ಸೈನಿಕರ ಸೇವಾ ಕಾರ್ಯವು ಅತ್ಯಂತ ಪವಿತ್ರ : ಕೋಳಿವಾಡ
ರಾಣೇಬೆನ್ನೂರು 8;ಭಾರತ ದೇಶದಲ್ಲಿ ರೈತರು ಮತ್ತು ಸೈನಿಕರ ಸೇವೆ ಯಾರು ಮರೆಯುವಂತಿಲ್ಲ ಅವರ ಸೇವಾ ಕಾರ್ಯವು ಅತ್ಯಂತ ಪವಿತ್ರವಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಸೋಮವಾರ ಜಮ್ಮು-ಕಾಶ್ಮೀರ್ ಗಡಿಯಲ್ಲಿ 21 ವರ್ಷಗಳ ಕಾಲ ಸೈನಿಕನಾಗಿ ಸುಧೀರ್ಘ ಸೇವೆ ಸಲ್ಲಿಸಿ ಸುರಕ್ಷಿತವಾಗಿ ತಾಯಿ ನಾಡಿಗೆ ಮರಳಿದ, ತಾಲೂಕಿನ ಮುಸ್ಟೂರು ಗ್ರಾಮದ ಯೋಧ ಗಂಗಾಧರ.ಎಂ. ಕಮ್ಮಾರ್ ಅವರನ್ನು ನಗರದ ಬಸ್ ಸ್ಟ್ಯಾಂಡ್ ಬಳಿ, ಮಾಲಾರ್ಪಣೆ ಮಾಡಿ ಸ್ವಾಗತಿಸಿದ ಅವರು ಮಾತನಾಡಿದರು.
ರೈತರು ಮತ್ತು ಯೋಧರು ಸದಾಕಾಲ ಸಾರ್ವಜನಿಕರ ಪ್ರೀತಿ ವಿಶ್ವಾಸದ ಜೊತೆಗೆ ಅವರ ಸೇವಾ ಕಾರ್ಯವನ್ನು ಸದಾಕಾಲ ಸ್ಮರಿಸುತ್ತಾರೆ. ಗಂಗಾಧರವರು ತಾಲೂಕಿಗೆ ಹೆಮ್ಮೆಯ ನಾಗರಿಕರಾಗಿದ್ದಾರೆ. ಅವರ ಸೇವೆಗೆ ನಾವು ಯಾವುದೇ ರೀತಿಯ ಸಹಾಯ ಮಾಡಿದರು ಸಾಲಲಾರದು, ತ್ಯಾಗಮನೋಭೂಮಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿ ಬಂದಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು. ನಿವೃತ್ತರಾಗಿ ಬಂದಿರುವ ತಾಲೂಕಿನ ಎಲ್ಲಾ ಸೈನಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಯಾವುದೇ ವಿಳಂಬವಿಲ್ಲದೆ ಅವರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯವನ್ನು ತಾವು ಅತ್ಯಂತ ಶ್ರದ್ಧೆಯಿಂದ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್,ಕ್ಷೇತ್ರ ಶಿಕ್ಷಣಾಧಿಕಾರಿ , ಎಮ್ ಎಚ್ ಪಾಟೀಲ್, ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಯುವ ಮುಖಂಡರಾದ ವಿ. ಎಸ್. ಮಠದ, ಬಸವರಾಜ ಕೊಂಗಿ, ಚಂದ್ರಣ್ಣ ಬೇಡರ್, ಡಾ ಮನೋಜ ಸಾವುಕಾರ್, ಪ್ರಶಾಂತ ರೆಡ್ಡಿ ಎರೇಕುಪ್ಪಿ, ಅಶೋಕ ಗೌಡ ಗಂಗನಗೌಡ್ರ, ಹರಿಹರ ಗೌಡ ಪಾಟೀಲ್ ಎಲ್ಲಪ್ಪ ಓಲೆಕಾರ್, ಬಿ.