ಯರಗಟ್ಟಿ

ಶಾಲಾ ವಿಕಲಚೇತನ ಮಕ್ಕಳ ತಪಾಸಣೆ: ಜಾಗೃತಿ ಶಿಬಿರ

ಶಾಲಾ ವಿಕಲಚೇತನ ಮಕ್ಕಳ ತಪಾಸಣೆ: ಜಾಗೃತಿ ಶಿಬಿರ

ಯರಗಟ್ಟಿ 05: ಸತ್ತೀಗೇರಿ, ಶಿವಾಪೂರ, ಯರಗಟ್ಟಿ, ತಲ್ಲೂರು, ಯರಝವರ್ಿಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ  ದೈಹಿಕ, ಮಾನಸಿಕ, ಸೆಲೆಬ್ರಲ್ ಪಾಲ್ಸಿ ಸೇರಿದಂತೆ ಆಯ್ದ ಹಲವು ವಿಕಲತೆಗಳನ್ನುಳ್ಳ  ಮಕ್ಕಳಿಗೆ ಯರಗಟ್ಟಿ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಮಾದರಿ ಕನ್ನಡ ಶಾಲೆಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ/ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಉಚಿತವಾಗಿ ಶಾಲಾ ವಿಕಲಚೇತನ ಮಕ್ಕಳ ತಪಾಸಣೆ ಹಾಗೂ ಜಾಗೃತಿ ಶಿಬಿರವನ್ನು ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್. ಬ್ಯಾಳಿಯವರ ಮಾರ್ಗದರ್ಶದಂತೆ ಯರಗಟ್ಟಿ ವಲಯದ ಉಸ್ತುವಾರಿ ವಹಿಸಿರುವ ವಿಕಲಚೇತನ ಮಕ್ಕಳ ಶಿಕ್ಷಣದ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳರ ನೇತೃತ್ವದಲ್ಲಿ ಸಂಘಟಿಸಲಾಗಿತ್ತು.

ಸರ್ಕಾರಿ ಮೆಟ್ರಿಕ್ಪೂರ್ವ ಬಾಲಕಿಯರ ವಸತಿ ನಿಲಯದ ಮೇಲಿಚಾರಕಿ ಆಶಾ ಎಸ್ ಪರೀಟ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ವೈ. ಬಿ. ಕಡಕೋಳ ಸ್ವಾಗತಿಸಿದರು, ಸಸಿಗೆ ನೀರುಣಿಸುವ ಮೂಲಕ ಪಟ್ಟಣ ಪಂಚಾಯತಿ ಅಧ್ಯಕ್ಷ ಎಸ್.ಎಂ.ಪಟ್ಟಣಶೆಟ್ಟಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್. ಬ್ಯಾಳಿ ಜಂಟಿಯಾಗಿ ಉದ್ಘಾಟಿಸಿದರು.

ಜಿಲ್ಲಾ ಪುನರ್ವಸತಿ ಕೇಂದ್ರದ ಪ್ರಾಣೇಶ ನರಸಿಂಹರಾವ್ ಅವರು ಸಕರ್ಾರದ ಆದೇಶದಂತೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳ ಅನುಷ್ಠಾನದ ಮೂಲಕ ಸವದತ್ತಿಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಾವಿಂದು ವಿಕಲಚೇತನ ಮಕ್ಕಳಿಗೆ ಉಚಿತ ತಪಾಸಣೆ ಕಾರ್ಯ ಕೈಗೊಂಡಿದ್ದೇವೆ. ನಮ್ಮ ಉದ್ದೇಶ ಕೇವಲ ತಪಾಸಣೆಯಷ್ಟೇ ಅಲ್ಲ ಪಾಲಕರಿಗೆ ತಿಳುವಳಿಕೆ ನೀಡುವುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದವರು ಹಮ್ಮಿಕೊಳ್ಳುವ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಜೊತೆಗೆ ಪಾಲಕರೊಂದಿಗೆ ಸಂವಾದ ನಡೆಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ ಹಿರೇಮಠ ಮಾತನಾಡುತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥಯು ಭಾರತದಲ್ಲಿ ನೆಲೆಗೊಂಡಿರುವ ಮಾನವ ಜೀವನ ಮತ್ತು ಆರೋಗ್ಯವನ್ನು ರಕ್ಷಿಸಲು ಸ್ವಯಂ ಪೇರಿತ ಸಂಸ್ಥೆಯಾಗಿದೆ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್. ಬ್ಯಾಳಿಯವರು ಮಾತನಾಡುತ್ತ ಸರ್ವರಿಗೂ ಶಿಕ್ಷಣ ಎಂಬುದು ಸಂವಿಧಾನಬದ್ಧ ಹಕ್ಕು ಅದರಲ್ಲಿ ಸಮನ್ವಯ ಶಿಕ್ಷಣ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡುವುದಾಗಿದೆ. ಈ ದಿಸೆಯಲ್ಲಿ ವಿಕಲಚೇತನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಅವರ ಜೊತೆಗೆ ಪಂಚಾಯತಿ ಮಟ್ಟದಲ್ಲಿ ವ್ಹಿ. ಆರ್. ಡಬ್ಲುರವರು ಕೂಡ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಯುಡಿಐಡಿ ಕಾರ್ಡ ಸಲುವಾಗಿ ಎಲ್ಲರೂ ಕೈ ಜೋಡಿಸುವ ಮೂಲಕ ಮಕ್ಕಳಿಗೆ ಅವುಗಳ ಸೌಲಭ್ಯವನ್ನು ದೊರಕಿಸುವ ಜೊತೆಗೆ  ನಮ್ಮ ತಾಲೂಕಿನಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದವರ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರ ಜರುಗುತ್ತಿದ್ದು ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಿರಿ. ವಿಕಲಚೇತನ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳನ್ನು ನಾವೆಲ್ಲರೂ ಸೇರಿ ಕೊಡಿಸುವ ಪ್ರಯತ್ನ ಕೈಗೊಳ್ಳೋಣ. ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ಈ ಸಂಸ್ಥೆಗೆ ಸಂಬಂಧಿಸಿದ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಎಸ್. ಎಂ. ಪಟ್ಟಣಶೆಟ್ಟಿ ಮಾತನಾಡುತ್ತ ಬಿ. ಎನ್. ಬ್ಯಾಳಿಯವರು ತಮ್ಮ ಸ್ವಪ್ರತಿಭೆಯ ಮೂಲಕ ವಿಕಲತೆಯನ್ನು ಮೆಟ್ಟಿನಿಂತು ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಇಲಾಖೆಯ ಸೇವೆಯನ್ನು ಮುಂಚೂಣಿಯಲ್ಲಿ ತಂದುಕೊಂಡು ಮಾಡುತ್ತಿರುವುದು ನಮಗೆಲ್ಲ ಜ್ವಲಂತ ನಿದರ್ಶನ. ನಮ್ಮ ಶಾಲೆಯಲ್ಲಿ ಇಂತಹ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಿರಿ ಸದಾ ನಾವು ತಮ್ಮ ಸೇವೆಗೆ ಸಿದ್ದರಿದ್ದೇವೆ. ಎಲ್ಲ ಪಾಲಕರೂ ಕೂಡ ತಮ್ಮ ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ ಮಾಡಿಸುವಲ್ಲಿ ಶಿಕ್ಷಕರಿಗೆ ಹಾಗೂ ವ್ಹಿಆರ್ಡಬ್ಲುರವರಿಗೆ ಸಹಕರಿಸುವ ಮೂಲಕ ಮಕ್ಕಳಿಗೆ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಳ್ಳಿರಿ ಎಂದು ಕರೆ ನೀಡಿದರು. 

