ದೇಶಿ ಗೋವು ಅಮೃತ ಸಂಘದ ಕಾರ್ಯ ಶ್ಲಾಘನೀಯ
ಜಾನುವಾರುಗಳ ಚರ್ಮಗಂಟು ರೋಗಕ್ಕೆ ಉಚಿತ ಆಯುರ್ವೇದಿಕ ಔಷದಿ ವಿತರಣೆ
ಶೇಡಬಾಳ 11: ಶೇಡಬಾಳ ಪಟ್ಟಣದ ದೇಶಿ ಗೋವು ಅಮೃತ ಸಂಘದ ವಿದ್ಯಾವಂತ ಯುವಕರು ಜಾನುವಾರುಗಳಿಗೆ ಬಂದಿರುವ ಚರ್ಮಗಂಟು ರೋಗಕ್ಕೆ ಉಚಿತವಾಗಿ ಆಯರ್ುವೇದಿಕ ಔಷಧಿಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೆಂಪವಾಡ ಅಥಣಿ ಶುಗರ್ಸ್ನ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.
ಅವರು ಸೋಮವಾರ ದಿ. 10ರಂದು ಶೇಡಬಾಳ ಪಟ್ಟಣದ ಅನಂತ ಎಂಟರ್ಪ್ರೈಜಿಸ್ನ ಆಶ್ರಯದಲ್ಲಿ ದೇಶಿ ಗೋವು ಅಮೃತ ಸಂಘವು ಆಯೋಜಿಸಿದ್ದ ಉಚಿತವಾಗಿ ಚರ್ಮಗಂಟು ಆಯುರ್ವೇದಿಕ ಔಷಧಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈ ಭಾಗದಲ್ಲಿ ವಿಪರೀತವಾಗಿ ಹಬ್ಬುತ್ತಿರುವ ಜಾನುವಾರುಗಳ ಚರ್ಮಗಂಟು ರೋಗಕ್ಕೆ ಆಯರ್ುವೇದಿಕ ಔಷಧಿಯನ್ನು ವಿತರಿಸುತ್ತಿರುವುದು ರೈತರಿಗೆ ವರದಾನವಾಗಿ ಪರಿಣಮಿಸಿದೆ. ನಿಮ್ಮ ಈ ಸಾಮಾಜಿಕ ಕಾರ್ಯಕ್ಕೆ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಸಹಾಯ ಸಹಕಾರ ನೀಡಲು ತಾವು ಸದಾಕಾಲ ಸಿದ್ಧ ಇರುವುದಾಗಿ ಭರವಸೆ ನೀಡಿದರು. ಯುವಕರು ಕೈಗೊಂಡಿರುವ ಈ ಸಾಮಾಜಿಕ ಕಾರ್ಯವು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಸಂಘವು ಉಚಿತವಾಗಿ ನೀಡುತ್ತಿರುವ ಜಾನುವಾರುಗಳು ಚರ್ಮಗಂಟು ರೋಗದ ಆಯರ್ುವೇದಿಕ ಔಷಧಿ ವಿತರಣೆಯಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಮಿತ ಪಾಟೀಲ ಮೊ: 9108077679, ಶೀತಲ ಪಾಟೀಲ ಮೊ: 9535870509, ವಿನೋದ ನಾನಾಗೌಡರ ಮೊ: 8867883501 ಸಂಪರ್ಕಿ ಸಬಹುದಾಗಿದೆ.
ಶ್ರೀನಿವಾಸ ಪಾಟೀಲ, ಭರತೇಶ ಪಾಟೀಲ, ಕಿರಣ ಯಂದಗೌಡರ, ಅಶ್ವಥ ಪಾಟೀಲ, ಶೀತಲ ಪಾಟೀಲ, ಅಮೀತ ಪಾಟೀಲ, ಶೀತಲ ಈರಾಜ, ವಿನೋದ ನಾನಾಗೌಡರ, ಶೀತಲ ಗಣೆ, ಅರುಣ ಯಂದಗೌಡರ, ಪ್ರಮೋದ ಯಂದಗೌಡರ, ಶುಭಂ ಪಾಟೀಲ, ಚೇತನ ಮಾಳಿ, ನೇಮಗೌಡ ಪಾಲಗೌಡರ, ಸಚೀನ ಜಗತಾಪ, ಉತ್ಕರ್ಷ ಪಾಟೀಲ, ಸುಧರ್ಮ ಪಾಲಗೌಡರ, ಪ್ರಕಾಶ ಮಾಳಿ ಸೇರಿದಂತೆ ಅನೇಕರು ಇದ್ದರು