ಕಜ್ಜರಿ ಗ್ರಾಪಂಗೆ ಅಧ್ಯಕ್ಷರಾಗಿ ಗೀತಾ ಮಡಿವಾಳರ ಆಯ್ಕೆ
ಕಜ್ಜರಿ ಗ್ರಾಪಂಗೆ ಅಧ್ಯಕ್ಷರಾಗಿ ಗೀತಾ ಮಡಿವಾಳರ ಆಯ್ಕೆ
ರಾಣೆಬೆನ್ನೂರ 07: ತಾಲೂಕಿನ ಕಜ್ಜರಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಹನುಮನಮಟ್ಟಿಯ ಗ್ರಾಪಂ ಸದಸ್ಯೆ ಗೀತಾ ರಮೇಶ ಮಡಿವಾಳರ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ತಾಪಂ ಇಓ ಹಾಗೂ ಚುನಾವಣಾ ಅಧಿಕಾರಿ ಪರಮೇಶ ಘೋಷಿಸಿದರು. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗೀತಾ ಅವರ ಒಂದೇ ನಾಮಪತ್ರ ಬಂದಿದ್ದರಿಂದ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಗ್ರಾಪಂ ಉಪಾಧ್ಯಕ್ಷೆ ಸಾವಿತ್ರವ್ವ ಲಮಾಣಿ, ಪಿಡಿಓ ಪ್ರಕಾಶ ಸುಂಕಾಪುರ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಮತ್ತಿತರರು ಇದ್ದರು.