ರಾಣೆಬೆನ್ನೂರ

ತುಂತುರು ಮಳೆ ರೈತರಲ್ಲಿ ಹರ್ಷ: ಮುಂಗಾರು ಬಿತ್ತನೆ ಚಟುವಟಿಕೆ ಪ್ರಾರಂಭ

ತುಂತುರು ಮಳೆ ರೈತರಲ್ಲಿ ಹರ್ಷ: ಮುಂಗಾರು ಬಿತ್ತನೆ ಚಟುವಟಿಕೆ  ಪ್ರಾರಂಭ

ರಾಣೇಬೆನ್ನೂರು: ತಾಲ್ಲೂಕಿನಾಧ್ಯಂತ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.ಮಂಗಳವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಬೀಳುತ್ತಿದೆ. ಇದರಿಂದ ರೈತರಲ್ಲಿ ಹರ್ಷ ತಂದಿದೆ. ಮುಂಗಾರು ಬಿತ್ತನೆ 25 ದಿಗಳ ತಡವಾದರೂ ಮತ್ತೆ ಬಿತ್ತನೆ ಚಟುವಟಿಕೆಗಳು ಗರಿಗೆದರಿವೆ. ರೈತರು ರಸ ಗೊಬ್ಬರ ಬೀಜ ಖರೀದಿಸಲು ಮುಂದಾಗಿದ್ದಾರೆ. ಕಳೆದ ಒಂದು ದಿನಗಳಿಂದ ವ್ಯಾಪಾರ ವಹಿವಾಟು ಇಲ್ಲದೇ ರಸಗೊಬ್ಬರ ಬೀಜದ ಅಂಗಡಿಗಳ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿತ್ತು. ಮಳೆಯಾಗಿದ್ದರಿಂದ ರೈತರು ಬೀಜ ಗೊಬ್ಬರ ಖರೀದಿಸಲು ಮುಂದಾಗಿದ್ದರಿಂದ ವ್ಯಾಪಾರಸ್ಥರಿಗೆ ಖುಷಿ ತಂದಿದೆ.ಮೊದಲೇ ಬಿತ್ತಿನೆ ಮಾಡಿದ ಮೆಕ್ಕೆಜೋಳ ಬೀಜಗಳು ಮಳೆ ಕೊರತೆಯಿಂದ ಮೊಳಕೆಯೊಡೆಯದೇ ಹಾನಿಯಾಗಿದೆ. ಇದರಿಂದ ರೈತರಲ್ಲಿ ಬರಗಾಲದ ಛಾಯೆ ಮೂಡಿತ್ತು.