ಸರಕಾರಿ ಮಾದರಿ ಶಾಲೆಯ ವತಿಯಿಂದ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿಯವರನ್ನು ಹಾಗೂ ಹಿರಿಯರೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಪ್ರಾಣೇಶ ಅವರನ್ನು ವಿಕಲಚೇತನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ವತಿಯಿಂದ ಗೌರವಿಸಲಾಯಿತು.

ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಸ.ಮಾ.ಕ.ಶಾಲೆ ಯರಗಟ್ಟಿಯ ಮುಖ್ಯೋಪಾಧ್ಯಾಯರಾದ ಎ.ಎ.ಮಕ್ತುಂನವರ. ಫಿಜಿಯೋಥೆರಫಿಸ್ಟ ಡಾ. ಪ್ರೇಮಾ ಮಲ್ಲೂರ, ಸವದತ್ತಿ ತಾಲೂಕಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಡಾ. ಬಿ. ಕೆ. ಪಡೆಪ್ಪನವರ. ಎಸ್. ಸಿ. ಪಾಶ್ಚಾಪುರ, ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ ಮುಳ್ಳುರ, ಎಂ. ಎಂ. ಮಲಕನ್ನವರ, ವಸಂತ ಬಡಿಗೇರ, ವ್ಹಿ. ಆರ್. ಡಬ್ಲುಗಳಾದ ಎ. ಜಿ. ದೇವರಮನಿ, ಬಿ. ಎಸ್. ಹಳೇಮನಿ, ಸಿದ್ದಾರೂಢ ಹೂಗಾರ, ದುರಗಪ್ಪ ಭಜಂತ್ರಿ. ಗಣಕ ಯಂತ್ರ ನಿವರ್ಾಹಕ ಮಲ್ಲಿಕಾಜರ್ುನ ಹೂಲಿ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಯರಗಟ್ಟಿ ವಲಯದ ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ವ್ಹಿ.ಆರ್.ಡಬ್ಲುಗಳು. ಸಂಪನ್ಮೂಲ ವ್ಯಕ್ತಿಗಳು ಪಾಲಕರು ಉಪಸ್ಥಿತರಿದ್ದರು. ಮಕ್ಕಳ ತಪಾಸಣೆ ಜರುಗಿತು. ಜೊತೆಗೆ ಪ್ರಾಣೇಶ ಹಾಗೂ ಡಾ.ಪ್ರೇಮಾ ಮಲ್ಲೂರ ಸೂಕ್ತ ಸಲಹೆಗಳನ್ನು ಪಾಲಕರಿಗೆ ನೀಡಿದರು. ಶಿಕ್ಷಕರಾದ ಎಸ್.ಬಿ. ಪಾಣಿಶೆಟ್ಟಿ ನಿರೂಪಿಸಿದರು. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಎಸ್.ಬಿ.ಬೆಟ್ಟದ ವಂದಿಸಿದರ 

ಸುದ್ದಿ ಓದಿ