ರಾಣೇಬೆನ್ನೂರಲ್ಲಿ ಸೆ.8 ರಂದು ತಾಲೂಕ ಕ್ರೀಡಾಕೂಟ
ರಾಣೇಬೆನ್ನೂರು ಸೆ 6: ನಗರದ ಮೆಡ್ಲೇರಿ ರಸ್ತೆಯ ಆಂಗ್ಲೋ ಉರ್ದು ಶಾಲಾ ಮೈದಾನದಲ್ಲಿ ಸೆಪ್ಟೆಂಬರ್ 8, 2023 ರಂದು ಶುಕ್ರವಾರ ಮುಂಜಾನೆ 10 ಗಂಟೆಗೆ ರಾಣೆಬೆನ್ನೂರು ತಾಲೂಕ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ2023 ಹಾಗೂ 24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ನಡೆಯಲಿದೆ. ಶಾಸಕ ಪ್ರಕಾಶ್ ಕೋಳಿವಾಡ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ತಹಸೀಲ್ದಾರ್ ಎಚ್ಎನ್ ಶಿರಹಟ್ಟಿ, ತಾ.ಪಂ ಇಓ ಸುಮಲತಾ ಎಸ್ ಬಿ, ಡಿವೈಎಸ್ಪಿ ಡಾ ಗಿರೀಶ್ ಬೊಮ್ಮಣ್ಣನವರ್, ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ್, ಸೇರಿದಂತೆ ವಿವಿಧ ಶಿಕ್ಷಣ ಸಂಘಟನೆಗಳ ಅಧ್ಯಕ್ಷ ಪದಾಧಿಕಾರಿಗಳು ಕಾರ್ಯದರ್ಶಿಗಳು ಮತ್ತು ದೈಹಿಕ ಶಿಕ್ಷಕರು ಪಾಲ್ಗೊಳ್ಳುವರು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ವಿ. ದೊಡ್ಮಮನಿ ಕಾರ್ಯದರ್ಶಿ ಪಿ.ಡಿ. ಕೊಕ್ಕನವರ, ಬಿಇಓ, ಎಂ.ಹೆಚ್. ಪಾಟೀಲ್, ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ ಬಿ.ಎಚ್., ಅಕ್ಷರ ದಾಸೋಹ ನಿರ್ದೇಶಕ ಲಿಂಗರಾಜ ಸುತ್ತುಕೋಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.