ಈಗ ಮಳೆ ಬೀಳುವ ವಾತಾವಣವಾಗಿದ್ದರಿಂದ ಮತ್ತೆ ಬಿತ್ತನೆ ಮಾಡಲು ರೈತರು ಮುಂದಾಗಿರುವುದು ತಾಲ್ಲೂಕಿನಾಧ್ಯಂತ ಕಂಡು ಬಂದಿದೆ.ಈ ವರ್ಷ ಮುಂಗಾರು 25 ದಿನ ತಡವಾಗಿದೆ. ಈಗ ಮಳೆರಾಯ ಕಣ್ಣುತೆರೆದಿದ್ದರಿಂದ ಮಂಗಳವಾರ ಉತ್ತಮ ಮಳೆಯಾಗಿದೆ. ಕೆರೆಕಟ್ಟೆ, ಹಳ್ಳಕೊಳ್ಳ ತುಂಬಿ ಹರಿಯುವಷ್ಟು ಪ್ರಮಾಣದ ಮಳೆಯಾಗಿಲ್ಲ. ಮುಂದೆ ಉತ್ತಮ ಮಳೆ ಬೀಳಬಹುದು ಎಂಬ ಭರವಸೆಯಿಂದ ದ್ವಿಧಳ ಧಾನ್ಯಗಳಾ ತೊಗರಿ, ಹೆಸರು, ಸೋಯಾಬಿನ್ ಹಾಗೂ ಎಳ್ಳು, ಈರುಳ್ಳಿ, ಶೇಂಗಾ ಮತ್ತು ಮೆಕ್ಕೆಜೋಳವನ್ನು ಬಿತ್ತನೆ ಮಾಡುತ್ತಿದ್ದೇವೆ ಎನ್ನುತ್ತಾರೆ ತಾಲ್ಲೂಕಿನ ಯತ್ತಿನಹಳ್ಳಿ ರೈತರಾದ ಭರಮಡ್ಡಿ ಶಿವಲಿಂಗಪ್ಪ ದೇವರಡ್ಡಿ ಹಾಗೂ ಬಸವರಾಜಪ್ಪ ಚನ್ನಬಸಪ್ಪ ಬಣಕಾರ.ತಾಲ್ಲೂಕಿನ ತುಂಗಭದ್ರಾ ನದಿ ತೀರದ ಪ್ರದೇಶಗಳಾದ ಮೇಡ್ಲೇರಿ, ಕುಪ್ಪೇಲೂರ ಹಾಗೂ ರಾಣೆಬೆನ್ನೂರು  ಮೂರೂ ಹೋಬಳಿ ಗ್ರಾಮಗಳಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಏಕಕಾಲಕ್ಕೆ ರೈತರು ಬಿತ್ತನೆಗೆ ಮುಂದಾಗಿದ್ದರಿಂದ ಟ್ರ್ಯಕ್ಟರ್ ಕೂರಿಗೆಗಳಿಗೆ ಬಾರಿ ಬೇಡಿಕೆ ಹೆಚ್ಚಾಗಿದೆ. ತಾಲ್ಲೂಕಿನ ಬೇಲೂರ, ಹೀಲದಹಳ್ಳಿ, ಉದಗಟ್ಟಿ, ಕುದರಿಹಾಳ, ಹರನಗಿರಿ, ಚಿಕ್ಕಕುರುವತ್ತಿ, ಚೌಡಯ್ಯದಾನಪುರ, ಚಂದಾಪುರ, ಐರಣಿ, ಸೋಮಲಾಪುರ, ನದೀಹರಳಹಳ್ಳಿ, ಮಾಕನೂರು, ಹೊಳೆಆನ್ವೇರಿ, ಕೋಟಿಹಾಳ ಗ್ರಾಮಗಳಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಲು ಭತ್ತದ ಗದ್ದೆಗಳನ್ನು ಕೇಜ್ವ್ಹೀಲ್ನಿಂದ ರೊಳ್ಳಿ ಹೊಡೆದು ಹದಗೊಳಿಸುತ್ತಿದ್ದಾರೆ. ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ನೀರಿನ ಹರವು ಕಡಿಮೆಯಾಗಿದೆ. ನೀರಿನ ಪ್ರಮಾಣ ನೋಡಿಕೊಂಡು ಇದೇ ತಿಂಗಳಲ್ಲಿ ಭತ್ತದ ನಾಟಿ ಮಾಡಲಾಗುವುದು ಎಂದರು.ಜಿಲ್ಲೆಯಾಧ್ಯಂತ ಮುಂಗಾರು ಮಳೆ ಕೊರತೆಯಾಗಿದ್ದರಿಂದ ರೈತರು ತೊಂದರೆ ಅನುಭವಿಸಬಾರದು ಎಂದು ಶಾಸಕ ಪ್ರಕಾಶ ಕೋಳಿವಾಡ ಅವರು ತಮ್ಮ ಸ್ವಂತ ಖಚರ್ಿನಿಂದ ಉಚಿತವಾಗಿ ಮೋಡ ಬಿತ್ತನೆಗೆ ಪರವಾನಿಗೆ ಪಡೆಯಲು ಜೂ.22 ರಂದು ಜಿಲ್ಲಾಧಿಕಾರಿಗಳಿಗೆ ಪಿಕೆಕೆ ಸಂಸ್ಥೆಯಿಂದ ಪತ್ರ ಬರೆದು ಮನವಿ ಮಾಡಿದ್ದರು. ಈಗ ಮಳೆ ಬಿದ್ದಿರುವ ವಾತಾವರಣ ಕಂಡು ಬಂದಿದ್ದಕ್ಕೆ ರೈತರ ಮುಖದಲ್ಲಿ ಮಂದಹಾಸ ಮೂಡಿದ 

ಸುದ್ದಿ ಓದಿ