ಮಕ್ಕಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಪಾತ್ರ ಮುಖ್ಯ
ಮಕ್ಕಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಪಾತ್ರ ಮುಖ್ಯ
ರಾಣಿಬೆನ್ನೂರ 30: ತಮ್ಮ ಭವಿಷ್ಯವನ್ನು ಸ್ವತಃ ರೂಪಿಸಿಕೊಳ್ಳುವಂತಹ ಮಕ್ಕಳನ್ನು ಸಿದ್ದಪಡಿಸುವುದು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸಮಾಜದ ಶಿಲ್ಪಿಗಳಾದ ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ ಜೊತೆಗೆ ತಿಳುವರಿಕೆ ಮತ್ತು ಉತ್ತಮ ಶಿಕ್ಷಣ ನೀಡಬೇಕು ಎಂದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾಽ ರಾಜು ಶಿರೂರ ಹೇಳಿದರು.
ನಗರದ ಸ್ಪೂರ್ತಿ ಇನ್ಸ್ಟಿಟ್ಯೂಟ್ ಆಪ್ ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜನಲ್ಲಿ ಏರಿ್ಡಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಕಾರಣಕ್ಕೂ ತಮಗೆ ಕಲಿಸಿದ ಗುರುಗಳನ್ನು ಎಂದೂ ಸಹ ಮರೆಯಬಾರದು. ಸದಾ ಸ್ಮರಣೆಯ ಕಾಯಕದಲ್ಲಿ ತೊಡಗಬೇಕು. ಯಾವ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಅಸೂಯೆ, ದ್ವೇಷ ಭಾವನೆ ಬರುವಂತೆ ನಡೆದುಕೊಳ್ಳುವುದಿಲ್ಲ. ಸರ್ವರನ್ನು ಏಕದೃಷ್ಟಿಯಿಂದ ನೋಡಿಕೊಳ್ಳುವವರು ನೈಜ ಶಿಕ್ಷಕರಾಗಿದ್ದಾರೆ ಎಂದರು.
ಮಕ್ಕಳಿಗೆ ಶಿಸ್ತು, ಸಮಯ, ಪಾಠ ಹೇಳುವ ಜೊತೆ ಜೊತೆಗೆ ಪರಿಸರ ದೊಂದಿಗೆ ಪ್ರಾಯೋಗಿಕವಾಗಿಯೂ ನೈಜ ಶಿಕ್ಷಣ ಕೊಡುತ್ತಿದ್ದವರು ಗುರುಗಳು. ಅಂತಹ ಗುರುಗಳು ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ಹಾಗೂ ಸಂಸ್ಕಾರ ನೀಡಿ ಭವಿಷ್ಯ ರೂಪಿಸಬೇಕಾಗಿದೆ ಮತ್ತು ವಿದ್ಯಾರ್ಥಿಗಳು ಸಂಶೋಧನಾತ್ನಕವಾದ ಭಾವನೆಯಿಂದ ನೀವು ಉದ್ಯಾಗದಲ್ಲಿ ತೊಡಗಿದಾಗ ಮಾತ್ರ ಪರಿಪೂರ್ಣ ಜೀವನ ನಿಮ್ಮದಾಗಲಿದೆ ಎಂದು ಡಾಽ ಶಿರೂರ ಹೇಳಿದರು.
ಆರ್ಟಿಇಎಸ್ ಕಾಲೇಜ ಉಪನ್ಯಾಸಕ ಶ್ರೀನಿವಾಸ ನಲವಾಗಲ, ದೇವಿಕಾ ಕಾಲೇಜ ಉಪನ್ಯಾಸಕ ಡಾಽ ರಾಜೇಂದ್ರ ಪೂಜಾರ, ಪತ್ರಕರ್ತ ಮಂಜುನಾಥ ಕುಂಬಳೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಬಸವರಾಜ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗೀರೀಶ ಆನವಟ್ಟಿ, ಉಪನ್ಯಾಸಕರಾದ ಎಂ.ಟಿ. ಬಡಿಗೇರ, ಅಶ್ವಿನಿ ಡಿ.ಪಿ, ಯಶೋಧಾ, ನಯನಾ, ಚೈತ್ರಾ, ಶಾಂತಾ, ದೀಪಾ, ಜೆ.ಕೆ. ಉಲ್ಲಾಮುಲ್ಲಾ ಸ್ಭೆರಿದಂತೆ ವಿದ್ಯಾರ್ಥಿಗಳು ಇದ್ದರು. ನಂತರ ನಡೆದ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಮನ ರಂಜಿಸಿದರು.
ಫೋಟೊ30ಆರ್ಎನ್ಆರ್02ರಾಣಿಬೆನ್ನೂರ:ನಗರದ ಸ್ಪೂರ್ತಿ ಇನ್ಸ್ಟಿಟ್ಯೂಟ್ ಆಪ್ ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜನಲ್ಲಿ ಏರಿ್ಡಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾಽ ರಾಜು ಶಿರೂರ ಉದ್ಘಾಟಿಸಿದರು.