇ ಮೆಲ್ಸೇತುವೆ ಹೊಂದಿರುವ ಮೊದಲನೆ  ನಗರ "  ಎಂಬ ಕೀರ್ತಿಗೆ ಪಾತ್ರವಾಗುತ್ತಲಿದೆ.    

    ಈ ಹಿಂದೆ ಏಷ್ಯಾ ಖಂಡದಲ್ಲೆ ರಾಣೇಬೆನ್ನೂರು ಬಿಜೋತ್ಪಾದಾನೆಯಲ್ಲಿ ಪ್ರಥಮ ಸ್ಥಾನ ಗಳಿಸಿತ್ತು ಇಂದು ಮತ್ತ್ತೊಂದು ಇತಿಹಾಸದ ಗರಿಮೆಗೆ ಇಂದು ವಾಣಿಜ್ಯ ನಗರವು ಸಾಕ್ಸಿಯಾಗಿದೆ.ರಾಣೇಬೆನ್ನೂರಿನಿಂದ ಗೋವಿಂದ ಬಡಾವಣೆ, ಬಸ್ಲಿಕಟ್ಟಿ ತಾಂಡ, ಅಂಕಸಾಪುರ,ಮೆಡ್ಲೇರಿ, ಬೇಲೂರು, ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ರೈಲ್ವೇ ಗೆಟ ನಂಬರ 217 ಕ್ಕೆ ರೈಲ್ವೇ ಮೆಲ್ಸೇತುವೆ ಮೊಂಜೊರಾಗಿದ್ದು ಇಂದು ರೈಲ್ವೇ ಮೆಲ್ಸೇತುವೆ ನಿರ್ಮಾಣಕ್ಕೆ ಅವಶ್ಯಕ ಜಮೀನನ್ನು ಭೂ ಸ್ವಾಧಿನ ಪಡಿಸಿಕೊಳ್ಳಲು ರೈಲ್ವೇ ಇಲಾಖೆ ಮತ್ತು ಭೂ ಮಾಪನ ಇಲಾಖೆ ಜಂಟಿಯಾಗಿ ಸವರ್ೆ ಮಾಡಿ ಕಾಮಗಾರಿಗೆ ಅಡಿ ಇಟ್ಟಂತಾಗಿದೆ. 

