ರಾಣೆಬೆನ್ನೂರ

ಸಾವಿನ ಸನಿಹಕ್ಕೆ ತಲುಪುವ ಮುನ್ನ ಮುಂಜಾಗ್ರತೆ ವಹಿಸಿ : ಡಾ . ಪುಟ್ಟರಾಜ

ಸಾವಿನ ಸನಿಹಕ್ಕೆ ತಲುಪುವ ಮುನ್ನ ಮುಂಜಾಗ್ರತೆ ವಹಿಸಿ : ಡಾ . ಪುಟ್ಟರಾಜ

ರಾಣೇಬೆನ್ನೂರು:  ಮನುಷ್ಯನ ಜೀವನ ಯಾಂತ್ರಿಕತೆಯತ್ತ ಸಾಗಿದೆ ಹೀಗಾಗಿ ಇಂದು ಅನೇಕ ರೀತಿಯ ಕಾಯಿಲೆ ಕಸಾಲೆಗಳಿಗೆ ಒಳಗಾಗುತ್ತಿದ್ದೇವೆ ಆದ್ದರಿಂದ ಸಣ್ಣವರು ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಹೃದಯ ತಪಾಸಣೆಗೆ ಒಳಪಡಬೇಕಾದ ಇಂದಿನ ಅಗತ್ಯವಿದೆ ಎಂದು ಬ್ಯಾಡಗಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜು ಕರೆ ನೀಡಿದರು.           ಶನಿವಾರ ಮಾರುತಿ ನಗರದ ಅರುಣೋದಯ ಸ್ಪೋರ್ಟ್ಸ್ ಕ್ಲಬ್, ಸಂತೋಷ್ ಹೈಟೆಕ್, ಮತ್ತು ರಾಣೇಬೆನ್ನೂರು ರಕ್ತ ನಿಧಿ ಕೆಂದ್ರ, ಆಯೋಜಿಸಿದ್ದ  ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.   

  ಇತಿಹಾಸದಿಂದ ಇಂದಿನವರೆಗೂ ಕಾಯಿಲೆಗಳ ಕುರಿತು ಅವಲೋಕಿಸಿದರೆ ಕೋವಿಡ್ ನಂತರ ಹೃದಯಕ್ಕೆ ಸಂಬಂಧಿಸಿದಂತೆ ಕಾಯಿಲೆ ಗಂಭೀರತೆ ಪಡೆದುಕೊಂಡಿದೆ. ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿತೋಡುವ ಮುನ್ನವೇ, ಪೂರ್ವ ಜಾಗೃತಿ  ವಹಿಸಬೇಕಾಗಿದೆ.ಯಾವುದೇ ರೀತಿಯಲ್ಲಿ ಕಾಯಿಲೇಯ ಲಕ್ಷಣಗಳು ಕಂಡು ಬಂದಲ್ಲಿ, ನಿರಾಶಕ್ತಿ ತೋರದೆ, ತಕ್ಷಣವೇ ವೈದ್ಯರ ಬಳಿ, ತಪಾಸಣೆಗೂಳ ಪಡಬೇಕು, ಇದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ ಈ ವಿಷಯದಲ್ಲಿ ಯಾರು ನಿರ್ಲಕ್ಷತನ ತೋರಬಾರದು ಎಂದರು. ಮುಖ್ಯ ಅತಿಥಿಯಾಗಿದ್ದ,ದಾವಣಗೆರೆ ನಾರಾಯಣ ಹೃದಯಾಲಯದ ಡಾ . ಗುರುರಾಜ್ ಬಿ. ಅವರು, ಜನಸಾಮಾನ್ಯರು ಇಂದಿನ ಆರ್ಥಿಕ  ಸಂಕಷ್ಟ ಪರಿಸ್ಥಿತಿಯಲ್ಲಿ, ಆರೋಗ್ಯ ರಕ್ಷಣೆ ಕುರಿತಂತೆ ಯಾರು ಚಿಂತಿಸುವುದಿಲ್ಲ. ಹಣ ಸಾಕಷ್ಟು ಗಳಿಸಬಹುದು.ಆದರೆ ಹೋದ ಪ್ರಾಣ ಎಷ್ಟೇ ಹಣ ಕೊಟ್ಟರು ಮರಳಿ ತರಲು ಸಾಧ್ಯವಾಗಲಾರದು.ಎಲ್ಲರೊ ಪ್ರಾಥಮಿಕ ಹಂತದಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಗೂಳಪಡಬೇಕು ಎನ್ನುವ, ಸಮುದ್ದೇಶದಿಂದ, ಯಾವುದೇ  ಆರ್ಥಿಕ ವೆಚ್ಚವಿಲ್ಲದೆ,ತಮ್ಮ ಸಂಸ್ಥೆ ಇಂತಹ ಶಿಬಿರಗಳ ಮೂಲಕ, ಸಂಪೂರ್ಣ ಸಮಾಜ ಸೇವಾ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದರು.   

