ಸಿದ್ದೇಶ್ವರ ಜಾತ್ರೆ: ಇಂದು ಬೃಹತ್ ಕೃಷಿ ಮೇಳ
ಕಾಗವಾಡ 14: ಐನಾಪುರ್ ಪಟ್ಟಣದ ಸಿದ್ದೇಶ್ವರ ದೇವರ 53ನೇ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿ 15 ರಂದು ಬೃಹತ್ ಕೃಷಿ ಮೇಳವನ್ನು ಏರ್ಪಡಿಸಲಾಗಿದ್ದು ಶಾಸಕ ಶ್ರೀಮಂತ ಪಾಟೀಲ ಉದ್ಘಾಟಿಸಲಿದ್ದಾರೆ. ಹಣಮಾಪುರ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು, ಬಸವೇಶ್ವರ ಸ್ವಾಮೀಜಿ ಸಾನಿದ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಧ್ವಜಾರೋಹಣ ನೇರವೇರಿಸುವರು. ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಗಾಣಿಗೇರ, ದಾದಾ ಗೌಡ ಪಾಟೀಲ ಉಪಸ್ಥಿತರಿರುವರು.
ಜ 16ರಂದು ಜೋಡು ಕುದುರೆ ಗಾಡಿ ಶರ್ಯತು ಹಾಗು ಶ್ವಾನ ಪ್ರದರ್ಶನ ಬಹುಮಾನ ವಿತರಣೆ ಜರುಗಲಿದೆ. ಮಾಜಿ ಶಾಸಕ ರಾಜು ಕಾಗೆ ಕಾರ್ಯಕ್ರಮ ಉದ್ಘಾಟಿಸುವರು. ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೋಳಿ, ಮಾಜಿ ಸಚಿವ ವೀರ ಕುಮಾರ ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಜಮಖಂಡಿ ಶಾಸಕ ಆನಂದ ನ್ಯಾಮಗೌಡರ, ಶಿವಶಕ್ತಿ ಶುಗರ್ಸಿ ಅಧ್ಯಕ್ಷ ಅಮಿತ ಕೋರೆ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಮತ್ತಿತರರು ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.
ದಿ. 17ರಂದು ಸಾಧಕರಿಗೆ ಸಮಾರಂಭ ನಡಯಲಿದೆ. ದಿ. 18ರಂದು ಕೃಷಿ ವಿಚಾರ ಸಂಕಿರಣ ಹಾಗೂ ಉತ್ತಮ ಕೃಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಜರುಗಲಿದೆ. ಪ್ರಗತಿಪರ ರೈತ ಮೋಹನ ಮುತಾಲಿಕ, ಅಧ್ಯಕ್ಷತೆ ವಹಿಸುವರು. ಉಗಾರ ಸಕ್ಕರೆ ಕಾರ್ಖಾನೆ ಎಂಡಿ ಚಂದನ ಶಿರಗಾಂವಕರ ಉದ್ಘಾಟಿಸುವರು. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತಜ್ಞ ಡಾ.ಬಿ.ಎನ್ ಅರವಿಂದ ಕುಮಾರ ಅವರು ಅಧಿಕ ಇಳುವರಿಗಾಗಿ ನ್ಯಾನೋ ಟೆಕ್ನಾಲಜಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾವಯವ ಕೃಷಿ ಕುರಿತು ಕೃಷಿ ವಿವಿಯ ತಳಿ ತಜ್ಞ ಸಂಜಯ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧಕ್ಷ ಕಲ್ಲಪ್ಪ ಮಗೆನ್ನವರ, ಜಿಪಂ ಮಾಜಿ ಸದಸ್ಯೆ ಪ್ರೇಮಾತಾಯಿ ರಡ್ಡಿ ಮತ್ತಿತರರು ಉಪಸ್ಥಿತಿರಿರುವರು ಎಂದು ಕೃಷಿ ಮೇಳ ರೂವಾರಿ ಗುರುರಾಜ ಮಡಿವಾಳ ತಿಳಿಸಿದ್ದಾರೆ.