ಗ್ರಾಪಂ ಉಪಾಧ್ಯಕ್ಷೆಯಾಗಿ ಶಿಲ್ಪಾ ಅವಿರೋಧವಾಗಿ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ : ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಶಿಲ್ಪಾ ಪಕ್ಕಿರಗೌಡ ಗುಡ್ಡನಗೌಡ್ರ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಣಕನಗೌಡ ಪಾಟೀಲ, ವಿಠ್ಠಲ ಮೋತೆನವರ, ಶಿದ್ದು ಆಡಿನ, ರಾಜೇಶ್ ದೊಡ್ಡಮನಿ, ಮಲ್ಲಿಕಾರ್ಜುನ ಪಾಟೀಲ, ಪರಸಪ್ಪ ಬಗಾಡೆ, ಬಸನಗೌಡ ಮೇಗಲಮನಿ, ನಿಂಬನಗೌಡ ಗುಡ್ಡನಗೌಡ್ರ, ನಿಂಗನಗೌಡ ಮೇಲಿನಮನಿ, ಶಿದ್ದಪ್ಪ ವಾಲ್ಮೀಕಿ, ಕರಿಬಸಪ್ಪ ಹಡಪದ, ನಾಗಪ್ಪ ತುಪ್ಪದ, ಮಾರುತಿ ವೆಂಕಣನವರ, ವಿಜಯ ಕಳ್ಳಿಮನಿ, ವಿರುಪಾಕ್ಷಗೌಡ ಪಾಟೀಲ, ಮಂಜುನಾಥ ಮೇಲಿನಮನಿ, ಸೇರಿದಂತೆ ಐದು ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು