ಶ್ರೇಷ್ಠ ಸಮಾಜ ನಿರ್ಮಾಣದಲ್ಲಿ ಸ್ತ್ರೀಯರ ಪಾತ್ರ ಅತಿ ಮಹತ್ವದ್ದು - ಸ್ವಾಮಿ ತೇಜಸಾನಂದ ಮಹಾರಾಜ್
ಶ್ರೇಷ್ಠ ಸಮಾಜ ನಿರ್ಮಾಣದಲ್ಲಿ ಸ್ತ್ರೀಯರ ಪಾತ್ರ ಅತಿ ಮಹತ್ವದ್ದು - ಸ್ವಾಮಿ ತೇಜಸಾನಂದ ಮಹಾರಾಜ್
ಹುಬ್ಬಳ್ಳಿ 21: ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಜನನಿಯಿಂದ ಕಲಿತ ಜನರೆ ಧನ್ಯರು ಎಷ್ಟು ಅರ್ಥಗರ್ಭಿತ ಈ ಶತಮಾನದಲ್ಲಿ ಸ್ತ್ರೀಯರು ಮಾಡುತ್ತಿರುವ ಸಾಧನೆ ಅತೀ ಹೆಚ್ಚು ಶ್ರೇಷ್ಠ ಸಮಾಜ ನಿರ್ಮಾಣ ಮಾಡುವಲ್ಲಿ ಸ್ತ್ರೀಯರ ಪಾತ್ರ ಅತಿ ಮಹತ್ವದ್ದು ಎಂದು ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ತೇಜಸಾನಂದಜಿ ಮಹಾರಾಜ್ ಅವರು ಹೇಳಿದರು.
ಅವರು ಕಲ್ಯಾಣಿ ಮಹಿಳಾ ಮಂಡಳಿ ವತಿಯಂದ ದಿನಾಂಕ 20-11-2024 ರ ಸಂಜೆ 6:30ಕ್ಕೆ ಕಲ್ಯಾಣ ನಗರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಹಸ್ರ ದೀಪೋತ್ಸವ ಉದ್ಘಾಟಿಸಿ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತ, ಸ್ವಾಮಿ ವಿವೇಕಾನಂದರು ಹೇಳಿದಂತೆ ಮುಂಬರುವ ಸಮಾಜ ಸ್ತ್ರೀಯರಿಂದ ನಿರ್ಮಾಣವಾಗುತ್ತದೆ ಎಂಬ ಮಾತು ಅಕ್ಷರಶಃ ಕಲ್ಯಾಣಿ ಮಹಿಳಾ ಮಂಡಳಿಯವರು ಮಾಡಿ ತೋರಿಸಿದ್ದಾರೆ ಅವರ ಪ್ರತಿಯೊಂದು ಕಾರ್ಯಕ್ರಮವು ಸಮಾಜಮುಖಿ ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ ರೀತಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ಈಗಾಗಲೇ ಈ ಮಂಡಳಿ ರಜತ ಮಹೋತ್ಸವ ಆಚರಣೆ ಮಾಡಿಕೊಂಡಿದೆ ಶತಮಾನಗಳವರೆಗೆ ಇವರ ಸೇವೆ ನಿರಂತರವಾಗಿ ನಡೆಯಲಿ ದಿವ್ಯತ್ರಯರ ಕೃಪಾಶೀರ್ವಾದ ಸದಾ ಇರಲೆಂದು ಪ್ರಾರ್ಥನೆ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಭಜನೆ ಕಾರ್ಯಕ್ರಮವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್ ಮತ್ತು ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ತೇಜಸಾನಂದಜೀ ಮಹಾರಾಜ್ ಅವರು ಭಜನೆ ನಡೆಸಿಕೊಟ್ಟರು, ಇವರೊಂದಿಗೆ ಡಾ. ನಾಗಲಿಂಗ ಮುರಗಿ ತಬಲಾ, ಕುಮಾರ ಹಾದಿಮನಿ ತಾಳ ಸಾಥ್ ನೀಡಿದರು,
ಇದೇ ಸಂದರ್ಭದಲ್ಲಿ ಕಲ್ಯಾಣಿ ಮಹಿಳಾ ಮಂಡಳಿಯ ಸದಸ್ಯರಿಗಾಗಿ ಅಲಂಕೃತ ಆರತಿ ತಟ್ಟೆ ಸ್ಪರ್ಧೆ ಏರಿ್ಡಸಲಾಗಿತ್ತು 14 ಜನ ಭಾಗವಹಿಸಿದ್ದರು. 4 ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಮಾ ಕುಲಕರ್ಣಿ, ಲಕ್ಷ್ಮೀ ಬೂದಿಹಾಳ, ಸುನೀತಾ ಬಾಗೇವಾಡಿ, ಲತಾ ಯಾವಗಲ್, ಶಾಂತಾ ಕೊಟಗಿ ಸೇರಿದಂತೆ 100ಕ್ಕೂ ಹೆಚ್ಚು ಮಂಡಳಿ ಸದಸ್ಯರು ಭಕ್ತರು ಭಾಗವಹಿಸಿದ್ದರು. ಕಲ್ಯಾಣಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಪ್ರೀತಾ ಛಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದೀಪಾ ಭಾವಿಕಟ್ಟಿ ನಿರೂಪಿಸಿದರು, ದ್ರಾಕ್ಷಾಯಣಿ ಕೋಳಿವಾಡ ವಂದಿಸಿದರು. ಜೈ ರಾಮಕೃಷ್ಣ.