ಸಿ. ಎಲ್ಲಕ್ಕನವರ್, ಅಣ್ಣಪ್ಪ ಊದುಗಟ್ಟಿ, ವಿಶಾಲ್ ತಹಶೀಲ್ದಾರ್, ಹಾಗೂ ತಾಲೂಕಾ ಆಡಳಿತದ ಅಶೋಕ್ ಅರಳೇಶ್ವರ, ಪೋಲಿಸ್ ಇಲಾಖೆಯ, ವಿನಾಯಕ್ ಮುಸ್ಟೂರು ನಾಯಕ್ ಚಂದ್ರಣ್ಣ ಮೇಗಳಮನಿ, ಗುರಣ್ಣ ಉಪ್ಪಿನ, ರಾಮನಗೌಡ್ರ, ನಾಗರಾಜ್ ಗುಡಿಯವರ್ ಸೇರಿದಂತೆ ಮತ್ತಿತರಗಣ್ಯರು ಸಂಘ ಸಂಸ್ಥೆಗಳ ಮುಖಂಡರು, ಪಾಲ್ಗೊಂಡು ನಿವೃತ್ತ ಯೋಧ ಗಂಗಾಧರ ಕಮ್ಮಾರ್ ಅವರನ್ನು ಸ್ವಾಗತಿಸಿ, ಮೆರವಣಿಗೆ ನಡೆಸಿ ದೇಶಾಭಿಮಾನವನ್ನು ಮೆರೆದರು. ಬಾಕ್ಸ್:- ದೇಶ ಸೇವೆ ಮಾಡುವ ಪುಣ್ಯದ ಕೆಲಸ ಎಲ್ಲರಿಗೂ ಸಿಗುವುದಿಲ್ಲ ಸಿಕ್ಕವರು ತುಂಬಾ ಅದೃಷ್ಟಶಾಲಿಗಳು. ಸೇವಿಗೆ ಸೇರಿ 21 ವರ್ಷಗಳು ಪೂರ್ಣ ಗೊಂಡಿವೆ. ತಮ್ಮ ಅವಧಿಯಲ್ಲಿ ಅಸ್ಸಾಂ, ತ್ರಿಪುರಾ, ಪಾಕಿಸ್ತಾನ್, ಬಾಂಗ್ಲಾದೇಶ, ರಾಜಸ್ಥಾನ್, ಪಶ್ಚಿಮ್ ಬೆಂಗಾಲ್, ಪಂಜಾಬ್ ಸೇರಿ ಜಮ್ಮು ಕಾಶ್ಮೀರ ಗಡಿ ಪ್ರದೇಶದಲ್ಲಿ ಸೇವೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ದೇಶದ ಯೋಧರಿಗೆ ಅನೇಕ ಕಷ್ಟ ಕಾರ್ಪಣ್ಯಗಳು ಬಂದೂದಗಿದವು, ಆದರೆ ಯಾವುದಕ್ಕೂ ಹಿಂದೆಯೇ ಸರಿಯುವ ಪ್ರಮೆಯೇ ಬರಲಾರದು, ಅಂತಿಮ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ್ದೇವೆ. ಮನೆಗೊಬ್ಬರಂತೆ ಸೈನಿಕ ಸೇವೆಗೆ ಸನ್ನದ್ಧರಾಗಬೇಕಾದರೆ ಇಂದಿನ ಅಗತ್ಯವಿದೆ ಎಂದು ಪ್ರಸ್ತುತ ಸಂದರ್ಭವನ್ನು ವಿವರಿಸಿದ ಗಂಗಾಧರ್ ಸೇವೆ ಗೆ ಸೇರುವುದೇ ಅದೃಷ್ಟವಾಗಿದೆ.- ಗಂಗಾಧರ ಕಮ್ಮಾರ್ ನಿವೃತ್ತ ಸೈನಿಕ, ಮುಸ್ಟೂರು.