ಈಗಾಗಲೇ ಅನೇಕ ವರ್ಷಗಳ ಹೋರಾಟದಿಂದ ಫಲ ಕಂಡಿರುವ, ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಹ ದಾರಿಗೆ ಸಂಬಂಧಿಸಿದ ದೇವರಗುಡ್ಡ ರಸ್ತೆ, ರೈಲ್ವೆ ಮೇಲ್ ಸೇತುವೆ ಕಾಮಗಾರಿ ಆರಂಭವಾಗಿದೆ. ಮಂಗಳವಾರ ಮೆಡ್ಲೇರಿ ರಸ್ತೆಯ ಗಂಗಾಜಲ ತಾಂಡೆ ಬಳಿಯ ರೈಲ್ವೆ ಮೇಲ್ ಸೇತುವೆ ಕಾಮಗಾರಿಗಾಗಿ ಭೂಮಿ ಅಳತೆಮಾಡಲಾಗಿದೆ. ಮಾತನಾಡಿದ ರೈಲ್ವೇ ಮೆಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ್ ರಾಣೇಬೆನ್ನೂರ ನಗರ     ಬಾಗದಲ್ಲಿ ಹಾಯ್ದು ಹೋಗಿರುವ ಬಾಗಲಕೋಟಿ-ಬೀಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ ಗೆಟ ನಂಬರ್ 219(ಗುತ್ತಲ ರಸ್ತೆ ) ರೈಲ್ವೇ ಗೆಟ ನಂಬರ 218 ಗಂಗಾಪುರ ರಸ್ತೆ ಮತ್ತು ರೈಲ್ವೇ ಗೆಟ ನಂಬರ 217 ಮೆಡ್ಲೆರಿ ರಸ್ತೆಗೆ ಮೆಲ್ಸೇತುವೆ ಮಂಜೂರಾಗಿದೆ.ಕೇಂದ್ರ ಸಕರ್ಾರದ ಟ್ರಾಪಿಕ್ ಮುಕ್ತ ಸಂಚಾರ ಯೋಜನೆಯಡಿ ಈ ಮೂರು ರಸ್ತೆಗೆ ರೈಲ್ವೇ ಅಂಡರ್ ಪಾಸ್ ನಿರ್ಮಿಸಿಲು ಅನುದಾನ ಬಿಡುಗಡೆಯಾಗಿ ಟೆಂಡರ ಪ್ರಕ್ರಿಯು ಮುಗಿದಿತ್ತು  ನಿಯಮಾನುಸಾರ ಗೆಟ ನಂಬರ 219 ಕ್ಕೆ ಗುತ್ತಲ ರಸ್ತೆಗೆ ಅವೈಜ್ಞಾನಿಕವಾಗಿ ಅಂಡರ ಪಾಸ್ ನಿರ್ಮಾಣ ಕಾಮಗಾರಿ ಪ್ರಾರಂಭೀಸಿದಾಗ ಎಚ್ಚತ್ತ  ತಾಲೂಕಿನ  ಜನತೆ ರೈಲ್ವೇ ಮೇಲ್ಸತುವೇ ನಿಮರ್ಾಣ ಹೋರಾಟ ಸಮಿತಿ ಮತ್ತು ವಿವಿದ ಸಂಘಟನೆಗಳ ಮತ್ತು ಮಠಾಧಿಶರ ನೇತೃತ್ವದಲ್ಲಿ 2019 ರಲ್ಲಿ ಅವೈಜ್ಞಾನಿಕ ರೈಲ್ವೇ ಕೆಳ ಸೇತುವೆ ನಿರ್ಮಾಣ ಖಂಡಿಸಿ ರೈಲೊ ರೋಖೊ, ರಸ್ತೆ ತಡೆ, ರಾಣೇಬೆನ್ನೂರು ಬಂದ್ ಮುಂತಾದ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಹೋರಾಟವನ್ನು ಸತತ 4 ವರ್ಷಗಳಿಂದ ಹೋರಾಟ ಮಾಡಿದ್ದರ ಪಲವಾಗಿ ಮೆಡ್ಲೆರಿ ಮತ್ತು ಗಂಗಾಪುರ ರಸ್ತೆ  ಅಂಡರ್ ಪಾಸ್ ನಿಮರ್ಾಣದ ಟೆಂಡರ್ ರದ್ದು ಮಾಡಿ ಮೂರು ರೈಲ್ವೇ ಮೇಲ್ಸತುವೇ ನಿಮರ್ಾಣಕ್ಕೆ 107 ಕೋಟಿ 84 ಲಕ್ಷ ರೊ ಅನುದಾನ ಬಿಡುಗಡೆಯಾಗಿ ಗುತ್ತಲ ರಸ್ತೆಗೆ ಮೆಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದೆ ಮತ್ತು ದಾವಣೆಗೆರಿಯಿಂದ ಹುಬ್ಬಳ್ಳಿ ವರೆಗೆ ಸುಮಾರು 56 ಅಂಡರ ಪಾಸ್ ಗಳಿದ್ದು ಎಲ್ಲವು ಮಳೆಗಾಲದಲ್ಲಿ ಸಂಚಾರಕ್ಕೆ ಸೂಕ್ತವಾಗಿಲ್ಲಾ....   ಭಾರತ ದೇಶದಲ್ಲಿಯ 4 ಕಿಲೋ ಮೀಟರ್ ಅಂತರದಲ್ಲಿ 4 ರೈಲ್ವೇ ಮೆಲ್ಸೇತುವೆ ನಿಮರ್ಾಣವಾಗುತ್ತಿರುವದು ರಾಣೇಬೆನ್ನೂರುಲ್ಲಿ ಮಾತ್ರ ಎನ್ನುವುದು  ಸಾರ್ವಕಾಲಿಕ ಸತ್ಯ  ಮತ್ತುಇತಿಹಾಸ ದಾಖಲೆಯಾಗಿದೆ. 

ಸಂಘಟನೆಯೊಂದು ಹೋರಾಡಿ 107 ಕೋಟಿ 84 ಲಕ್ಷ ರೊ ಅನುದಾನ ಬಿಡುಗಡೆ ಗೊಳಿಸಲು ಯಶಸ್ವಿಗೊಳಿಸಿದ್ದು ಮೋತ್ತೊಂದು ಇತಿಹಾಸ ಈ ಹೋರಾಟಕ್ಕೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೂ, ವರ್ತಕರಿಗೂ, ಸಾಮಾಜಿಕ ಸೇವಾ ಕಾರ್ಯಕರ್ತರಿಗೂ ಪಾಟೀಲ್ ಅವರು ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ. ರೈತ ಮುಖಂಡರಾದ ಈರಣ್ಣ ಹಲಗೇರಿ, ಪ್ರಭುಸ್ವಾಮಿ ಕರ್ಜಗಿಮಠ, ಹರಿಹರ ಗೌಡ ಪಾಟೀಲ್, ಜಗದೀಶ್ ಕೆರೋಡಿ, ರವಿ ಕೆರೋಡಿ, ರಾಜು ಓಲೇಕಾರ್, ಜಮಾಲಸಾಬ್ ಶೇತಸನಧಿ, ಮಲ್ಕಪ್ಪ ಲಿಂಗದಹಳ್ಳಿ, ಮಂಜು ಲಮಾಣಿ ಶಿವರಾಜ್ ನಾಯಕ್ ಎಲ್ಲಪ್ಪ ಓಲೆಕಾರ್, ಬಸವರಾಜ ಯಲ್ಲಕ್ಕನವರ, ಭರ್ಮಪ್ಪ ಮಾಳಗಿ ಸೇರಿದಂತೆ ಮತ್ತಿತರ ಹೋರಾಟಗಾರರು ಪಾಲ್ಗೊಂಡಿದ್ದರು 

ಸುದ್ದಿ ಓದಿ