ಜಮಖಂಡಿ

ವಿದ್ಯಾರ್ಥಿಗಳಿಗೆ ಶಿಷ್ಯವೇತನ ಅಭಿಯಾನ ಕಾರ್ಯಗಾರ

ವಿದ್ಯಾರ್ಥಿಗಳಿಗೆ ಶಿಷ್ಯವೇತನ ಅಭಿಯಾನ ಕಾರ್ಯಗಾರ

ಲೋಕದರ್ಶನ ವರದಿ,

ಜಮಖಂಡಿ24: ವಿದ್ಯಾರ್ಥಿ ವೇತನ ತಂತ್ರಾಂಶ ಮೂಲಕ ಶಿಷ್ಯವೇತನ ಅನುಷ್ಠಾನಗೊಳಿಸಲಾಗುತ್ತಿದ್ದು, ವಿದ್ಯಾರ್ಥಿ ಗಳು ಅಂತರಜಾಲದ ಮೂಲಕ ಅರ್ಜಿ  ಸಲ್ಲಿಸಬೇಕು. ವಿದ್ಯಾರ್ಥಿ ಗಳು ಆಧಾರ ಜೋಡಣೆಯಾಗಿರುವ ಬ್ಯಾಂಕ್ ಖಾತೆ ನೀಡದಾದ ನೇರವಾಗಿ ಖಾತೆಗೆ ಜಮಾ ಆಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಗಡ್ಡದೇವರಮಠ ಹೇಳಿದರು.

ತಾಲೂಕಿನ ಹುನ್ನೂರ ಗ್ರಾಮದ ಸರಕಾರಿ ಪ್ರಥಮ ದರ್ಜಿ  ಕಾಲೇಜಿನ ಸಭಾಭವನದಲ್ಲಿ ವಿದ್ಯಾರ್ಥಿ  ಕಲ್ಯಾಣವಿಭಾಗ, ಐ.ಕ್ಯೂ.ಎ.ಸಿ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಗಳಿಗೆ ಶಿಷ್ಯವೇತನ ಅಭಿಯಾನ ಕಾರ್ಯಗಾರದಲ್ಲಿ ಮಾತನಾಡಿದರು.

ಪಿ.ಯು.ಸಿ ಪಾಸಾದ ವಿದ್ಯಾರ್ಥಿಗಳಿಗೆ 20 ಸಾವಿರ, ಪದವಿ ಪಾಸಾದವರಿಗೆ 25 ಸಾವಿರ ಹಾಗೂ ಸ್ನಾತಕೋತ್ತರ ಪದವಿ ಪಾಸಾದವರಿಗೆ ತಲಾ 30 ಸಾವಿರ  ಪ್ರೋತ್ಸಾಹ ಧನ ನೀಡಲಾಗುತ್ತದೆ. ಶಿಷ್ಯ ವೇತನ ಮತ್ತು ಪ್ರೋತ್ಸಾಹ ಧನದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉನ್ನತಶಿಕ್ಷಣ ಪಡೆಯುವುದರೊಂದಿಗೆ ತಮ್ಮ ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು. ಎಸ್.ಎಸ್.ಪಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಇ-ದೃಡೀಕರಣ ಯಾಕೆ? ಮತ್ತು ಹೇಗೆ, ಕುಟುಂಬ ನೋಂದಣಿ ಸಂಖ್ಯೆ ಪಡೆಯುವುದು ಹೇಗೆ ಎಂಬ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲಕಿ ಡಾ. ಸುನಂದಾ ಶಿರೂರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉದ್ಧೇಶದಿಂದ ಹಲವು ಶಿಷ್ಯವೇತನದ ಯೋಜನೆಗಳನ್ನು ಅನುಷಾನಗೊಳಿಸುತ್ತಿವೆ. ವಿದ್ಯಾರ್ಥಿಗಳು ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಸ್ವಾವಲಂಭಿಗಳಾಗಿ ಬದುಕು ಸಾಗಿಸಿ ದೇಶಕ್ಕೆ ನಿಮ್ಮದೆಯಾ ಕೊಡುಗೆ ನೀಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಸಿದ್ದರಾಮ ಗೋಲಾಯಿ ಮಾತನಾಡಿದರು. ವಿದ್ಯಾರ್ಥಿ  ಕಲ್ಯಾಣ ಘಟಕ ಸಂಯೋಜನಾಧಿಕಾರಿ ಡಾ.ಪಿ.ಜೈಪ್ರಕಾಶ, ಪ್ರೊ.ಪಿ.ಡಿ.ಬಡಿಗೇರ, ಪ್ರೊ. ಶೈಲಾ ಸೂಳೆಭಾವಿ ಡಾ.ವಿ. ಆರ್. ದಳವಾಯಿ, ಪ್ರೊ. ಪ್ರವೀಣ್ ಖವಾಸಿ, ಪ್ರೊ.ರಾಜೇಶ ಕೆರೂರ, ಪ್ರೊ..ಆರ್.ಬಿ.ಮುದ್ದೇಬಿಹಾಳ, ಸಮಾಜ ಕಲ್ಯಾಣ ಇಲಾಖೆ ಅನುರಾಧ ಭಜಂತ್ರಿ, ಶೀತಲ ಲಗಳಿ ಸಹಿತ ಹಲವರು ಇದ್ದರು.

ಮಹಾವಿದ್ಯಾಲಯದ 300ಕ್ಕಿಂತ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ಡದೇವರಮಠ ಅವರನ್ನು ಸನ್ಮಾನಿಸಲಾಯಿತು.

 

ಸುದ್ದಿ ಓದಿ