ಜಮಖಂಡಿ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದ್ದುದು: ಅಭಿನವ ಮಂಜುನಾಥ ಶ್ರೀ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದ್ದುದು: ಅಭಿನವ ಮಂಜುನಾಥ ಶ್ರೀ

ಲೋಕದರ್ಶನ ವರದಿ

ಜಮಖಂಡಿ 5:ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವರವಾಗಿದೆ, ಶಿಷ್ಯ ಪರಂಪರೆಯುಳ್ಳ ಭಾರತ ಉತ್ತಮ ಸಂಸ್ಕೃತೀಯ ಮೂಲಕ ಜಗತ್ತಿಗೆ ಮಾದರಿಯಾಗಿದೆ ಎಂದು ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಸಮೀಪದ ಹಿಪ್ಪರಗಿ ಗ್ರಾಮದ ಗುರು ಸಿದ್ರಾಮೇಶ್ವರ ಪ್ರೌಢ ಶಾಲೆಯಲ್ಲಿ ಗುರುನಮನ ಹಾಗೂ1998-99ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅಮರ ಸ್ನೇಹ ಸಂಗಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪರೋಪಕಾರ, ಪರಧರ್ಮಕ್ಕೆ ಗೌರವ ಹಾಗೂ ಗುರುಗಳನ್ನು ಗೌರವಿಸುವದನ್ನು ಎಲ್ಲ ಧರ್ಮಗಳು ಹೇಳಿವೆ, ಗುರು ಹಿರಿಯರು ಹಾಗೂ ಹೆತ್ತವರನ್ನು ಗೌರವಿಸಿದರೆ ಪರಲೋಕದಲ್ಲೂ ಜಯ ಲಭಿಸುತ್ತದೆ ಎಂದರು.

ನಿವೃತ್ತ ಶಿಕ್ಷಕ ಜಿ.ಎಸ್.ಮೊಪಗಾರ ಮಾತನಾಡಿ, ಶಿಕ್ಷಕರಿಗೆ ತಮ್ಮ ಶಿಷ್ಯಂದಿರು ಒಳ್ಳೆಯ ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಹೋಗಿ ದೇಶ ಸೇವೆ ಮಾಡಲು ಪ್ರಾರಂಭಿಸಿದಾಗ ನಮ್ಮ ಋಣ ತೀರಿಸಿದಂತಾಗುತ್ತದೆ ಎಂದರು.

ಶ್ರೀಕಾಂತ ಪವಾರ, ಪರಮೇಶ್ವರ ಕವಟಗಿ, ಸಿದ್ರಾಮ ಕುರಗೋಡ, ಎಸ್.ಐ,ಕನ್ನೋಳ್ಳಿ, ಕೆ.ಎಸ್.ವಾಲಿ, ಕೆ.ಎಸ್.ಗುಂಡವಾಡ, ಜಿ.ಎಸ್.ಬೀಳಗಿ, ಎ.ಬಿ.ಕನ್ನೋಳ್ಳಿ, ಸಿ.ಎಂ.ಕಾಂಬಳೆ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