ಸಿರುಗುಪ್ಪ

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

ಲೋಕದರ್ಶನ ವರದಿ

ಸಿರುಗುಪ್ಪ 15 : ತುಂಗಭದ್ರಾ ಜಲಾಶಯದಿಂದ ಗುರುವಾರ ಗರಿಷ್ಠ 32ಗೇಟ್ಗಳ ಮೂಲಕ ನದಿಗೆ 1.41ಲಕ್ಷ  ಕ್ಯೂಸೆಕ್ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಟ್ಟಿದ್ದರಿಂದ ಐತಿಹಾಸಿಕ ನೂರ್ ಮಹಮ್ಮದ್ ಶಾ ದರ್ಗಾ ಅಮೀನುದ್ದೀನ್ ದರ್ಗಾ ಗ್ರಾಮದೇವತೆ ಹಾಗೂ ಶ್ರೀ ಶಂಭುಲಿಂಗ ದೇವಸ್ಥಾನ ನೀರಿನ ಪ್ರವಾಹದಿಂದ ಜಲಾವೃತ ನಗರದ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಸಂಪೂರ್ಣ ನದಿ ತುಂಬಿದೆ ದೇಶನೂರು ಸೇತುವೆ ಮತ್ತು ತೋಟದಲ್ಲಿರುವ ಅಮೀನುದ್ದೀನ್ ದರ್ಗಾದವರೆಗೆ ನೀರು ನದಿಯ ನೀರಿನಲ್ಲಿ ಮಧ್ಯೆ ಇರುವ  ಆಂಜನೇಯ ಮೂತರ್ಿ ಮುಳುಗಿಹೋಗಿದೆ ಶಂಭುಲಿಂಗ ದೇವಸ್ಥಾನದ ದೇಗುಲದಲ್ಲಿ ನೀರು ದೇಶನೂರು ಸೇತುವೆ ನದಿ ನೀರು ನೋಡಲು ಸಾವಿರಾರು ಜನ ಜಮಾಯಿಸುತ್ತಿದ್ದಾರೆ ಮತ್ತು ತಾಲ್ಲೂಕಿನ ಕೆಂಚನಗುಡ್ಡ ತುಂಗಭದ್ರಾ ನದಿ ವಿಜಯನಗರ ಅಣೆಕಟ್ಟುಗಳ ಮೇಲೆ ಹರಿಯುತ್ತಿರುವ ನೀರನ್ನು ನೂರಾರು ಜನ ನೋಡಲು ಬರುತ್ತಿದ್ದಾರೆ. 

          ಇಲ್ಲಿ ಶ್ರೀ ವಸುಧೇಂದ್ರತೀರ್ಥರ ದೇವಸ್ಥಾನ ಮೆಟ್ಟಿಲವರೆಗೂ ನೀರು ಹರಿಯುತ್ತಿದೆ ಇಲ್ಲಿರುವ ಪವರ್ ಕೆನಾಲ್ ಕಾಲುವೆಯಲ್ಲಿ ಕಸದ ರಾಶಿ ನೀರಿಗೆ ನೀರಿನ ಹರಿವಿಗೆ ಅಡ್ಡಿಯಾಗಿದೆ ಅಲ್ಲದೆ ಪವರ್ ಸ್ಟೇಷನ್ ಹತ್ತಿರ ವಿಜಯನಗರ ಕಾಲುವೆ ನೀರು ರಸ್ತೆಯನ್ನು ಕೊರೆದು ನದಿಗೆ ಹರಿಯುತ್ತಿದೆ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ್ದರಿಂದ ನದಿಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ 

ಸುದ್ದಿ ಓದಿ