    ಇನ್ನೊರ್ವ ಅತಿಥಿ, ಸಾರ್ವಜನಿಕ ಸರ್ಕಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜು ಶಿರೂರು ಅವರು, ಬಿ.ಪಿ,ಶುಗರ್, ಸೇರಿ ಯಾವುದೇ ಕಾಯಿಲೆಗಳಿಗೆ ನಿಯಮಿತವಾಗಿ ಔಷಧಿಗಳನ್ನು ಸೇವಿಸಿದ ಮಾತ್ರಕ್ಕೆ ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಬೇಡ. ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆಗೂಳಪಡಬೇಕು.  ಆಹಾರ ಕ್ರಮದಲ್ಲಿ ಅಗತ್ಯಕ್ಕೆ ತಕ್ಕಷ್ಟು ಬದಲಾವಣೆ ಅನುಸರಿಸುವುದು ಇಂದು ಬಹುಮುಖ್ಯವಾಗಿದೆ ಎಂದರು.       

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರುಣೋದಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚೋಳಪ್ಪ ಕಸವಾಳ ಅವರು, ಸಂಸ್ಥೆ ಕ್ರೀಡಾ ಚಟುವಟಿಕೆಗಳ ಜೊತೆಗೆ, ಸ್ಪರ್ಧಾತ್ಮಕ ಕಾರ್ಯಕ್ರಮಗಳು, ಮತ್ತು ಇಂತಹ ಆರೋಗ್ಯ ಶಿಬಿರಗಳು ಮತ್ತು ಇನ್ನಿತರೆ ಸಾಮಾಜಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.   

      ಸಮಾಜದಲ್ಲಿ ಸೇವೆ ಮಾಡಲು ಅನೇಕ ರೀತಿ ಅವಕಾಶಗಳಿವೆ ಇಂದು ಆಯೋಜಿಸಿರುವ ಹೃದಯ ತಪಾಸಣಾ ಶಿಬಿರದಿಂದ, ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಿದೆ ಇಂಥಹ ಶಿಬಿರಗಳು, ಮೇಲಿಂದ ಮೇಲೆ  ಆಯೋಜಿಸುವ ಮೂಲಕ ಮತ್ತಷ್ಟು ಸೇವಾ ಕಾರ್ಯಗಳು ಮಾಡುವ ಸ್ಫೂರ್ತಿ ಬಂದಿದೆ ಎಂದರು. ವೇದಿಕೆಯಲ್ಲಿ, ಉಪಾಧ್ಯಕ್ಷ ರಾಜು ಗೌಡ ಶಿವಣ್ಣನವರ್, ಕಾರ್ಯದರ್ಶಿ ರಮೇಶ್ ಹಳ್ಳಪ್ಪಗೌಡ್ರ, ಖಜಾಂಚಿ ಸಿದ್ದಪ್ಪ ಅತಡ್ಕರ್, ಸದಸ್ಯರಾದ ಪಿ.ಏಸ್.ಕೊಪ್ಪದ, ಚಂದ್ರು ತೆಂಬದ, ಬಸವರಾಜ ತೆಲಗಿ, ಬಸವರಾಜ ಮಳವಳ್ಳಿ ಚನ್ನಬಸಪ್ಪ ತೋಟಪ್ಪನವರ, ಪ್ರಕಾಶ ಮೊರಶಿಳ್ಳಿನ್, ಮಂಜು ಗೌಡ ಶಿವಣ್ಣನವರ್, ಬಸವರಾಜ ಹುಚ್ಚಗೊಂಡರ, ಸೋಮು ಗೌಡ ಶಿವಣ್ಣನವರ್, ಮುತ್ತು ಮಲ್ಲಾಡದ, ಸೇರಿದಂತೆ ಮತ್ತಿತರ ಗಣ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಡೆದ ಹೃದಯ ತಪಾಸಣಾ ಶಿಬಿರದಲ್ಲಿ ನಗರದ ತಾಲೂಕಿನ 300ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡು ವೈದ್ಯಕೀಯ ತಂಡವು ನೀಡಿದ ಸೇವೆಯನ್ನು ಪಡೆದುಕೊಂಡರು. ನಾರಾಯಣ ಹೃದಯಾಲಯದ ವೈದ್ಯರಾದ, ಡಾ ಪ್ರಸನ್ನ ಕುಮಾರ್, ಡಾ. ರವಿ ಸಾಲ್ಮನಿ, ಮತ್ತಿತರ ಸಿಬ್ಬಂದಿ  ಪಾಲ್ಗೊಂಡಿದ್ದರು.  ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ದಾನಿಗಳನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ಸದಸ್ಯ ಮಾಲತೇಶ ಚಳಗೇರಿ, ಸ್ವಾಗತಿಸಿ, ನಿರೂಪಿಸಿ ವಂದಿಸಿದರು

ಸುದ್ದಿ ಓದಿ