ರಾಣೆಬೆನ್ನೂರ

ಬೆಳೆವಿಮೆ ಪರಿಹಾರದ ವಿಚಾರದಲ್ಲಿ ಜಿಲ್ಲಾಡಳಿತದ ಮೌನ,

ಬೆಳೆವಿಮೆ ಪರಿಹಾರದ ವಿಚಾರದಲ್ಲಿ ಜಿಲ್ಲಾಡಳಿತದ ಮೌನ,

ಲೋಕದರ್ಶನ ವರದಿ 

ಬೆಳೆವಿಮೆ ಪರಿಹಾರದ ವಿಚಾರದಲ್ಲಿ ಜಿಲ್ಲಾಡಳಿತದ ಮೌನ, 

ರಾಣೇಬೆನ್ನೂರು 29: ಬೆಳವಿಮೆ ಯೋಜನೆಯಲ್ಲಿ ರಿಲಾಯನ್ಸ್‌ ಇನ್ಸೂರನ್ಸ್‌ ಕಂಪನಿಯವರ ತಾರತಮ್ಯ ನೀತಿ ಖಂಡಿಸಿ ಜಿಲ್ಲಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬೀಗ ಜಡಿದು ಸರ್ಕಾರಕ್ಕೆ ಮನವಿ ಕೊಡುವ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನಾಂದೋಲನ ರೀತಿಯಲ್ಲಿ ಭಾರಿ ತಿರುವು ಪಡೆಯುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿರುವುದನ್ನು ನೋಡಿದರೆ ಇದು ಉದ್ಧಟತನದ ಪರಮಾವಧಿಯಲ್ಲದೆ ಬೇರೆನೂ ಅಲ್ಲ ಎಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

      ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಸರದಿಯಲ್ಲಿ ಬೆಳೆವಿಮೆ ಬಾಕಿ ಹಣ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊನ್ನೆ ತಿಂಗಳುಗಳ ತನಕ ಸುರಿದ ಭಾರಿ ಮಳೆಗೆ ಕೊಯ್ಲಿಗೆ ಬಂದ ಬೆಳೆಗಳು ನಾಶವಾಗಿ ಕೊಳೆತು ಹೊಲದಲ್ಲಿಯೇ ಮೊಳಕೆ ಒಡೆದಿದ್ದು ಅವುಗಳಿಗೆ ವೈಜ್ಞಾನಿಕ ಮಾದರಿಯಲ್ಲಿ ಈಗಿನ ಮಾರುಕಟ್ಟೆ ದರದ ರೂಪದಲ್ಲಿ ಬೆಳೆಪರಿಹಾರ ನೀಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.  

     2022-23 ನೇ ಸಾಲಿನಲ್ಲಿ ಸರಕಾರ ಬರಗಾಲ ಅಂತಾ ಘೋಷಿಸಿದ ಮೇಲೆ ಕಾನೂನಿನ ಪ್ರಕಾರ ಬೆಳೆ ಇನ್ಸೂರನ್ಸ್‌ ತುಂಬಿಸಿಕೊಂಡ ರಿಲಾಯನ್ಸ್‌ ಇನ್ಸೂರನ್ಸ್‌ ಕಂಪನಿ ವಿಮೆ ಮಾಡಿಸಿದ ಎಲ್ಲಾ ರೈತರ ಖಾತೆಗಳಿಗೆ ಪೂರ್ಣ ಪ್ರಮಾಣದ ಹಣ ಜಮಾ ಮಾಡದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲವೆಂದರು.  

     ರೈತ ಮುಖಂಡರಾದ ಜಕ್ಕರಡ್ಡಿ ಬಲ್ಲೂರು, ಈರಯ್ಯ ಮಠದ, ಮಂಜಪ್ಪ ಬಾರ್ಕಿ, ಸತೀಶ ಬಣಕಾರ, ಮೈಲಾರ​‍್ಪ ಓಲೇಕಾರ, ರಮೇಶ ಮಣಕೂರ, ಶಿವಪುತ್ರ​‍್ಪ ಎಂ. ಗವಿಯಣ್ಣನವರ, ಮಾರ್ಕಂಡೆಪ್ಪ ಬೈರಣ್ಣನವರ, ನಿಂಗರಡ್ಡಿ ಅಂತರವಳ್ಳಿ, ಮಲ್ಲಿಕಾರ್ಜುನ, ರೇವಣೆಪ್ಪ ಪೂಜಾರ, ಗುರುಬಸಪ್ಪ ಲಕಶೆಟ್ಟಿ, ಶಿದ್ಲಿಂಗಪ್ಪ ಕೋಳೇರ, ಹರಿಹರಗೌಡ ಪಾಟೀಲ, ಹಾಲೇಶ ಕೆಂಚನಾಯ್ಕರ, ಬಸವರಾಜ ಯಲ್ಲಕ್ಕನವರ, ಮುಂತಾದವರು ಭಾಗಹಿಸಿದ್ದರು.  

    ಕಂದಾಯ ಇಲಾಖೆಯ ಮಂಜುನಾಥ, ಕೃಷಿ ಇಲಾಖೆಯ ಶಂಕ್ರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗಣೇಶ ಬಾನಿ ಉಪಸ್ಥಿತರಿದ್ದರು. ಹಲಗೇರಿ ಠಾಣೆಯ ಎ.ಎಸ್‌.ಐ. ಎಸ್‌.ಡಿ. ಕುರಿಯವರ, ಮಾರುತಿ ಬಣಕಾರ ಸೂಕ್ತ ಬಂದೋಬಸ್ತ ಒದಗಿಸಿದ್ದರು.  


ಪೊಟೋೆ :- 

29 ಆರ್‌.ಎನ್‌.ಆರ್ : 05 


ಸುದ್ದಿ ಓದಿ