ಗುಲಾಪೂರದಲ್ಲಿ ಶೇರು ಬಲವರ್ಧನೆ ಕಾರ್ಯಕ್ರಮ
ಗುಲಾಪೂರ18: ಮೂಡಲಗಿಯ ರೈತ ಉತ್ಪಾದಕ ಕಂಪನಿ ಮೂಡಲಗಿ ಹಾಗೂ ಆರ್ಡಿಎಸ್ ಸಂಸ್ಥೆಯ ಸಹಯೋಗದಲ್ಲಿ ಶೇರು ಬಲವರ್ಧನೆ ಕಾರ್ಯಕ್ರಮವನ್ನು ಗುಲರ್ಾಪೂರ ಗ್ರಾಮದ ಜಗದೀಶ ಹಿರೇಮಠ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್ಡಿಎಸ್ ಸಂಸ್ಥೆಯ ಸಂಯೋಜಕ ರಾಮಪ್ಪಾ ಕರೆಮ್ಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ ರೈತ ಉತ್ಪಾದಕ ಕಂಪನಿಯ ಬಗ್ಗೆ ನೆರವೇರಿದ ರೈತ ಬಾಂಧವರಿಗೆ ಸವಿಸ್ಥಾರವಾದ ಮಾಹಿತಿ ನೀಡುತ್ತಾ ಕಂಪನಿಯಿಂದ ರೈತರಿಗೆ ಆಗುವ ಅನುಕೂಲತೆಗಳ ಬಗ್ಗೆ ತಿಳಿಸಿ, ಸರ್ಕಾರಿದ ಯೋಜನೆಗಳ ಬಗ್ಗೆ ರೈತರಿಗೆ ಮುಟ್ಟುವಂತೆ ಮಾಡಲು ರೈತ ಉತ್ಪಾದಕ ಕಂಪನಿಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶೇರುದಾರರಾಗಲು ಯಾವ ಕಾಗದ ಪತ್ರಗಳನ್ನು ತರಬೇಕು ಎಲ್ಲಿ ತಮ್ಮ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಮನವೊಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೂಡಲಗಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಆನಂದ ಸುಳ್ಳನವರ ಮಾತನಾಡಿ, ಈ ಭಾಗದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ರೈತ ಉತ್ಪಾದಕ ಕಂಪನಿಯನ್ನು ನಮ್ಮ ಗ್ರಾಮಗಳಿಗೆ ನೀಡಿದ್ದು ತುಂಬಾ ಖುಷಿ ತರುವ ವಿಚಾರವಾಗಿದೆ. ಇಂತಹ ಕಂಪನಿಗಳನ್ನು ಮಾಡುವುದರಿಂದ ಮಧ್ಯವತರ್ಿಗಳ ಹಾವಳಿ ತಪ್ಪಿಸಲು ಸಾದ್ಯವಾಗುತ್ತದೆ. ಕಾರಣ ರೈತರಿಂದ ಖರೀದಿಸಿ ನೇರ ಮಾರಾಟ ಮಾಡಲು, ಹಾಗೂ ರೈತರಿಗೆ ಅವಶ್ಯವಿರುವ ವಸ್ತಗಳನ್ನು ನೇರವಾಗಿ ಯೋಗ್ಯ ದರದಲ್ಲಿ ಮುಟ್ಟಿಸುವಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ ಎಂದು ಹೇಳಿದರು.
ಉಪಾಧ್ಯಕ್ಷರಾದ ವೀರಣ್ಣ ಢವಳೇಶ್ವರ, ಲಕ್ಷ್ಮಣ ಗೌರಾಣಿ, ಮಹಾದೇವ ಮರಾಠೆ, ಶಿವಬಸು ಕದಮ, ಗುರಸಿದ್ದಯ್ಯಾ ಜಡಿಮಠ, ಪಿ.ಎಮ್. ಹಿರೇಮಠ, ಒಂಕಾರ ಮರಾಠೆ, ನಾಗಯ್ಯಾ ಜಡಿ ಹಾಗೂ ರೈತರು ಉಪಸ್ಥಿತರಿದ್ದರು.
ವಿಷ್ಣು ದೊಡಮನಿ ನಿರುಪಿಸಿದರು. ಸಂತೋಷ ಗೊಲಬಾವಿ ವಂದಿಸಿದರು