ಜಮಖಂಡಿ

ಕನಕದಾಸರ ಚಿಂತನೆಗೆ ಸಮಾಜದವರು ಒಂದಾಗಿ: ಶಾಸಕ ಆನಂದ

ಕನಕದಾಸರ ಚಿಂತನೆಗೆ ಸಮಾಜದವರು ಒಂದಾಗಿ: ಶಾಸಕ ಆನಂದ

ಲೋಕದರ್ಶನ ವರದಿ,

ಜಮಖಂಡಿ 10: ಕನಕದಾಸರ ಸಮಾಜದಲ್ಲಿ ಯಾವುದೇ ತರಹದ ಭಿನ್ನಾಪ್ರಾಯಗಳು ಮತ್ತು ಒಡಕ್ಕುತನ ಮಾಡದೆ ಎಲ್ಲರೂ ಒಂದಾಗಿ. ಕನಕದಾಸರ ಚಿಂತನೆಗೆ ಸಮಾಜದವರು ಒಂದಾಗಬೇಕೆಂದು ಶಾಸಕ ಆನಂದ ನ್ಯಾಮಗೌಡ ಕರೆ ನೀಡಿದರು.

ನಗರದ ಎಸ್.ಆರ್,ಎ, ಕ್ಲಬ್ ಬಳಿ ಕನಕದಾಸರ ನೂತನ ಕಟ್ಟಡದ ಸರ್ಕಲ್ ನಿಮರ್ಾಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಮಾಜದಲ್ಲಿ ಎಷ್ಟೇ ಭಿನ್ನಾಪ್ರಾಯಗಳು ಇದ್ದರೆ ಅವುಗಳನ್ನು ಅದನ್ನು ಬದಿಗೆ ಇಟ್ಟು. ಸಮಾಜ ಏಳ್ಗೇಗೆ ಎಲ್ಲರೂ ಒಂದಾಗಿ ಸಮಾಜ ಕಟ್ಟು ಕೆಲಸ ಮಾಡಬೇಕು. ಈ ಹಿಂದೆ ನಗರಸಭೆಯಲ್ಲಿ ಕನಕದಾಸರ ಸರ್ಕಲ್ ನೀಮರ್ಾಣದ ಬಗ್ಗೆ ಠರಾವು ಪಾಸ ಮಾಡಲಾಗಿತ್ತು. ನಮ್ಮ ತಂದೆಯವರು ಕನಕದಾಸರ ಸರ್ಕಲ್ ನಿರ್ಮಿಸಬೇಕೆಂದು ಅವರ ಕನಸುವಾಗಿತ್ತು. ಸಮಾಜ ಬಂಧುಗಳು ನನಗೆ ಸರ್ಕಲ್ ಉದ್ಘಾಟನೆಯ ಬಗ್ಗೆ ಮಾಹಿತಿಯನ್ನು ತಿಳಿಸಿದಾಗ. ಅದಕ್ಕೆ ಒಪ್ಪಿಕೊಂಡಿರುವೆ. ನಾನು ಕನಕ ಸಮಾಜದ ಜೊತೆಯಲ್ಲಿ ಸದಾ ಸಿದ್ದವಾಗಿ ಇರುತ್ತೇನೆ. ಸರ್ಕಲ್ ನಿರ್ಮಾಣಕ್ಕೆ ಸಹಾಯ ಸಹಕಾರ ಬೇಕಾದರೆ ಕೇಳಿ ಎಂದಿದೆ ಎಂದರು.

ಕನಕದಾಸರ ಚಿಂತನೆಗಳನ್ನು ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು. ಸರ್ಕಲ್ ನಿರ್ಮಾಣದಲ್ಲಿ ಬೇರೆ ಸ್ಥಳದಲ್ಲಿ ಕಟ್ಟಡ ಕಟ್ಟಲು ತಿರ್ಮಾನಿಸಿದಿರಿ. ಆದರೆ ಎಲ್ಲರೂ ಸೇರಿಕೊಂಡು. ಸರ್ಕಲ್ ನಿರ್ಮಾಣ ಎಲ್ಲಿ ಮಾಡಿದರೆ ಸೂಕ್ತ ಎಂದು ಹೇಳಿದೆ. ಅದಕ್ಕೆ ನಿಮ್ಮ ಅಭಿಪ್ರಾಯದಂತೆ ಸರ್ಕಲ್ ಕಟ್ಟಡ ನಿರ್ಮಿಸಿಲಾಗಿದೆ. ನಿಮ್ಮಲ್ಲಿ ಎಷ್ಟೇ ಭಿನ್ನಾಪ್ರಾಯಗಳು ಇದ್ದರೆ. ಅದನ್ನು ಬಿಟ್ಟು ಎಲ್ಲರೂ ಒಂದಾಗಿ ಎಂದರು.

ಅರ್ಜುನ ದಳವಾಯಿ ಮಾತನಾಡಿದರು. ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಮಾಜಿ ಜಿಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಚಿನ ಕುಲಕಣರ್ಿ, ಸಂಗು ದಳವಾಯಿ, ರಾಮಣ್ಣ ಕಡಕೋಳ, ಹುವಪ್ಪ ಉಷಾಕರ, ಸಿದ್ದಪ್ಪ ಕುಲ್ಲೋಳಿ, ನಿಂಗಪ್ಪ ಹೆಗಡೆ, ನಿಂಗಪ್ಪ ತೇರದಾಳ, ನಾಗಪ್ಪ ಹೆಗಡೆ, ಸಂಗಪ್ಪ ಅಂಕಲಗಿ,ಎಮ್,ಎಸ್,ಜಕ್ಕನ್ನವರ, ಪರಮಾನಂದ ಚಿಗರಿ,ಕರೇಪ್ಪ ಎಣ್ಣಿ, ದುಂಡಪ್ಪ ಬಬಲಾದಿ,ಹಣಮಂತ ಟಕ್ಕಲಕಿ,ಶ್ರೀಶೈಲ್ ಬನ್ನವಗೋಳ ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