ಧಾರವಾಡ - ಹುಬ್ಬಳ್ಳಿ

ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಓದುವುದರಿಂದ ಉತ್ತಮ ಸಾಧನೆ ಮಾಡಬಹುದು

ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಓದುವುದರಿಂದ ಉತ್ತಮ ಸಾಧನೆ ಮಾಡಬಹುದು


ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಓದುವುದರಿಂದ ಉತ್ತಮ ಸಾಧನೆ ಮಾಡಬಹುದು 

ಧಾರವಾಡ 26: ಡಾ. ಡಿ.ಜಿ.ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಆರ್‌.ಎಸ್‌.ಶೆಟ್ಟಿ ಕಾಲೇಜ ಆಫ್ ಕಾಮರ್ಸ್‌ ಹಾಗೂ ರುಕ್ಮಿಣಿ ಶೆಟ್ಟಿ ಮೆಮೊರಿಯಲ್ ಸುಧಾಕರ ಶೆಟ್ಟಿ ಬಿಸಿಎ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ಬಿ.ಕಾಂ, ಬಿಸಿಎ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಠ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು. 

 ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸನ್ನ ಎಸ್‌.ಶೆಟ್ಟಿ, ಶೆಟ್ಟಿ ಕನ್ಸಟ್ರಕ್ಷನ್ಸ್‌ ್ಘ ಕಂ. ಹುಬ್ಬಳ್ಳಿ ಇವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶ್ರಮ ಮತ್ತು ಪ್ರಯತ್ನ ಪಟ್ಟು ಓದಿದರೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಹಾಗೂ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಓದುವುದರಿಂದ ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು. 

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಸಿಎ ಎಸ್‌.ಬಿ.ಶೆಟ್ಟಿ, ಪ್ರಾಕ್ಟಿಸಿಂಗ್ ಚಾರ್ಟಡ್ ಅಕೌಂಟಂಟ್, ಹುಬ್ಬಳ್ಳಿ ಇವರು ಮಾತನಾಡಿ ವಿದ್ಯೆಯನ್ನುವುದು ಕಾಮಧೇನು ಇದ್ದ ಹಾಗೆ ಯಾರಲ್ಲಿ ಕೂಡ ಭೇದ ಮಾಡದು. ಶ್ರೀಮಂತನಾಗಿರಲಿ, ಬಡವನಾಗಿರಲಿ, ಯಾವುದೇ ಅಂಗವೈಕಲ್ಯ ಹೊಂದಿರಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿ ಯಾರನ್ನು ಕೂಡ ಭೇಧ ಮಾಡದೇ ಒಲಿಯುತ್ತದೆ ಆದರೆ ಕೇವಲ ಶ್ರಮದಿಂದ ಮಾತ್ರ ವಿದ್ಯೆಯನ್ನು ಒಲಿಸಿಕೊಳ್ಳಬಹುದು. ಹಳೆಯ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ರಾಯಭಾರಿಗಳಿದ್ದ ಹಾಗೆ. ತಾವು ಕಲಿತ ವಿದ್ಯಾಸಂಸ್ಥೆಯ ಬಗ್ಗೆ ಗೌರವ ಇಟ್ಟುಕೊಳ್ಳುವುದರಿಂದ ಕಲಿತ ವಿದ್ಯೆ ಸಮಾಜಕ್ಕೆ ಕೃತಜ್ಞತೆಯನ್ನು ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು. 

ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ.ಜಿ.ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಕಷ್ಟ ಪಟ್ಟು ಒದುವುದರ ಜೊತೆಗೆ ಬುದ್ದಿವಂತಿಕೆಯಿಂದ ಚುರುಕಾಗಿ ಕೆಲಸ ಮಾಡುವುದರಿಂದ ಯಶಸ್ಸು ಸಾಧಿಸಬಹುದು. ನಮ್ಮ ಹತ್ತಿರ ದುಡ್ಡಿಲ್ಲ ನಾವು ಬಡವರು ಅನ್ನುವುದಕ್ಕಿಂತ ಸಾಧನೆ ಮಾಡಿದರೆ ಸಾಮಾನ್ಯ ವ್ಯಕ್ತಿ ಕೂಡಾ ಉನ್ನತ ಸ್ಥಾನವನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದರು. 

ಡಾ.ಎಸ್‌.ಎಮ್ ಸಾಲಿಮಠ ಹಾಗೂ ರಶ್ಮಿ ಶೆಟ್ಟಿ ಇವರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ  ಕು. ಭೂಮಿಕಾ ಮುಳಗುಂದ ಹಾಗೂ  ಕು. ಶೃತಿ ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು  ಕು. ಅಕ್ಷತಾ ವಂದಿಸಿದರು. ಎಲ್ಲಾ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