ಅಲ್ಲಿನ ಆಡಳಿತ ಮಂಡಳಿಯವರ ತ್ಯಾಗಮನೋಭಾವನೆ ಬಹುಮುಖ್ಯವಾಗುತ್ತದೆ
ಅಲ್ಲಿನ ಆಡಳಿತ ಮಂಡಳಿಯವರ ತ್ಯಾಗಮನೋಭಾವನೆ ಬಹುಮುಖ್ಯವಾಗುತ್ತದೆ
ರಾಣೆಬೆನ್ನೂರು 16: ಯಾವುದೇ ಸಂಸ್ಥೆಗಳು ಅವುಗಳು ಉನ್ನತ ಸ್ಥಾನಕ್ಕೆರಬೇಕಾದರೆ, ಅಲ್ಲಿನ ಆಡಳಿತ ಮಂಡಳಿಯವರ ತ್ಯಾಗಮನೋಭಾವನೆ ಬಹುಮುಖ್ಯವಾಗುತ್ತದೆ ಅಂತಹ ತ್ಯಾಗ ಮನೋಭಾವನೆಯಲ್ಲಿ, ಕೆಎಲ್‌ಇ ಸಂಸ್ಥೆ ಬೆಳೆದು ಬಂದಿರುವುದು ನಾಡಿಗೆ ಹೆಮ್ಮೆಯ ಸಂಗತಿಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವ್ಹಿ.ಪಿ. ಲಿಂಗನಗೌಡರ ಹೇಳಿದರು.
ಅವರು, ರಾಣೆಬೆನ್ನೂರು ಮತ್ತು ಹನುಮನಹಟ್ಟಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ, ಏರಿ್ಡಸಲಾಗಿದೆ ಕೆಎಲ್‌ಇ ಸಂಸ್ಥೆಯ 109ನೇ, ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದಿನ ಸಪ್ತರ್ಷಿಗಳು, ಯಾವುದೇ ಸ್ವಾರ್ಥಮನೋಭಾವನೆ ಸಮಾಜ ಸುಧಾರಣೆಯೇ ಮೂಲ ಉದ್ದೇಶವನ್ನು ಹೊಂದಿ ಕಟ್ಟಿದ ಈ ಸಂಸ್ಥೆ, ಇಂದು ನಾಡು ಸೇರಿದಂತೆ ವಿದೇಶಗಳಲ್ಲಿಯೂ ಸಹ ತನ್ನ ಶಿಕ್ಷಣ ಸೇವೆ ನೀಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು. ವಿಶೇಷ ಉಪನ್ಯಾಸ ನಿಡಿದ, ಹಿಂದಿ ವಿಭಾಗದ ಮುಖ್ಯಸ್ಥೆ ಕವಿತಾ ಗಡ್ಡದಗೂಳಿ ಅವರು, ಅಂದು ಮಾಡಿದ ತ್ಯಾಗದ ಪರಿಣಾಮ ಇಂದು ಕೇಳಿ ಶಿಕ್ಷಣ ಸಂಸ್ಥೆ ದೇಶ ವಿದೇಶಗಳಲ್ಲಿ ಹೆಸರು ಮಾಡುವಂತಾಗಿದೆ ಇದು ಹೆಮ್ಮೆಯ ಸಂಗತಿ. ಎಂದ ಅವರು ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ ಎಂದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದವೀರಣ್ಣ ಅಂಗಡಿ, ಜಯಣ್ಣ ಜಂಬಿಗಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಐಶ್ವರ್ಯ ಶೆಟ್ಟರ, ಸುರೇಖಾ ಕಟ್ಟಿ, ಪಿ ಪ್ರಹ್ಲಾದ್, ಜಿ.ಎಸ್. ಚಂದ್ರಶೇಖರ, ಸುಧಾ ಕೋಟಿಹಾಳ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರೊ, ವಿದ್ಯಾಶ್ರೀ ದಾಮೋದರ ಪ್ರಾರ್ಥಿಸಿದರು. ಪ್ರಾಚಾರ್ಯ ನಾರಾಯಣ ನಾಯಕ್ ಎ.ಸ್ವಾಗತಿಸಿ, ಪ್ರೊ, ಸುಜಾತಾ ಹುಲ್ಲೂರ, ನಿರೂಪಿಸಿ, ಪ್ರೊಫೆಸರ್ ರೇಖಾ ಶಿಡೇನೂರ ವಂದಿಸಿದರು.