ಯರಗಟ್ಟಿ

ಜಗತ್ತಿನಲ್ಲಿ ಅತ್ಯಂತ ಸುಂದರ, ಸರಳ ಭಾಷೆ ಕನ್ನಡ: ದೇಸಾಯಿ

ಜಗತ್ತಿನಲ್ಲಿ ಅತ್ಯಂತ ಸುಂದರ, ಸರಳ ಭಾಷೆ ಕನ್ನಡ: ದೇಸಾಯಿ

ಲೋಕದರ್ಶನ ವರದಿ

ಯರಗಟ್ಟಿ 05: ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಪುಣ್ಯವಂತರು. ಇಂಥ ಮಹಾನ್ ಭಾಷೆಯನ್ನು ನಾವು ಪ್ರತಿದಿನ ಮಾತನಾಡಬೇಕು ಮತ್ತು ಬಳಕೆ ಮಾಡಬೇಕು ಎಂದು ಯರಗಟ್ಟಿ ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ ಹೇಳಿದರು.

ಯರಗಟ್ಟಿ ಸಮೀಪದ ತಲ್ಲೂರ ಗ್ರಾಮದ ಗಜಾನನ ವೃತ್ತದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ಸುಂದರ ಮತ್ತು ಸರಳವಾಗಿ ಮಾತನಾಡಲು ಬರುವ ಭಾಷೆ ಕನ್ನಡ. ನಮ್ಮ ಮಕ್ಕಳಿಗೆ ನಾವು ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಎಂದರು.

ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಮಾತನಾಡಿ, ಈ ನಾಡಿನ ಪ್ರತಿಯೊಬ್ಬ ತಾಯಿ ತನ್ನ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನಿಡುವಂತೆ ಪ್ರತಿಜ್ಞೆ ಮಾಡಬೇಕು. ಆಗ ಮಾತ್ರ ಕನ್ನಡ ಭಾಷೆಗೆ ಉಳಿವು ಸಾಧ್ಯ ಎಂದರು.

ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಬಾಬುಗೌಡ ಅಣ್ಣಿಗೆರಿ, ಚಂದ್ರಪ್ಪ ಶಿವಪೂಜಿ, ಬಸವರಾಜ ಕಡಬಿ, ಜಗದೀಶ ಹೊಸಮಠ, ಎ.ವಿ.ಇಂಗಳೆ, ಬಸವರಾಜ ಪೂಜೇರ, ಶಂಕರಗೌಡ ಪಾಟೀಲ, ಡಿ.ಡಿ.ಭೋವಿ, ಚೆನ್ನಯ್ಯ ಪೂಜೇರ, ಫಕೀರಪ್ಪ ಬೆಡಸೂರ, ಮಹಾದೇವ ಶಿವಪೂಜಿ, ಕರಬಸಪ್ಪ ಲಕ್ಕನ್ನವರ, ರಮೇಶ ಚಿಕಾಕಿ, ಮುತ್ತು ಬಡಿಗೇರ, ಬಸವರಾಜ ಸಾಲಿ, ಮಹೇಶ ಲಿಗಾಡಿ, ಪಂಚಪ್ಪ ಕಾಶಪ್ಪನವರ ಸೇರಿದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಇದ್ದರು 

ಸುದ್ದಿ ಓದಿ