ಕಣ್ಣೀರು ಒರೆಸುವ ಒಳಮೀಸಲಾತಿ ಜಾರಿಮಾಡಿ
ಕಣ್ಣೀರು ಒರೆಸುವ ಒಳಮೀಸಲಾತಿ ಜಾರಿಮಾಡಿ
ಹುಬ್ಬಳ್ಳಿ 29: ಮಾದಿಗ ಸಮಾಜ ಒಳಮೀಸಲಾತಿಗಾಗಿ 3 ದಶಕದಿಂದ ನಿರಂತರ ಹೋರಾಟ ಮಾಡುತ್ತಿದೆ. ಶೋಷಿತರಲ್ಲಿ ಅತ್ಯಂತ ಶೋಷಿತರ ಕಣ್ಣೀರು ಒರೆಸುವ ಬದಲು ಕರ್ನಾಟಕ ಸರ್ಕಾರ ಅವರ ಕಣ್ಣಿಗೆ ಮಣ್ಣೆರಚುವ ಹೊಸ ಆಯೋಗ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ಒಳಮೀಸಲಾತಿಪರ ತೀರ್ು ನೀಡಿ ಸರಿಸುಮಾರು ಮೂರು ತಿಂಗಳು ಕಳೆದರೂ ಜಪ್ಪೆನ್ನದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಇದೀಗ ಉಪಚುನಾವಣೆಯಲ್ಲಿ ಮಾದಿಗರ ವೋಟುಗಳನ್ನು ಕಬಳಿಸಲು ಕುತಂತ್ರವನ್ನು ಹೂಡಿ ಹೊಸದಾಗಿ ಆಯೋಗವನ್ನು ರಚಿಸುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಕಾಲಹರಣ ಮಾಡುವ ಹೊಸ ನಾಟಕವನ್ನು ಶುರು ಮಾಡಿದ್ದಾರೆ ಎಂದು ಮಾದಿಗ ದಂಡೋರ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿ ಅವರು ಇಂದು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಹೊಸದೊಂದು ಆಯೋಗ ರಚಿಸಿ ಅನ್ನುವ ಬೇಡಿಕೆ ಮಾದಿಗ ಸಮಾಜವಾಗಲಿ ಅಥವಾ ಯಾವ ಒಳಮೀಸಲಾತಿ ಹೋರಾಟಗಾರರಾಗಲಿ ಬೇಡಿಕೆ ಸಲ್ಲಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಸಾಮಾಜಿಕ ನ್ಯಾಯಪರವಾಗಿದ್ದಿದ್ದರೆ, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ತಮ್ಮ ಮೊದಲನೇ ಸಚಿವ ಸಂಪುಟ ಸಭೆಯಲ್ಲಿಯೇ ಒಳಮೀಸಲಾತಿ ಜಾರಿಗೆ ಕ್ರಮ ವಹಿಸಬೇಕಾಗಿತ್ತು, ಆದರೆ ಸುಪ್ರೀಂ ತೀರ್ಿನ ನಂತರವೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸದೆ ಬರೀ ಕುಂಟುನೆಪಗಳನ್ನು ಮುಂದಿಡುತ್ತಾ ಬಂದಿದೆ. ಈಗ ಉಪಚುನಾವಣೆಯಲ್ಲಿ ಓಟಿನ ಆಸೆಗೆ ಬಿದ್ದು ಈ ಕಾಟಾಚಾರದ ನಿರ್ಣಯ ಘೋಷಿಸಿದೆ. ಸರ್ಕಾರದ ಈ ನಿರ್ಧಾರವನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದಿದ್ದಾರೆ.ಹೊಸ ಆಯೋಗದ ವರದಿಯವರೆಗೆ ಯಾವುದೇ ನೇಮಕಾತಿಗಳನ್ನು ನಡೆಸುವುದಿಲ್ಲ ಎಂದಿರುವ ಸರ್ಕಾರ, ಈಗಾಗಲೇ ಕಳೆದ ತಿಂಗಳು ತರಾತುರಿಯಲ್ಲಿ ಕೈಗೊಂಡಿರುವ ಸುಮಾರು 35 ಸಾವಿರ ನೇಮಕಾತಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂಬುವ ಯಾವುದೇ ಮಾತು ಆಡದೆ ವಂಚಿತ ಸಮುದಾಯಗಳನ್ನು ದಾರಿ ತಪ್ಪಿಸುವುದಕ್ಕೆ ಮುಂದಾಗಿದೆ.
ಜನಸಂಖ್ಯೆಯ ದತ್ತಾಂಶದ ಕ್ಯಾತೆ ತೆಗೆಯುವವರು ಸುಪ್ರೀಂಕೋರ್ಟಿನ ತೀಪು ಬರುವರೆಗೂ ಸುದ್ದಿಯಲ್ಲೇ ಇರಲಿಲ್ಲ. ಸದಾಶಿವ ಆಯೋಗಕ್ಕೆ , ಮಾಧುಸ್ವಾಮಿ ಸಮಿತಿಗೆ ಯಾವ ಮನವಿಗಳನ್ನು ಸಲ್ಲಿಸದೆ, ಇದೀಗ ದತ್ತಾಂಶದ ಕ್ಯಾತೆ ತೆಗೆಯುವವರ ಹಿಂದೆ ರಾಜಕೀಯ ಹಿತಾಸಕ್ತಿ ಆಡಗಿದೆ. ಡಾ. ಎಚ್.ಸಿ. ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದಿಗ ಸಮಾಜಕ್ಕೆ ಮತ್ತೆ ಮೋಸ ಮಾಡಿದ್ದಾರೆ ಎಂದು ಅವರು ದೂರಿದರು.ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಮೂರು ಉಪಚುನಾವಣೆಯಲ್ಲಿ ಸೋಲಿಸುವುದರ ಮೂಲಕ ಪಾಠ ಕಲಿಸಲಾಗುವುದು. ಈ ನಿಟ್ಟಿನಲ್ಲಿ ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಮಂದಕೃಷ್ಣ ಮಾದಿಗ ಅವರ ಸೂಚನೆಯಂತೆ ರಾಜ್ಯಾಧ್ಯಕ್ಷರಾದ ಬಿ ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಳಮೀಸಲಾತಿ ವಿರೋಧಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಒಖಕಖ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿ, ಹಿರಿಯ ಮುಖಂಡರಾದ ಸಹದೇವ ಮಾಳಗಿ, ಶ್ರೀಮತಿ ಹಂಸವೇಣಿ, ರಂಗನಾಯಕ ತಪೇಲ, ಒಖಕಖ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಎಂ, ಗುರುನಾಥ ಅತ್ತಿಗುಡ್ಡ, ಗೋಪಾಲ ದೊಡ್ಡಮನಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.